ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2024ರ ವೇಳೆಗೆ ಅಯೋಧ್ಯೆ ರಾಮಮಂದಿರ ಕಾಮಗಾರಿ ಪೂರ್ಣ

|
Google Oneindia Kannada News

ಲಕ್ನೋ, ಆಗಸ್ಟ್‌ 5: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿ ಎರಡು ವರ್ಷಗಳ ನಂತರ, ನಿರ್ಮಾಣ ಸ್ಥಳದಲ್ಲಿ ಇಂಜಿನಿಯರ್‌ಗಳ ಪ್ರಕಾರ 40 ಪ್ರತಿಶತದಷ್ಟು ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ದೇವಾಲಯದ ಮೊದಲ ಮಹಡಿ 2024 ರ ಆರಂಭದಲ್ಲಿ ಸಿದ್ಧವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಇದು ಸ್ತಂಭ ನಿರ್ಮಾಣವಾಗಿದ್ದು, ಆ ಕಾಮಗಾರಿ ವೇಗವಾಗಿ ಪ್ರಗತಿಯಲ್ಲಿದೆ. ನಾವು ಏಕಕಾಲದಲ್ಲಿ 'ಗರ್ಭ ಗೃಹ' ಅಥವಾ ಗರ್ಭಗುಡಿ ಪ್ರದೇಶದಿಂದ ದೇವಾಲಯದ ನಿರ್ಮಾಣವನ್ನು ಪ್ರಾರಂಭಿಸಿದ್ದೇವೆ. ದೇವಾಲಯದ ಗೋಡೆಗಳಿಗೆ ರಾಜಸ್ಥಾನದ ಗುಲಾಬಿ ಮರಳುಗಲ್ಲನ್ನು ಬಳಸಲಾಗುತ್ತಿದೆ ಎಂದು ರಾಮ ಜನ್ಮಭೂಮಿ ಟ್ರಸ್ಟ್‌ನಿಂದ ನೇಮಕಗೊಂಡ 5 ಮೇಲ್ವಿಚಾರಣಾ ಮುಖ್ಯ ಎಂಜಿನಿಯರ್‌ಗಳಲ್ಲಿ ಒಬ್ಬರಾದ ಜಗದೀಶ್ ಎಂದು ಮಾಹಿತಿ ನೀಡಿದ್ದಾರೆ.

ಇಂದು ರಾಮಮಂದಿರ ನಿರ್ಮಾಣ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಇಂಜಿನಿಯರ್ ಉತ್ಪಾಲ್ ಹರ್ಷ ವ್ಯಕ್ತಪಡಿಸಿದ್ದಾರೆ. ಈ ವರ್ಷದ ಜೂನ್‌ನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 'ಗರ್ಭ ಗೃಹ' ಅಥವಾ ದೇವಾಲಯದ ಗರ್ಭಗುಡಿಯ ಅಡಿಪಾಯವನ್ನು ಹಾಕುವ ಸಮಾರಂಭದಲ್ಲಿ ಮೊದಲ ಕೆತ್ತನೆಯ ಕಲ್ಲನ್ನು ಇರಿಸುವ ಮೂಲಕ ಭಾಗವಹಿಸಿದ್ದರು.

Ayodhya Ram temple construction completed by 2024: Engineers

ನಿರ್ಣಾಯಕ 2024ರ ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಗರ್ಭಗುಡಿ ಭಕ್ತರಿಗೆ ತೆರೆಯುತ್ತದೆ. ಅಲ್ಲಿ ಬಿಜೆಪಿ ರಾಜಕೀಯ ಲಾಭವನ್ನು ನಿರೀಕ್ಷಿಸುತ್ತದೆ ಎನ್ನಲಾಗಿದೆ. ಇದಕ್ಕೆ 500 ವರ್ಷಗಳ ಕಾಲ ಹೋರಾಟವಿತ್ತು. ಆ ಹೋರಾಟ ಈಗ ಮುಕ್ತಾಯದತ್ತ ಸಾಗುತ್ತಿದೆ. ಇದು ಪ್ರತಿ ಭಾರತೀಯನ ಹೆಮ್ಮೆಯ ಕ್ಷಣ. ಆಕ್ರಮಣಕಾರರು ನಮ್ಮ ಸಂಸ್ಕೃತಿಯ ಮೇಲೆ ದಾಳಿ ಮಾಡಿದರು. ಆದರೆ ಅಂತಿಮವಾಗಿ ಭಾರತ ಗೆದ್ದಿದೆ ಎಂದು ಮುಖ್ಯಮಂತ್ರಿ ಯೋಗಿ ಹೇಳಿದ್ದರು.

Ayodhya Ram temple construction completed by 2024: Engineers

ದೇವಾಲಯದ ನಿರ್ಮಾಣದ ಉಸ್ತುವಾರಿ ಹೊತ್ತ ರಾಮಜನ್ಮಭೂಮಿ ಟ್ರಸ್ಟ್ ಪ್ರಕಾರ ರಾಜಸ್ಥಾನದ ಮಕ್ರಾನಾ ಬೆಟ್ಟಗಳಿಂದ ಬಿಳಿ ಅಮೃತಶಿಲೆಗಳನ್ನು ಗರ್ಭಗುಡಿಯಲ್ಲಿ ಬಳಸಲಾಗುವುದು ಎಂದು ಹೇಳಿದೆ. ದೇವಾಲಯದ ಯೋಜನೆಗೆ 8 ರಿಂದ 9 ಲಕ್ಷ ಕ್ಯೂಬಿಕ್‌ ಅಡಿ ಕೆತ್ತಿದ ಮರಳುಗಲ್ಲು, 6.37 ಲಕ್ಷ ಕ್ಯೂಬಿಕ್‌ ಅಡಿ ಕೆತ್ತಿದ ಗ್ರಾನೈಟ್, 4.70 ಲಕ್ಷ ಕ್ಯೂಬಿಕ್‌ ಅಡಿ ಕೆತ್ತಿದ ಗುಲಾಬಿ ಮರಳುಗಲ್ಲು ಮತ್ತು 13,300 ಕ್ಯೂಬಿಕ್‌ ಅಡಿ ಮಕ್ರಾನ ಬಿಳಿ ಕೆತ್ತಿದ ಅಮೃತಶಿಲೆಯನ್ನು ದೇವಾಲಯದ ಯೋಜನೆಗೆ ಬಳಸಲಾಗುವುದು ಎಂದು ದೇವಾಲಯದ ಟ್ರಸ್ಟ್ ತಿಳಿಸಿದೆ.

Ayodhya Ram temple construction completed by 2024: Engineers

ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 2020 ರಲ್ಲಿ ನಿರ್ಮಾಣ ಪ್ರಾರಂಭವಾದ ನಂತರ 'ಭೂಮಿ ಪೂಜೆ' ಅಥವಾ ದೇವಾಲಯದ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿದ್ದರು.

English summary
Two years after the foundation stone was laid for the construction of the Ram temple in Ayodhya, 40 percent of the temple construction is complete, according to engineers at the construction site. The first floor of the temple is expected to be ready by early 2024.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X