• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಿಂದು ಧರ್ಮಕ್ಕೆ ಮತಾಂತರವಾದ ಈ ವ್ಯಕ್ತಿ ಕುಂಭಮೇಳದ ಕೇಂದ್ರಬಿಂದು!

|

ಪ್ರಯಾಗರಾಜ್, ಜನವರಿ 18: ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬ ಹಿಂದು ಸಂಸ್ಕೃತಿಗೆ ಮನಸೋತು ಹಿಂದು ಧರ್ಮಕ್ಕೆ ಮತಾಂತರಗೊಂಡು ಕುಂಭ ಮೇಳದಲ್ಲಿ ಪಾಲ್ಗೊಂಡು ಎಲ್ಲರ ಆಕರ್ಷಣೆಯ ಕೇಂದ್ರವಾಗಿದ್ದರು!

ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ಜನವರಿ 15 ರಿಂದ ಆರಂಭವಾಗಿರುವ ಕುಂಭ ಮೇಳ ಮಾರ್ಚ್ 5 ರವರೆಗೆ ನಡೆಯಲಿದೆ. ಲಕ್ಷಾಂತರ ಜನರನ್ನು ಕೈಬೀಸಿ ಕರೆಯುತ್ತಿರುವ ಕುಂಭಮೇಳದಲ್ಲಿ ಸಹಸ್ರಾರು ಸಾಧು ಸಂತರು ಭಾಗವಹಿಸಿದ್ದಾರೆ.

ರಾಮಮಂದಿರ ವಿಚಾರ: ಮೋದಿ ಸರ್ಕಾರದ ಮೇಲೆ ಆರೆಸ್ಸೆಸ್ ಗೂ ಮುನಿಸು?

ಮೈಗೆಲ್ಲ ವಿಭೂತಿ ಮೆತ್ತಿಕೊಂಡು, ಕಾಷಾಯ ವಸ್ತ್ರ ಧರಿಸಿ, ಜಟೆಯನ್ನು ಮೇಲೆ ಕಟ್ಟಿ ಗಂಗಾ-ಯಮುನಾ-ಸರಸ್ವತಿಯರು ಸೇರುವ ಸಂಗಮ ಸ್ಥಳದಲ್ಲಿ ಸ್ನಾನ ಮಾಡುತ್ತಿದ್ದ ದೃಶ್ಯಕ್ಕೆ ಮನಸೋತ ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬರು ಹಿಂದುತ್ವಕ್ಕೆ ಮತಾಂತರಗೊಂಡು ಶರಭಂಗ್ ಗಿರಿ ಎಂದು ಹೆಸರು ಬದಲಿಸಿಕೊಂಡಿದ್ದಾರೆ.

ಹಿಂದುತ್ವಕ್ಕೆ ಮನಸೋತು ಮತಾಂತರ

"ನಾನು ಮೊದಲು ನಾಸ್ತಿಕನಾಗಿದ್ದೆ. ಆದರೆ ಭಾರತಕ್ಕೆ ಪ್ರವಾಸಕ್ಕೆಂದು ಬಂದು ಗುಜರಾತ್ ನ ಗಿರನರ್ ಬೆಟ್ಟದ ಗುರು ದತ್ತಾತ್ರೇಯ ಅವರನ್ನು ಭೇಟಿ ಮಾಡಿದ ಮೇಲೆ ನನ್ನ ಮನಸ್ಸು ಪರಿವರ್ತನೆಯಾಯಿತು. ನಂತರ ನಾನು ಹಿಂದು ಧರ್ಮದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳುತ್ತ, ನನ್ನ ಬದುಕಿನ ದಾರಿಯನ್ನು ಬದಲಿಸಿಕೊಳ್ಳುತ್ತ ಬಂದೆ. ನಾನೀಗ ಆಸ್ತಿಕನಾಗಿದ್ದೇನೆ" ಎನ್ನುತ್ತಾರೆ ಶರಭಂಗ್ ಗಿರಿ.

ಕುಂಭಮೇಳದಲ್ಲಿ ಇತಿಹಾಸ ಸೃಷ್ಟಿ, ಸಂಗಮದಲ್ಲಿ ಮಿಂದೆದ್ದ ತೃತೀಯ ಲಿಂಗಿಗಳು

ಕುಂಭಮೇಳದತ್ತ ಪ್ರಧಾನಿ ನರೇಂದ್ರ ಮೋದಿ

ಗುಜರಾತಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಇಂದು ಕುಂಭಮೇಳಕ್ಕೆ ತೆರಳಲಿದ್ದು, ತಾವು ಪ್ರಯಾಗರಾಜಕ್ಕೆ ಭೇಟಿ ನೀಡುತ್ತಿರುವುದಾಗಿ ಅವರು ಟ್ವೀಟ್ ಮಾಡಿದ್ದಾರೆ. 'ಪ್ರಯಾಗರಾಜದ ಸಹಸ್ರಾರು ಜನರ ಆಧ್ಯಾತ್ಮಿಕ ಹುಡುಕಾಟವಾದ ಕುಂಭಮೇಳದಲ್ಲಿ ನಾನೂ ಭಾಗಿಯಾಗುತ್ತಿದ್ದೇನೆ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಕುಂಭಮೇಳ: ಸಂಭ್ರಮಕ್ಕಿಲ್ಲ ಎಲ್ಲೆ... ಸಾಧು-ಸಂತರಿಗೆ ಸ್ವರ್ಗ ಇಲ್ಲೇ!"

ಇಸ್ರೋ ಕಣ್ಣಲ್ಲಿ ಕುಂಭಮೇಳ

ಕುಂಭಮೇಳ ಉಪಗ್ರಹದ ಕಣ್ಣಲ್ಲಿ ಹೇಗೆ ಕಾಣುತ್ತದೆ ಎಂಬುದನ್ನು ಇಸ್ರೋ ತನ್ನ ಅಧಿಕೃತ ಟ್ವೀಟ್ ಖಾತೆಯಲ್ಲಿ ಟ್ವೀಟಿಸಿದೆ. ಈ ಎರಡು ಚಿತ್ರಗಳು ಕುಂಭಮೇಳದ ಅಗಾಧತೆಗೆ ಸಾಕ್ಷಿಯಾಗಿವೆ.

ಕುಂಭಮೇಳದಲ್ಲಿ ಭಾಗವಹಿಸಿದ ಪ್ರಪ್ರಥಮ ರಾಷ್ಟ್ರಪತಿ!

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಗುರುವಾರ ಕುಂಭಮೇಳದಲ್ಲಿ ಭಾಗವಹಿಸಿದ್ದರು. ಈ ಮೂಲಕ 66 ವರ್ಷಗಳ ನಂತರ ಮೊದಲ ಬಾರಿಗೆ ಕುಂಭಮೇಳದಲ್ಲಿ ಭಾಗವಹಿಸಿದ ಪ್ರಪ್ರಥಮ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. 1953 ರಲ್ಲಿ ಆಗಿನ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಅವರು ಭಾಗವಹಿಸಿದ ನಂತರ ಕುಂಭಮೇಳದಲ್ಲಿ ಯಾವುದೇ ರಾಷ್ಟ್ರಪತಿಯೂ ಭಾಗವಹಿಸಿರಲಿಲ್ಲ.

English summary
An Australian man who converted to Hinduism and participated in Kumbh Mela in Prayagaraj in Uttar Pradesh becomes a centre of attraction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X