ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆಯ ವಿವಾದಿತ ಭೂಮಿಯನ್ನು ಹಿಂದುಗಳಿಗೆ ಬಿಟ್ಟುಕೊಡಿ: ಮುಸ್ಲಿಂ ನಾಯಕ

|
Google Oneindia Kannada News

ಲಕ್ನೋ, ಅಕ್ಟೋಬರ್ 11: ದೇಶದಲ್ಲಿ ಶಾಂತಿಯನ್ನು ಕಾಪಾಡುವ ಸಲುವಾಗಿ ಮುಸ್ಲಿಮರು ಅಯೋಧ್ಯೆಯ ವಿವಾದಿತ ಭೂಮಿಯನ್ನು ಹಿಂದುಗಳಿಗೆ ಬಿಟ್ಟುಕೊಡಬೇಕು ಎಂದು ಮುಸ್ಲಿಂ ನಾಯಕರೊಬ್ಬರು ಹೇಳಿದ್ದಾರೆ.

ಬಾಬ್ರಿ ಮಸೀದಿ ಹಕ್ಕನ್ನು ಪ್ರತಿಪಾದಿಸಲು ದಾಖಲೆ ನೀಡಿ: ಸುಪ್ರೀಂಬಾಬ್ರಿ ಮಸೀದಿ ಹಕ್ಕನ್ನು ಪ್ರತಿಪಾದಿಸಲು ದಾಖಲೆ ನೀಡಿ: ಸುಪ್ರೀಂ

ಅಕ್ಟೋಬರ್ 18 ರಂದು ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಗಡುವು ನೀಡಿದ್ದು, ತೀರ್ಪಿನ ದಿನಾಂಕ ಬಹುಶಃ ಅಂದೇ ನಿರ್ಧಾರವಾಗಲಿದೆ.

ಅಯೋಧ್ಯೆ ಪ್ರಕರಣ ಮುಕ್ತಾಯಕ್ಕೆ ದಿನಾಂಕ ನಿಗದಿ ಪಡಿಸಿದ ಸುಪ್ರೀಂಅಯೋಧ್ಯೆ ಪ್ರಕರಣ ಮುಕ್ತಾಯಕ್ಕೆ ದಿನಾಂಕ ನಿಗದಿ ಪಡಿಸಿದ ಸುಪ್ರೀಂ

ಈ ಹಿನ್ನೆಲೆಯಲ್ಲಿ ಮಾತನಾಡಿದ ಅಲಿಗಢ್ ವಿಶ್ವವಿದ್ಯಾಲಯದ(ಎಎಂಯು) ಮಾಜಿ ಉಪಕುಲಪತಿ ಲೆ.ಜ.(ನಿ.) ಜಮೀರ್ ಉದ್ದಿನ್ ಶಾ, "ಒಂದೊಮ್ಮೆ ಸುಪ್ರೀಂ ಕೋರ್ಟ್ ತೀರ್ಪು ಮುಸ್ಲಿಮರ ಪರವಾಗಿ ಬಂದರೆ ಅವರು ವಿವಾದಿತ ಭೂಮಿಯನ್ನು ಹಿಂದು ಬಾಂಧವರಿಗೆ ಉಡುಗೊರೆ ಎಂದು ಬಿಟ್ಟುಕೊಡುವುದು ಉತ್ತಮ. ಅದರಿಂದ ದೇಶದಲ್ಲಿ ಶಾಂತಿ ನೆಲೆಸುತ್ತದೆ. ಈ ಸಮಸ್ಯೆಗೆ ಒಂದು ಪರಿಹಾರ ಬೇಕೇ ಬೇಕು. ಇಲ್ಲವೆಂದರೆ ಈ ಹೋರಾಟ ಎಂದಿಗೂ ಅಂತ್ಯವಾಗುವುದಿಲ್ಲ" ಎಂದರು.

Ayodhya Case: Muslims Should Give Disputed Land To Hindus Says Muslim Leader

ಈ ವಿಚಾರದಲ್ಲಿ ನ್ಯಾಯಾಲಯವನ್ನು ಹೊರಗಿಟ್ಟು ಸಂಧಾನದ ಮೂಲಕ ಎಲ್ಲವನ್ನೂ ಬಗೆಹರಿಸಿಕೊಳ್ಳುವುದಕ್ಕೆ ನಾನು ಬೆಂಬಲ ಸೂಚಿಸುತ್ತೇನೆ ಎಂದು ಅವರು ಹೇಳಿದರು.

ಅಯೋಧ್ಯಾ ಪ್ರಕರಣ: ಸೌಹಾರ್ದದ ಸಂದೇಶ ನೀಡಿದ ಮುಸ್ಲಿಂ ಅರ್ಜಿದಾರರುಅಯೋಧ್ಯಾ ಪ್ರಕರಣ: ಸೌಹಾರ್ದದ ಸಂದೇಶ ನೀಡಿದ ಮುಸ್ಲಿಂ ಅರ್ಜಿದಾರರು

"ಸುಪ್ರೀಂ ಕೋರ್ಟ್ ತೀರ್ಪು ನೀಡುವುದಾದರೆ ಸ್ಪಷ್ಟವಾಗಿ ನೀಡಬೇಕು. ಅದು ಅಡ್ಡಗೋಡೆಯ ಮೇಲೆ ದೀಪ ಇಡುವಂಥ ತೀರ್ಪು ನೀಡಿದರೆ ಈ ವಿವಾದ ಮತ್ತೆ ಮುಂದುವರಿಯುತ್ತದೆ" ಎಂದು ಅವರು ಹೇಳಿದರು.

English summary
Former Aligarh Muslim University (AMU) Vice-Chancellor Lt General (retired) Zameer Uddin Shah said, Muslims Should Give Disputed Land To Hindus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X