• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮರ್ಯಾದಾ ಹತ್ಯೆ: ಮುಸ್ಲಿಂ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳ ಸಜೀವ ದಹನ

|

ಗೋರಖ್‌ಪುರ,ಫೆಬ್ರವರಿ 15: ಮುಸ್ಲಿಂ ಯುವಕನನ್ನು ಪ್ರೀತಿಸಿದಳು ಎನ್ನುವ ಕಾರಣಕ್ಕೆ ಮಗಳನ್ನು ಸಜೀವವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ತಂದೆ, ಸಹೋದರ, ಸೋದರ ಮಾವ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೈಸೂರಿನಲ್ಲಿ ಯುವತಿಯ ನಿಗೂಢ ಸಾವು, ಮರ್ಯಾದಾ ಹತ್ಯೆ ಶಂಕೆಮೈಸೂರಿನಲ್ಲಿ ಯುವತಿಯ ನಿಗೂಢ ಸಾವು, ಮರ್ಯಾದಾ ಹತ್ಯೆ ಶಂಕೆ

ಉತ್ತರ ಪ್ರದೇಶದಲ್ಲೊಂದು ಮರ್ಯಾದಾ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಮುಸ್ಲಿಂ ಯುವಕನನ್ನು ಪ್ರೀತಿಸುತ್ತಿದ್ದ ಯುವತಿಯನ್ನು ಆಕೆಯ ಕುಟುಂಬ ಸದಸ್ಯರೆ ಜೀವಂತವಾಗಿ ಸುಟ್ಟುಹಾಕಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಮಹಿಳೆಯ ತಂದೆ ಕೈಲಾಶ್ ಯಾದವ್, ಸಹೋದರ ಅಜಿತ್ ಯಾದವ್, ಸೋದರ ಮಾವ ಸತ್ಯಪ್ರಕಾಶ್ ಯಾದವ್ ಮತ್ತೊಬ್ಬ ವ್ಯಕ್ತಿ ಸೀತಾರಾಮ್ ಯಾದವ್ ಅವರನ್ನು ಭಾನುವಾರ ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ ಪೆಟ್ರೋಲ್ ಕಂಟೇನರ್ ಮತ್ತು ಮೋಟಾರ್ ಸೈಕಲ್ ಅನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮುಸ್ಲಿಂ ಹುಡುಗನೊಂದಿಗಿನ ಸಂಬಂಧ ಕಡಿದುಕೊಳ್ಳುವಂತೆ ಮಹಿಳೆಗೆ ಕುಟುಂಬಸ್ಥರು ಒತ್ತಡ ಹಾಕಿದ್ದರು. ಆದರೆ ಸಂಬಂಧ ಕಡಿದುಕೊಳ್ಳದ ಯುವತಿಯ ಹತ್ಯೆ ಮಾಡುವಂತೆ ಆಕೆಯ ಕುಟುಂಬ ಕಿಲ್ಲರ್ ವರುಣ್ ತಿವಾರಿಗೆ 1.5 ಲಕ್ಷ ರೂ.ಸೂಪಾರಿ ನೀಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

English summary
In a suspected case of honour killing, a woman was burnt alive by her family members over an inter-faith love affair, police said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X