• search
 • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಾಲೆಗಳಲ್ಲಿ ಶೌಚಾಲಯ ಸರಿಯಿಲ್ಲ; "ಮುಟ್ಟಿನ ರಜೆ"ಗೆ ಪಟ್ಟುಹಿಡಿದ ಶಿಕ್ಷಕಿಯರು

|
Google Oneindia Kannada News

ಲಕ್ನೋ, ಜುಲೈ 31: ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಸೂಕ್ತ ಶೌಚಾಲಯಗಳಿಲ್ಲ. ಇದ್ದರೂ ಅವುಗಳ ವ್ಯವಸ್ಥೆ ಸರಿಯಿಲ್ಲ ಎಂದು ಆರೋಪಿಸಿರುವ ಮಹಿಳಾ ಶಿಕ್ಷಕರ ಸಂಘವೊಂದು ಇದೀಗ ಅಭಿಯಾನವೊಂದನ್ನು ಆರಂಭಿಸಿದೆ.

ಶಾಲೆಯಲ್ಲಿ ಶೌಚಾಲಯ ವ್ಯವಸ್ಥೆ ಸರಿಯಿಲ್ಲದ ಕಾರಣ ತಿಂಗಳಿಗೆ ಮೂರು ದಿನ "ಮುಟ್ಟಿನ ರಜೆ" ನೀಡುವಂತೆ ಅಭಿಯಾನ ಆರಂಭಿಸಿದೆ.

ಉತ್ತರಪ್ರದೇಶ ಶಿಕ್ಷಣ ಇಲಾಖೆಯ ಶಿಕ್ಷಕಿಯರೇ ಈ ಅಭಿಯಾನದ ನೇತೃತ್ವ ವಹಿಸಿದ್ದಾರೆ. ಉತ್ತರ ಪ್ರದೇಶ ಮಹಿಳಾ ಶಿಕ್ಷಕರ ಸಂಘದ ಸದಸ್ಯರು ಈ ಸಂಬಂಧ ರಾಜ್ಯ ಸಚಿವರನ್ನು ಭೇಟಿ ಮಾಡಿದ್ದು, ಇದೀಗ ಅಭಿಯಾನ ಆರಂಭಿಸಿ ಸಾರ್ವಜನಿಕ ಪ್ರತಿನಿಧಿಗಳನ್ನು ಭೇಟಿ ಮಾಡಿ ತಮ್ಮ ಅಹವಾಲು ಮುಂದಿಡುತ್ತಿದ್ದಾರೆ.

ಹಬ್ಬದೂಟ ಹಾಕಿ, ಆಕ್ರೋಶ ಹೊರ ಹಾಕಿದ ಋತುಮತಿಯರು!ಹಬ್ಬದೂಟ ಹಾಕಿ, ಆಕ್ರೋಶ ಹೊರ ಹಾಕಿದ ಋತುಮತಿಯರು!

ಈ ಸಂಘವನ್ನು ಸುಮಾರು ಆರು ತಿಂಗಳ ಹಿಂದೆ ರೂಪಿಸಲಾಗಿದ್ದು, ರಾಜ್ಯದ 75 ಜಿಲ್ಲೆಗಳ ಪೈಕಿ 50 ಜಿಲ್ಲೆಗಳಲ್ಲಿ ಈ ಸಂಘ ಅಸ್ತಿತ್ವ ಹೊಂದಿದೆ.

Association Of Women Teachers In UP Launched Campaign Seeking 3 Day Period Leave

"ರಾಜ್ಯದಲ್ಲಿ ಬಹುಪಾಲು ಶಾಲೆಗಳಲ್ಲಿ ಸುಮಾರು 200-400 ಮಕ್ಕಳು ಬಳಸುವ ಶಾಲಾ ಶೌಚಾಲಯವನ್ನೇ ಶಿಕ್ಷಕಿಯರು ಬಳಸುತ್ತಿದ್ದಾರೆ. ಶೌಚಾಲಯದಲ್ಲಿ ಶುಚಿತ್ವ ಇಲ್ಲವಾಗಿದೆ. ಇದರಿಂದಾಗಿ ಹಲವು ಶಿಕ್ಷಕಿಯರು ಮೂತ್ರದ ಸೋಂಕಿನಿಂದ ಬಳಲುತ್ತಿದ್ದಾರೆ. ಶೌಚಾಲಯಕ್ಕೆ ಹೋಗುವುದನ್ನು ತಪ್ಪಿಸಲು ನೀರು ಕುಡಿಯುವುದನ್ನು ಕಡಿಮೆ ಮಾಡಿದ್ದಾರೆ. ಇದು ಹಲವು ಆರೋಗ್ಯ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತಿದೆ. ಹೀಗಾಗೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಭಿಯಾನ ಆರಂಭಿಸಿದ್ದೇವೆ" ಎಂದು ಅಭಿಯಾನದ ಕುರಿತು ಸಂಘದ ಅಧ್ಯಕ್ಷೆ ಸುಲೋಚನಾ ಮೌರ್ಯ ವಿವರಿಸಿದ್ದಾರೆ.

ಶಾಲೆಗಳಲ್ಲಿ ಗಲೀಜಾಗಿರುವ ಶೌಚಾಲಯಗಳನ್ನು ಬಳಸಬೇಕು ಇಲ್ಲವೇ ಹೊಲಗಳಿಗೆ ಹೋಗಬೇಕು. ಈ ಎರಡು ಆಯ್ಕೆಗಳಷ್ಟೇ ಶಿಕ್ಷಕಿಯರ ಮುಂದಿದೆ. ಇದು ಅತಿ ಕಷ್ಟಕರವಾಗಿದೆ. ಅದರಲ್ಲೂ ಮುಟ್ಟಿನ ಸಂದರ್ಭದಲ್ಲಿ ಪರಿಸ್ಥಿತಿ ಹೇಳಿಕೊಳ್ಳುವಂತಿಲ್ಲ. ನಮ್ಮಲ್ಲಿ ಕೆಲವರು ದೂರದ ಹಳ್ಳಿಗಳಿಂದ ಶಾಲೆಗೆ ಬರಲು ದಿನ 30-40 ಕಿ.ಮೀ ಕ್ರಮಿಸಬೇಕಾಗುತ್ತದೆ. ಅವರ ಪಾಡೇನು ಎಂದು ಪ್ರಶ್ನಿಸುತ್ತಾರೆ ಸುಲೋಚನಾ.

"ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ ಶೇ 60-70 ಮಹಿಳೆಯರಿದ್ದಾರೆ. ನಮಗೆ ಶಿಕ್ಷಕರ ಸಂಘಗಳಲ್ಲಿ ಸ್ಥಾನಮಾನ ನೀಡಬಹುದಾದರೂ ಇದರಲ್ಲಿ ಪುರುಷರ ಪ್ರಾಬಲ್ಯ ಹೆಚ್ಚಿರುತ್ತದೆ. ಜೊತೆಗೆ ಪುರುಷರು ಮುಟ್ಟಿನ ಸಮಸ್ಯೆಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಆದರೆ ಮಹಿಳೆಯರಾದ ನಮಗೆ ಇದು ಅತಿ ಕಾಳಜಿಯ ವಿಷಯ. ಇದೇ ಕಾರಣ ನಮ್ಮ ವೃತ್ತಿ, ಆರೋಗ್ಯದ ಮೇಲೂ ಪರಿಣಾಮ ಬೀರಬಾರದಲ್ಲವೇ. ಹೀಗಾಗಿ ಅಭಿಯಾನ ಆರಂಭಿಸಿ ಮುಂದಡಿ ಇಟ್ಟಿದ್ದೇವೆ" ಎಂದು ಸಂಘ ರಚಿಸಿರುವ ಹಿಂದಿನ ಅಗತ್ಯವನ್ನು ಒತ್ತಿ ಹೇಳಿದರು ಬಾರಬಂಕಿ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕಿ ಹಾಗೂ ಸಂಘದ ಸದಸ್ಯೆ ಮೌರ್ಯ.

ಡಿಐಎಸ್‌ಇ ಅಂಕಿಅಂಶಗಳ ಪ್ರಕಾರ, 2017-18ರಲ್ಲಿ ಉತ್ತರ ಪ್ರದೇಶ ರಾಜ್ಯದ ಶೇ 95.9ರಷ್ಟು ಶಾಲೆಗಳಲ್ಲಿ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯವಿದೆ. ಇದು ರಾಷ್ಟ್ರೀಯ ಸರಾಸರಿ ಶೇ 93.6ಕ್ಕಿಂತ ಹೆಚ್ಚಾಗಿದೆ. ಆದರೆ ಇದೆಲ್ಲವೂ ಕಾಗದದಲ್ಲಿ ಕಾಣುವುದಕ್ಕಷ್ಟೆ ಎಂದು ಆರೋಪಿಸಿದ್ದಾರೆ ಅವರು.

ರಾಜ್ಯ ಸರ್ಕಾರ ಕಾಯಕಲ್ಪ ಯೋಜನೆ ಆರಂಭಿಸಿದಾಗಿನಿಂದಲೂ ಶೌಚಾಲಯಗಳ ಪರಿಸ್ಥಿತಿ ಬಹಳಷ್ಟು ಸುಧಾರಿಸಿದೆ. ಈ ವರ್ಷದ ಆರಂಭದಲ್ಲಿ ಸರ್ಕಾರಿ ಶಾಲೆಗಳನ್ನು ಸುಧಾರಿಸುವ ಯೋಜನೆಯಲ್ಲಿ ಹೆಚ್ಚಿನ ಶಾಲೆಗಳಲ್ಲಿ ಬಾಲಕಿಯರು ಹಾಗೂ ಬಾಲಕರಿಗಾಗಿ ಪ್ರತ್ಯೇಕ ಶೌಚಾಲಯಗಳನ್ನು ನೀಡಲಾಗಿದೆ. ಆದರೆ ಈ ಶೌಚಾಲಯಗಳು ಅತಿಯಾದ ಬಳಕೆಯಿಂದ ಕೊಳಕಾಗಿರುತ್ತವೆ. ಹಾಗೂ ಅವುಗಳನ್ನು ಸ್ವಚ್ಛಗೊಳಿಸುವುದೇ ವಿರಳವಾಗಿದೆ. ಹೀಗಿದ್ದಾಗ ಯಾವುದೇ ಒಂದು ಯೋಜನೆ ರೂಪಿಸಿ ಪ್ರಯೋಜನವೇನು ಎನ್ನುತ್ತಾರೆ ಬರೇಲಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಹಾಗೂ ಸಂಘದ ಜಿಲ್ಲಾ ವಿಭಾಗದ ಮುಖ್ಯಸ್ಥೆ ರುಚಿ ಸೈನಿ.

ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸುವುದರ ಹೊರತಾಗಿ ಸಾರ್ವಜನಿಕ ಪ್ರತಿನಿಧಿಗಳನ್ನು ಭೇಟಿ ಮಾಡಿ ಅವರ ಮುಂದೆ ಸಮಸ್ಯೆಗಳನ್ನು ಇಡುತ್ತಿರುವುದಾಗಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ ನಂತರ ಪುರುಷರೂ ನಮ್ಮ ಬೆಂಬಲಕ್ಕೆ ಬರುತ್ತಿದ್ದಾರೆ. ಅವರ ಮನೆಯವರಿಗೂ ಇದೇ ಸಮಸ್ಯೆ ಎದುರಾಗುತ್ತಿರುವವರಿಗೆ ಈ ಕಷ್ಟ ಚೆನ್ನಾಗಿ ಅರ್ಥವಾಗಿದೆ. ಇದೀಗ ಅಭಿಯಾನದ ಪರವಾಗಿ ರಾಜಕಾರಣಿಗಳನ್ನು ಭೇಟಿ ಮಾಡಿ ಅವರ ಬೆಂಬಲ ಪಡೆಯುತ್ತಿದ್ದೇವೆ ಎಂದು ವಿವರಿಸುತ್ತಾರೆ.

   Darshan ಮನೆ ಒಡಿಯೋಕೆ ಆಗಿಲ್ಲ ಬಡವರ ಮನೆ ಒಡಿತೀರಾ | Oneindia Kannada

   ಶೌಚಾಲಯಗಳಿಗೆ ವ್ಯವಸ್ಥೆ ಮಾಡಿ, ಇಲ್ಲವೇ ತಿಂಗಳಿಗೆ ಮೂರು ದಿನ ಮುಟ್ಟಿನ ರಜೆಯನ್ನು ನೀಡಿ ಎಂದು ಬೇಡಿಕೆ ಇಟ್ಟಿದ್ದೇವೆ. ಇದರೊಂದಿಗೆ ಶಿಕ್ಷಕಿಯರ ಭದ್ರತೆ ಕುರಿತು ಮುಂದಿನ ಅಭಿಯಾನ ಆರಂಭಿಸುವೆವು ಎಂದು ಸೈನಿ ತಿಳಿಸಿದರು.

   English summary
   An association of women teachers in UP launched campaign seeking 3 day period leave citing bad condition of school toilets,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X