ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

NDAಗೆ ಮತ್ತೊಂದು ಆಘಾತ? ಒಂದು ಕಾಲು ಹೊರಗಿಟ್ಟ ಮಿತ್ರಪಕ್ಷ!

|
Google Oneindia Kannada News

ಲಕ್ನೋ, ಫೆಬ್ರವರಿ 22: ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ರಾಷ್ಟ್ರದ ರಾಜಕಾರಣದಲ್ಲಿ ಏನೆಲ್ಲ ಬದಲಾವಣೆಯಾಗಬಲ್ಲದೋ ದೇವರೇ ಬಲ್ಲ. ಅತ್ತ ಮಹಾರಾಷ್ಟ್ರದಲ್ಲಿ ಕೊನೆಗೂ ಶಿವಸೇನೆ-ಬಿಜೆಪಿ ಒಂದಾಗಿ ಸೀಟು ಹಂಚಿಕೆಯ ಪ್ರಕ್ರಿಯೆ ಮುಗಿಸಿಕೊಂಡೊದ್ದರೆ, ಇತ್ತ ಉತ್ತರ ಪ್ರದೇಶದಲ್ಲಿ ಎನ್ ಡಿಎ ಸದಸ್ಯ ಪಕ್ಷವಾಗಿದ್ದ ಅಪ್ನಾದಳ ಎನ್ ಡಿಎ ಯಿಂದ ಹೊರಹೋಗುವ ಮಾತನ್ನಾಡುತ್ತಿದೆ.

2014 ರ ಲೋಕಸಭಾ ಚುನಾವಣೆಯಲ್ಲಿ ಅಪ್ನಾದಳ ಗೆದ್ದಿದ್ದು ಎರಡೇ ಕ್ಷೇತ್ರಗಳನ್ನಾದರೂ ಪಕ್ಷದ ಅಧ್ಯಕ್ಷ ಅನುಪ್ರಿಯಾ ಪಟೇಲ್ ಕೇಂದ್ರ ಸಚಿವರೂ ಆಗಿದ್ದಾರೆ.

NDA ಯಿಂದ ಈಗಾಗಲೇ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮತ್ತು ಉಪೇಂದ್ರ ಕುಶ್ವಾಹ ಅವರ RLSP ಮುಂತಾದ ಪಕ್ಷಗಳು ಹೊರಬಂದಿವೆ. ಇದೀಗ ಅಪ್ನಾದಳವೂ ಅದೇ ಹಾದಿಯತ್ತ ಹೊರಟಿದೆ.

ಬಿಜೆಪಿ-ಶಿವಸೇನೆ ಸೀಟು ಹಂಚಿಕೆ: ಮೈತ್ರಿ ಪಕ್ಷಕ್ಕೆ ತೀವ್ರ ಬೇಸರ ಬಿಜೆಪಿ-ಶಿವಸೇನೆ ಸೀಟು ಹಂಚಿಕೆ: ಮೈತ್ರಿ ಪಕ್ಷಕ್ಕೆ ತೀವ್ರ ಬೇಸರ

ಉತ್ತರ ಪ್ರದೇಶ ರಾಜಕೀಯದ ಬಗ್ಗೆ ಬೇಸೆತ್ತಿರುವ ಅವರು ಇದೀಗ ಎನ್ ಡಿಎ ಯಿಂದ ಹೊರಬರುವ ಮಾತನ್ನಾಡುತ್ತಿದ್ದಾರೆ. ಹಾಗೊಮ್ಮೆ ಆದಲ್ಲಿ ಎನ್ ಡಿಎ ಪಕ್ಷಕ್ಕೆ ನೈತಿಕ ಬೆಂಬಲ ನೀಡುತ್ತಿದ್ದ ಪಕ್ಷವೊಂದು ಕೂಟದಿಂದ ಹೊರಹೋದಂತಾಗುತ್ತದೆ.

ಬಿಜೆಪಿ ಮೇಲೆ ಮುನಿಸೇಕೆ?

ಬಿಜೆಪಿ ಮೇಲೆ ಮುನಿಸೇಕೆ?

ಎನ್ ಡಿಎ ಮಿತ್ರ ಪಕ್ಷಗಳಾಗಿ ಗುರುತಿಸಿಕೊಂಡಿರುವ ಹಲವು ಪಕ್ಷಗಳು ಹಲವು ಬಾರಿ ಬಿಜೆಪಿ ವಿರುದ್ಧ ಸಿಡಿದೆದ್ದಿದ್ದರೂ ಅಪ್ನಾ ದಳ ಮಾತ್ರ ಎಂದಿಗೂ ಬಿಜೆಪಿ ವಿರುದ್ಧ ಧ್ವನಿ ಎತ್ತಿರಲಿಲ್ಲ. ಆದರೆ ಇದೀಗ ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಾಗ ಅದೂ ಬಿಜೆಪಿ ವಿರುದ್ಧ ಮುನಿಸಿಕೊಂಡಿದೆ. ನಮಗೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಬಗ್ಗೆ ಸಾಕಷ್ಟು ಗೌರವವಿದೆ. ಅವರೇ ಮತ್ತೆ ಪ್ರಧಾನಿಯಾಗಬೇಕು ಎಂದು ನಾವು ಬಯಸುತ್ತೇವೆ. ಆದರೆ ಉತ್ತರ ಪ್ರದೇಶ ಬಿಜೆಪಿ ನಾಯಕರ ವರ್ತನೆ ಬದಲಾಗದಿದ್ದರೆ ನಾವು ಎನ್ ಡಿಎ ಯಲ್ಲಿ ಉಳಿಯುವುದಿಲ್ಲ ಎಂದು ಅಪ್ನಾ ದಳ ಸ್ಪಷ್ಟಪಡಿಸಿದೆ.

ಫೆ.20 ರವರೆಗೆ ಗಡುವು ನೀಡಿದ್ದ ಅಪ್ನಾದಳ

ಫೆ.20 ರವರೆಗೆ ಗಡುವು ನೀಡಿದ್ದ ಅಪ್ನಾದಳ

ಉತ್ತರ ಪ್ರದೇಶ ಬಿಜೆಪಿ ನಾಯಕರ ವರ್ತನೆ ಬದಲಾಗಬೇಕು, ನಮ್ಮ ಕೆಲವು ದೂರು, ಬೇಡಿಕೆಗಳ್ನು ಬಿಜೆಪಿ ನಾಯಕರು ಆಲಿಸಬೇಕು ಎಂದು ಪಟೇಲ್ ಆಗ್ರಹಿಸಿದ್ದರು. ಇಲ್ಲವೆಂದರೆ ನಾವು ನಮ್ಮದೇ ಹಾದಿ ಹುಡುಕಿಕೊಳ್ಳಬೇಕಾಗುತ್ತದೆ ಎಂದು ಫೆ.20 ರವರೆಗೆ ಗಡುವು ಸಹ ನೀಡಿದ್ದರು. ಆದರೆ ಪಟೇಲ್ ಅವರನ್ನು ಮಾತನಾಡಿಸಲು, ಅವರ ಸಮಸ್ಯೆಗಳನ್ನು ಆಲಿಸಲು ಬಿಜೆಪಿ ನಾಯಕರು ಮುಂದೆ ಬಾರದ ಕಾರಣ ಬೇಸರಗೊಂಡ ಅವರು ತಮ್ಮ ಹಾದಿ ನೋಡಿಕೊಳ್ಳುವುದಾಗಿ ಹೇಳಿದ್ದಾರೆ. ಉತ್ತರ ಪ್ರದೇಶದ ಮಿರ್ಜಾಪುರ ಮತ್ತು ಪ್ರತಾಪ್ ಗಢ ಲೋಕಸಭಾ ಕ್ಷೇತ್ರಗಳಲ್ಲಿ ಅಪ್ನಾದಳ 2014 ರಲ್ಲಿ ಗೆಲುವು ಸಾಧಿಸಿತ್ತು.

ಮಹಾರಾಷ್ಟ್ರದಲ್ಲಿ ಲೋಕ ಸೀಟು ಹಂಚಿಕೆ ಅಂತಿಮ: ಬಿಜೆಪಿಗೆ 25, ಶಿವಸೇನೆ 23ಮಹಾರಾಷ್ಟ್ರದಲ್ಲಿ ಲೋಕ ಸೀಟು ಹಂಚಿಕೆ ಅಂತಿಮ: ಬಿಜೆಪಿಗೆ 25, ಶಿವಸೇನೆ 23

ಮೋದಿ ಬಗ್ಗೆ ಬೇಸರವಿಲ್ಲ

ಮೋದಿ ಬಗ್ಗೆ ಬೇಸರವಿಲ್ಲ

ನಾವು ಈಗಲೂ ಎನ್ ಡಿಎ ಭಾಗವಾಗಿಯೇ ಇದ್ದೇವೆ. ಪಕ್ಷದ ಮುಖಂಡರೊಮದಿಗೆ ಸಭೆ ನಡೆಸಿ ನಮ್ಮ ಮುಂದಿನ ಹೆಜ್ಜೆ ಬಗ್ಗೆ ಯೋಚಿಸುತ್ತೇವೆ. ನಮ್ಮ ಮುನಿಸೇನಿದ್ದರೂ ಉತ್ತರ ಪ್ರದೇಶ ಬಿಜೆಪಿ ಮೇಲೆ. ನರೇಮದ್ರ ಮೋದಿ ನಾಯಕತ್ವದ ಬಗ್ಗೆ ಅಲ್ಲ. ಅವರ ಬಗ್ಗೆ ನಮಗೆ ಗೌರವವಿವೆ. ಅವರು ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾಗಬೇಕು ಎಂಬುದು ನಮ್ಮ ಹಾರೈಕೆ ಎಂದು ಅಪ್ನಾದಳ ಹೇಳಿದೆ.

ಎನ್ ಡಿ ಎ ಯಿಂದ ಹೊರಬಂದರೆ ಮುಂದೇನು?

ಎನ್ ಡಿ ಎ ಯಿಂದ ಹೊರಬಂದರೆ ಮುಂದೇನು?

ಎನ್ ಡಿಎಯಿಂದ ಹೊರಬಂದರೆ ಅಪ್ನಾದಳದ ಮುಂದಿನ ದಾರಿ ಏನು? ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಪ್ನಾದಳ, ನಾವು ಬೇರೆ ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಇನ್ನೂ ಯೋಚಿಸಿಲ್ಲ. ಬೇರೆ ಪಕ್ಷದ ಮುಖಂಡರೂ ನಮ್ಮೊಂದಿಗೆ ಈ ಕುರಿತು ಮಾತನಾಡಿಲ್ಲ. ನಾವು ಸ್ವತಂತ್ರವಾಗಿಯೇ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ ಎಂದು ಅಪ್ನಾದಳ ಸ್ಪಷ್ಟಪಡಿಸಿದೆ.

ನಮ್ಮವರೇ ಪಕ್ಷ ಮುಗಿಸಿಹಾಕುತ್ತಿದ್ದಾರೆ : ಮಗನ ಮೇಲೆ ಮುಲಾಯಂ ಆಕ್ರೋಶ ನಮ್ಮವರೇ ಪಕ್ಷ ಮುಗಿಸಿಹಾಕುತ್ತಿದ್ದಾರೆ : ಮಗನ ಮೇಲೆ ಮುಲಾಯಂ ಆಕ್ರೋಶ

ಬಿಜೆಪಿಗೆ ಇತ್ತೀಚಿನ ಸೋಲಿನ ಬಗ್ಗೆ ನೆನಪಿರಲಿ

ಬಿಜೆಪಿಗೆ ಇತ್ತೀಚಿನ ಸೋಲಿನ ಬಗ್ಗೆ ನೆನಪಿರಲಿ

'ಬಿಜೆಪಿ ತನ್ನ ಇತ್ತೀಚಿನ ಸೋಲಿನಿಂದ ಪಾಠ ಕಲಿಯಬೇಕಿತ್ತು. ಎಸ್ಪಿ ಮತ್ತು ಬಿಎಸ್ಪಿ ಮೈತ್ರಿ ನಮಗೆ ಸವಾಲು ಎಂಬುದು ನೆನಪಿರಲಿ. ಮೈತ್ರಿ ಇಲ್ಲದೆ ಈ ಚುನಾವಣೆಯಲ್ಲಿ ಗೆಲ್ಲುವುದು, ಅಧಿಕಾರಕ್ಕೆ ಬರುವುದು ಸುಲಭವಿಲ್ಲ' ಎಂದು ಅದು ಎಚ್ಚರಿಕೆ ಸಹ ನೀಡಿದೆ.

English summary
Lok Sabha Elections 2019: Angry with BJP uttar Pradesh leadership, Apna Dal leader and Union Minister Anupriya Patel has said that her party is now free to choose its own path.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X