ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕ ಚುನಾವಣೆ: ರಾಹುಲ್ ಗಾಂಧಿಗೆ ಇಂದು ನಿರ್ಣಾಯಕ ದಿನ

|
Google Oneindia Kannada News

Recommended Video

ರಾಹುಲ್ ಗಾಂಧಿಗೆ ಇಂದು ಎದುರಾಗಿದೆ ಮಹಾ ಕಂಟಕ..!? | Oneindia Kannada

ಲಕ್ನೋ, ಏ.22: ಅಮೇಥಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಇಂದು ನಿರ್ಣಾಯಕ ದಿನವಾಗಿದ್ದು, ನಾಮಪತ್ರ ಪರಿಶೀಲನೆ ಇಂದು ನಡೆಯಲಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ನಾಮಪತ್ರ ಸಲ್ಲಿಸಿರುವ ಅಫಿಡೆವಿಟ್ ಗಳು ರಾಹುಲ್ ಗಾಂಧಿ ಭಾರತೀಯ ಪ್ರಜೆಯೋ ಅಥವಾ ಬ್ರಿಟಿಷ್ ನಾಗರಿಕನೋ ಎಂಬ ಪ್ರಶ್ನೆಗಳನ್ನೆತ್ತಿದೆ. ಇದಲ್ಲದೇ ವಿದ್ಯಾರ್ಹತೆ ಕುರಿತು ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿವೆ.

ರಾಹುಲ್ ಗಾಂಧಿ ಪದವಿ ಪ್ರಮಾಣ ಪತ್ರ ಮತ್ತೆ ಚರ್ಚೆಯಲ್ಲಿ; ಆಸಕ್ತಿಕರ ಮಾಹಿತಿ ರಾಹುಲ್ ಗಾಂಧಿ ಪದವಿ ಪ್ರಮಾಣ ಪತ್ರ ಮತ್ತೆ ಚರ್ಚೆಯಲ್ಲಿ; ಆಸಕ್ತಿಕರ ಮಾಹಿತಿ

ಪ್ರಮಾಣಪತ್ರದಲ್ಲಿ ಉಲ್ಲೇಖವಾಗಿರುವ ರೌಲ್ ವಿಂಚಿ ಯಾರು ಎಂದು ಆಕ್ಷೇಪಿಸಿರುವ ಪಕ್ಷೇತರ ಅಭ್ಯರ್ಥಿ ಧ್ರುವ್ ಲಾಲ್ ಮೂಲ ಪ್ರಮಾಣಪತ್ರವನ್ನು ಹಾಜರುಪಡಿಸುವಂತೆ ಒತ್ತಾಯಿಸಿದ್ದಾರೆ.

Amethi returning officer puts scrutiny of Rahul Gandhi’s nomination papers on April 22

ಇದಲ್ಲದೇ 2004ರಲ್ಲಿ ಸಲ್ಲಿಸಿದ್ದ ನಾಮಪತ್ರದಲ್ಲಿ ಬ್ಯಾಕಾಪ್ಸ್ ಎಂಬ ಕಂಪನಿಯಲ್ಲಿ ಷೇರು ಹೊಂದಿದ್ದಾಗಿ ರಾಹುಲ್ ಉಲ್ಲೇಖಿಸಿದ್ದರು.

ರಾಹುಲ್ ಗಾಂಧಿ ಅಮೇಥಿ ನಾಮಪತ್ರಕ್ಕೆ 'ಸಿಂಧುತ್ವ' ಪರೀಕ್ಷೆಯಲ್ಲಿ ಜಯ ರಾಹುಲ್ ಗಾಂಧಿ ಅಮೇಥಿ ನಾಮಪತ್ರಕ್ಕೆ 'ಸಿಂಧುತ್ವ' ಪರೀಕ್ಷೆಯಲ್ಲಿ ಜಯ

ರಾಹುಲ್ ನಾಮಪತ್ರದ ವಿಚಾರವಾಗಿ ಕೇರಳದ ವಯನಾಡಿನಲ್ಲೂ ಬಿಜೆಪಿ ಅಭ್ಯರ್ಥಿ ತುಷಾರ್ ವೆಲ್ಲಪಳ್ಳಿ ಚುನಾವಣಾ ಭಾನುವಾರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ಅಮೇಥಿ, ವಯನಾಡು ಕ್ಷೇತ್ರದ ಅಭ್ಯರ್ಥಿ ರಾಹುಲ್ ಗಾಂಧಿ ಪರಿಚಯಅಮೇಥಿ, ವಯನಾಡು ಕ್ಷೇತ್ರದ ಅಭ್ಯರ್ಥಿ ರಾಹುಲ್ ಗಾಂಧಿ ಪರಿಚಯ

ರಾಹುಲ್ ವಿದೇಶಿ ಪಾಸ್‌ಪೋರ್ಟ್ ಹೊಂದಿದ್ದು, ನಾಮಪತ್ರ ಜೊತೆಗೆ ಸಲ್ಲಿಸಿರುವ ಅಫಿಡೆವಿಟ್ ನಲ್ಲಿ ಈ ವಿಷಯ ಬಹಿರಂಗಪಡಿಸಿಲ್ಲ. ಹೀಗಾಗಿ ನಾಮಪತ್ರವನ್ನಿ ತಿರಸ್ಕರಿಸಬೇಕೆಂದು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ತಪ್ಪಾಗಿ ವ್ಯಾಖ್ಯಾನಿಸಿದ್ದಾರೆ ಎಂದು ನ್ಯಾಯಾಂಗ ನಿಂದನೆಗೆ ಗುರಿಯಾಗಿರುವ ರಾಹುಲ್ ಗಾಧಿ ಸುಪ್ರೀಂಗೈ ವಿವರಣೆ ನೀಡಬೇಕಿದೆ.

English summary
The returning officer in Amethi constituency of Uttar Pradesh on Saturday ordered the postponement of scrutiny of Congress President Rahul Gandhi’s nomination papers to April 22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X