ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಪ್ರೀಂ ತೀರ್ಪಿಗೆ 2010ರ ಅಲಹಾಬಾದ್ ಹೈಕೋರ್ಟ್ ತೀರ್ಪು ಆಧಾರ ಹೇಗೆ?

|
Google Oneindia Kannada News

ನವದೆಹಲಿ, ನವೆಂಬರ್ 09: ಅಯೋಧ್ಯೆಯಲ್ಲಿರುವ ರಾಮಜನ್ಮ ಭೂಮಿ ಆಸ್ತಿ ಹಕ್ಕು ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ ತಿಂಗಳಿನಲ್ಲಿ 40 ದಿನಗಳ ನಡೆದ ಪ್ರತಿದಿನ ವಿಚಾರಣೆ ಅಕ್ಟೋಬರ್ 16ರಂದು ಅಂತ್ಯ ಕಂಡಿದ್ದು, ನವೆಂಬರ್ 09ರಂದು ಬೆಳಗ್ಗೆ ಅಂತಿಮ ತೀರ್ಪು ಬರಲಿದೆ. ಸುಪ್ರೀಂ ತೀರ್ಪಿಗೂ ಮುನ್ನ ಈ ವಿವಾದಕ್ಕೆ ತಾರ್ತಿಕ ಅಂತ್ಯ ನೀಡಿದ್ದ 2010ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶದಲ್ಲಿ ಏನಿತ್ತು? ಅಂದಿನ ಆದೇಶ ಇಂದಿಗೆ ಪ್ರಸ್ತುತವೇ ಎಂಬುದರ ಬಗ್ಗೆ ವಿವರಣೆ ಇಲ್ಲಿದೆ

1992 ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಮಯದಲ್ಲಿ ಒಟ್ಟು 67 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಕೇವಲ 2.7 ಎಕರೆ ಭೂಮಿಯಷ್ಟೇ ವಿವಾದಾತ್ಮಕ ಸ್ಥಳವಾಗಿದ್ದು, ಉಳಿದವು ವಿವಾದಮುಕ್ತವಾಗಿವೆ. ಆದ್ದರಿಂದ ಈ ಭೂಮಿಯ ವಾರಸುದಾರರಾದ ರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್ ಗೆ ಅದನ್ನು ಹಿಂದಿರುಗಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿತ್ತು. 2.77 ಎಕರೆ ವಿಸ್ತೀರ್ಣದ ಭೂಮಿಯನ್ನು ಸದ್ಯಕ್ಕೆ ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರ ಹಾಗು ಭಗವಾನ್ ರಾಮ್ ಲಲ್ಲಾ ವಿರಾಜ್ ಮಾನ್ ಸಮಾನಾಗಿ ಹೊಂದಿವೆ. ವಿವಾದಿತ ತಾಣ ಹಂಚಿಕೆ ಮಾಡಿಕೊಳ್ಳುವಂತೆ ಅಲಹಾಬಾದ್ ಹೈಕೋರ್ಟ್ 2010ರಲ್ಲಿ ಆದೇಶ ನೀಡಿತ್ತು.

ಅಯೋಧ್ಯಾ ಪ್ರಕರಣ Timeline : 1528 ರಿಂದ 2019ರ ತನಕಅಯೋಧ್ಯಾ ಪ್ರಕರಣ Timeline : 1528 ರಿಂದ 2019ರ ತನಕ

ತಲಾ ಮೂರನೇ ಒಂದು ಭಾಗ ಮುಸ್ಲಿಂ ಸಮುದಾಯ, ಹಿಂದೂಗಳಿಗೆ ಹಂಚಿಕೆ. ನಿರ್ಮೋಹಿ ಅಖಾರಕ್ಕೆ ಮುಖ್ಯ ವಿವಾದಿತ ಭಾಗ ಎಂದು ಆದೇಶ ನೀಡಿತ್ತು. ಇದಾದ ಬಳಿಕ ಮೇ 2011ರಲ್ಲಿ 2010ರ ಹೈಕೋರ್ಟ್ ತೀರ್ಪಿನ ವಿರುದ್ಧ ಹಿಂದೂ ಹಾಗೂ ಮುಸ್ಲಿಂ ಸಮುದಾಯದಿಂದ ಮೇಲ್ಮನವಿ ಸಲ್ಲಿಸಲಾಯಿತು. ನಂತರ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತು.

Ayodhya Case: Decoding the Allahabad verdict in 2010

2010ರ ಅಲಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ 14ಕ್ಕೂ ಅಧಿಕ ಮೇಲ್ಮನವಿಯನ್ನು ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆಯನ್ನು ಅಕ್ಟೋಬರ್ ತಿಂಗಳಿನಲ್ಲಿ ಸತತವಾಗಿ 40 ದಿನಗಳ ವಿಚಾರಣೆ ನಡೆಸಲಾಗಿದ್ದು, ಅಂತಿಮ ತೀರ್ಪು ನವೆಂಬರ್ 09ರಂದು ಹೊರ ಬರಲಿದೆ.

ಇದಕ್ಕೂ ಮುನ್ನ ಸೆಪ್ಟೆಂಬರ್ 2010ರಲ್ಲಿ ಜಸ್ಟೀಸ್ ಎಸ್ ಯು ಖಾನ್, ಜಸ್ಟೀಸ್ ಸುಧೀರ್ ಅಗರವಾಲ್ ಹಾಗೂ ಜಸ್ಟೀಸ್ ಡಿವಿ ಶರ್ಮ ಅವರಿದ್ದ ನ್ಯಾಯಪೀಠವು 2:1ರಂತೆ ತೀರ್ಪು ನೀಡಿತ್ತು. ಮೂರನೇ ಒಂದು ಭಾಗ ಸುನ್ನಿ ವಕ್ಫ್ ಬೋರ್ಡ್, ಮೂರನೇ ಒಂದು ಭಾಗ ನಿರ್ಮೋಹಿ ಅಖಾರ ಹಾಗೂ ಮೂರನೆ ಒಂದು ಭಾಗ ರಾಮ್ ಲಲ್ಲಾಗೆ ಹಂಚಿದ್ದರು.

Ayodhya Verdict Live Updates: ಸರ್ವಾನುಮತದ ತೀರ್ಪು ಸಾಧ್ಯತೆAyodhya Verdict Live Updates: ಸರ್ವಾನುಮತದ ತೀರ್ಪು ಸಾಧ್ಯತೆ

ಹಿಂದೂಗಳಿಗೆ ಮಂಜೂರಾಗಿದ್ದ ಹೊರಾಂಗಣ ಪ್ರದೇಶ (67 ಎಕರೆ) ವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಉತ್ತರಪ್ರದೇಶ ಸರ್ಕಾರ. ಬಾಬ್ರಿ ಮಸೀದಿ ನಿರ್ಮಾಣಕ್ಕೂ ಮುನ್ನ ಅಲ್ಲಿ ಹಿಂದೂ ಪೂಜಾ ಮಂದಿರವಿತ್ತೇ ಎಂಬುದರ ಬಗ್ಗೆ ಸುಪ್ರೀಂಕೋರ್ಟ್ ಅಭಿಪ್ರಾಯ ಕೇಳಲಾಗಿತ್ತು. ವಿವಾದಿತ ತಾಣ ಶ್ರೀರಾಮನ ಜನ್ಮಸ್ಥಳವೇ ಎಂಬುದನ್ನು ಪರಿಶೀಲಿಸಲು ಭೂ ಗರ್ಭ ಶಾಸ್ತ್ರಜ್ಞರಿಂದ ಸಮೀಕ್ಷೆ 2003ರಲ್ಲಿ ನಡೆಸಿತು.

ಶ್ರೀರಾಮನ ಜನ್ಮಸ್ಥಳ ಇದೇ ಎನ್ನುವುದಕ್ಕೆ ಮಸೀದಿ ಕೆಳಗೆ ಕುರುಹುಗಳಿವೆ ಎಂದು ಸಮೀಕ್ಷೆ ಹೇಳಿಕೆ. ಇದನ್ನು ಅಲ್ಲಗೆಳೆದ ಮುಸ್ಲಿಮರು. ಹಿಂದೂ ಕಾರ್ಯಕರ್ತ ರಾಮಚಂದ್ರ ದಾಸ್ ಪರಮಹಂಸ ಕೊನೆ ಆಸೆಯಂತೆ ಮಂದಿರ ನಿರ್ಮಾಣ ಎಂದು ವಾಜಪೇಯಿ ಹೇಳಿಕೆ ನೀಡಿದ್ದರು.

ಅಯೋಧ್ಯೆ ತೀರ್ಪು; ಐವರು ನ್ಯಾಯಮೂರ್ತಿಗಳ ಪರಿಚಯಅಯೋಧ್ಯೆ ತೀರ್ಪು; ಐವರು ನ್ಯಾಯಮೂರ್ತಿಗಳ ಪರಿಚಯ

ಈ ಸಮೀಕ್ಷೆ ವರದಿ ಆಧಾರಿಸಿ, 1950 ರಿಂದ 1989ರ ಅವಧಿಯ 5 ಅರ್ಜಿಗಳ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಇದರಲ್ಲಿ ಫೈಜಾಬಾದ್ ಕೋರ್ಟ್ ನಲ್ಲಿ ಸಲ್ಲಿಸಿದ್ದ ಮೂಲ ಸಿವಿಎಲ್ ಕೇಸ್ ಕೂಡಾ ಸೇರಿತ್ತು. 1989ರಲ್ಲಿ ರಾಮ್ ಲಲ್ಲಾ ಅಥವಾ ಬಾಲ ರಾಮನ ಸ್ಥಳ ಇದಾಗಿತ್ತು ಹಾಗೂ 1961ರಲ್ಲಿ ಸುನ್ನಿ ವಕ್ಫ್ ಬೋರ್ಡ್ ಮಾಡಿದ್ದ ಆಸ್ತಿ ಹಕ್ಕು ಪ್ರತಿಪಾದನೆಯನ್ನುಅಲಹಾಬಾದ್ ಹೈಕೋರ್ಟ್ ತಳ್ಳಿ ಹಾಕಿದ್ದು ಇಂದಿನ ಸುಪ್ರೀಂಕೋರ್ಟ್ ತೀರ್ಪಿಗೆ ಮೂಲವಾಗಲಿದೆ.

English summary
The Supreme Court will pronounce its historic verdict on petitions against the 2010 Allahabad High Court order in the politically-sensitive Ramjanmbhoomi-Babri Masjid land dispute case today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X