ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಯಲ್ಲಿ ಬಹುಮತದೊಂದಿಗೆ ಎನ್‌ಡಿಎ ಸರ್ಕಾರ ರಚಿಸಲಿದೆ: ಅಮಿತ್ ಶಾ

|
Google Oneindia Kannada News

ಲಕ್ನೋ, ಜನವರಿ 20: ಮುಂಬರಲಿರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಮತ್ತೊಮ್ಮೆ ಬಹುಮತದೊಂದಿಗೆ ಎನ್‌ಡಿಎ ಸರ್ಕಾರ ರಚಿಸಲಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಕಾರ್ಯತಂತ್ರ ಮತ್ತು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳ ಆಯ್ಕೆ ಕುರಿತ ನಿರ್ಣಾಯಕ ಸಭೆ ಬಳಿಕ ಜೆಪಿ ನಡ್ಡಾ ಅವರು ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಘೋಷಣೆ ಕೂಗಿದರು.

ಅಖಿಲೇಶ್‌ಗೆ ತನ್ನ ಕುಟುಂಬವನ್ನೇ ನಿಭಾಯಿಸಲು ಸಾಧ್ಯವಾಗಿಲ್ಲ: ಬಿಜೆಪಿ ವ್ಯಂಗ್ಯಅಖಿಲೇಶ್‌ಗೆ ತನ್ನ ಕುಟುಂಬವನ್ನೇ ನಿಭಾಯಿಸಲು ಸಾಧ್ಯವಾಗಿಲ್ಲ: ಬಿಜೆಪಿ ವ್ಯಂಗ್ಯ

ಅದೇ ಸಮಯದಲ್ಲಿ ಅಮಿತ್ ಶಾ ಅವರು ಬಿಜೆಪಿ ನಾಯಕತ್ವದಲ್ಲಿ ಮತ್ತೊಮ್ಮೆ ಉತ್ತರ ಪ್ರದೇಶದಲ್ಲಿ ಎನ್‌ಡಿಎ ಸರ್ಕಾರವನ್ನು ಭಾರಿ ಬಹುಮತದೊಂದಿಗೆ ರಚಿಸಲಾಗುವುದು ಎಂದರು.

Amit Shah Says NDA Will Form Govt In UP With Majority

ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಸಭೆಯಲ್ಲದೆ, ಉತ್ತರ ಪ್ರದೇಶದ ಬಿಜೆಪಿಯು ಮಿತ್ರಪಕ್ಷಗಳ ನಾಯಕರ ಜತೆಗೂ ಸಭೆ ನಡೆಸಿತು. ಇದರಲ್ಲಿ ಯೋಗಿ ಆದಿತ್ಯನಾಥ್, ಕೇಶವ್ ಪ್ರಸಾದ್ ಮೌರ್ಯ, ಹಲವು ಕೇಂದ್ರ ಸಚಿವರು ಸ್ವತಂತ್ರ ದೇವ್‌ಸಿಂಗ್, ಅಪ್ನಾ ದಳದ ರಾಷ್ಟ್ರೀಯ ಅಧ್ಯಕ್ಷೆ ಅನುಪ್ರಿಯಾ ಪಟೇಲ್, ನಿಶಾದ್ ರಾಜ್ ಸಭೆಯಲ್ಲಿ ಪಾಲ್ಗೊಂಡಿದ್ದರು.

ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶದ ಜನತೆಯ ಆಶೀರ್ವಾದವು ಎನ್‌ಡಿಎ ಮೇಲಿದೆ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಯುಪಿಯಲ್ಲಿ ಎನ್‌ಡಿಎ ಸಮ್ಮಿಶ್ರ ಸರ್ಕಾರವು ಭಾರಿ ಬಹುಮತದೊಂದಿಗೆ ರಚನೆಯಾಗಲಿದೆ ಎಂದು ಹೇಳಿದರು.

ಜೆಪಿ ನಡ್ಡಾ ಮಾತನಾಡಿ, ಉತ್ತರ ಪ್ರದೇಶದಲ್ಲಿ ಡಬಲ್ ಇಂಜಿನ್ ಸರ್ಕಾರವು ರಾಜ್ಯದ ಅಭಿವೃದ್ಧಿಯಲ್ಲಿ ಹೊಸ ಜಿಗಿತವನ್ನು ಮಾಡಿದೆ, ಯೋಗಿ ಆದಿತ್ಯನಾಥ್ ನೇತೃತ್ವದ ಎನ್‌ಡಿಎ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಚಾಲನೆ ನೀಡಿದೆ.

ಮೋದಿ ಆಶೀರ್ವಾದದಿಂದ ಕಳೆದ ಐದು ವರ್ಷಗಳಲ್ಲಿ ಸಂಪರ್ಕ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದರು.ಉತ್ತರ ಪ್ರದೇಶದಲ್ಲಿ ಬಿಜೆಪಿ ತನ್ನ ಮಿತ್ರಪಕ್ಷಗಳೊಂದಿಗೆ ಚುನಾವಣೆಗೆ ಬರುತ್ತಿದೆ, ಲೋಕಸಭೆ ಚುನಾವಣೆಯಲ್ಲೂ ನಾವೆಲ್ಲರೂ ಒಗ್ಗಟ್ಟಾಗಿದ್ದೆವು, ಈ ವಿಧಾನಸಭಾ ಚುನಾವಣೆಯನ್ನೂ ಒಗ್ಗಟ್ಟಾಗಿ ಎದುರಿಸೋಣ ಎಂದು ಹೇಳಿದರು.
ಬಿಜೆಪಿ, ಅಪ್ನಾ, ನಿಶಾದ್ ಪಕ್ಷವು ಉತ್ತರ ಪ್ರದೇಶದ ಎಲ್ಲಾ 403 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ.

ದೇಶದಲ್ಲಿ ಪ್ರತಿಯೊಬ್ಬ ಬಡವರು ಮತ್ತು ವಂಚಿತ ನಾಗರಿಕರು ಸ್ವಂತ ಮನೆ ಹೊಂದುವ ಕನಸನ್ನು ಮೋದಿ ಈಡೇರಿಸುತ್ತಿದ್ದಾರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಗ್ರಾಮೀಣ ಭಾರತದಲ್ಲಿ ಇದುವರೆಗೆ 1.6 ಕೋಟಿಗೂ ಅಧಿಕ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.

- ಮೊದಲ ಹಂತದಲ್ಲಿ ಫೆಬ್ರವರಿ 10ರಂದು ಮತದಾನ

- ಎರಡನೇ ಹಂತದಲ್ಲಿ ಫೆಬ್ರವರಿ 14ರಂದು ಮತದಾನ

- ಮೂರನೇ ಹಂತದಲ್ಲಿ ಫೆಬ್ರವರಿ 20ರಂದು ಮತದಾನ

- ನಾಲ್ಕನೇ ಹಂತದಲ್ಲಿ ಫೆಬ್ರವರಿ 23ರಂದು ಮತದಾನ

- ಐದನೇ ಹಂತದಲ್ಲಿ ಫೆಬ್ರವರಿ 27ರಂದು ಮತದಾನ

- ಆರನೇ ಹಂತದಲ್ಲಿ ಮಾರ್ಚ್ 3ರಂದು ಮತದಾನ

- ಏಳನೇ ಹಂತದಲ್ಲಿ ಮಾರ್ಚ್ 7ರಂದು ಮತದಾನ

ಉತ್ತರ ಪ್ರದೇಶ ಗದ್ದುಗೆ ಹಿಡಿಯಲು ಪೈಪೋಟಿ:
ದೇಶದಲ್ಲಿ ಅತಿಹೆಚ್ಚು ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಅಧಿಕಾರದ ಗದ್ದುಗೆ ಹಿಡಿಯುವುದಕ್ಕೆ ಬಿಜೆಪಿ, ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಸೇರಿದಂತೆ ಪ್ರಾದೇಶಿಕ ಪಕ್ಷಗಳ ನಡುವೆ ಪೈಪೋಟಿ ನಡೆಯುತ್ತಿದೆ. ಅತಿಹೆಚ್ಚು ಕ್ಷೇತ್ರಗಳನ್ನು ಹೊಂದಿರುವ ರಾಜ್ಯದ ಮತದಾರರ ಮನ ಗೆಲ್ಲುವುದಕ್ಕಾಗಿ ಇತ್ತೀಚಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಲವು ಬಾರಿ ರಾಜ್ಯಕ್ಕೆ ಭೇಟಿ ನೀಡಿ ಸಾಕಷ್ಟು ಯೋಜನೆಗಳಿಗೆ ಚಾಲನೆ ನೀಡಿದ್ದರು.

English summary
Union Home Minister Amit Shah on wednesday held a meeting with the NDA allies of Uttar Pradesh ahead of the assembly polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X