ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆಗಾಗಿಯೇ ಮತಾಂತರ ಎಂದಿಗೂ ಸ್ವೀಕಾರಾರ್ಹವಲ್ಲ: ಅಲಹಾಬಾದ್ ಹೈಕೋರ್ಟ್

|
Google Oneindia Kannada News

ಲಕ್ನೋ, ಅಕ್ಟೋಬರ್ 31: ಮದುವೆಗೆಂದು ಮತಾಂತರವಾಗುವುದು ಸ್ವೀಕಾರಾರ್ಹವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.

ಪಶ್ಚಿಮ ಉತ್ತರ ಪ್ರದೇಶದ ಮುಜಾಫರ್ ನಗರದ ಜೋಡಿ ಪೊಲೀಸ್ ಭದ್ರತೆಗೆ ಮನವಿ ಮಾಡಿತ್ತಷ್ಟೇ ಅಲ್ಲದೇ ಮಹಿಳೆಯ ತಂದೆ ತಮ್ಮ ವಿವಾಹದಲ್ಲಿ ಹಸ್ತಕ್ಷೇಪ ಮಾಡದಂತೆ ನಿರ್ದೇಶನ ನೀಡುವುದಕ್ಕೆ ಕೋರಿತ್ತು.

ಶಾಸಕನ ಅಂತಾರ್ಜಾತಿ ಮದುವೆ: ಗಂಡನ ಜತೆಗಿರುವುದು ಯುವತಿಯ ಹಕ್ಕು ಎಂದ ಹೈಕೋರ್ಟ್ಶಾಸಕನ ಅಂತಾರ್ಜಾತಿ ಮದುವೆ: ಗಂಡನ ಜತೆಗಿರುವುದು ಯುವತಿಯ ಹಕ್ಕು ಎಂದ ಹೈಕೋರ್ಟ್

ಅಂತರ್ಧರ್ಮೀಯ ವಿವಾಹವಾದ ಜೋಡಿಗಳು ತಮಗೆ ಪೊಲೀಸ್ ರಕ್ಷಣೆ ನೀಡಬೇಕೆಂದು ಕೋರ್ಟ್ ಗೆ ಮನವಿ ಸಲ್ಲಿಸಿದ್ದವು. ವಿಚಾರಣೆ ನಡೆಸಿದ ನ್ಯಾಯಾಲಯ, ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Allahabad High Court Says Conversion For Sake Of Marriage Not Acceptable

ಕೇವಲ ಮದುವೆಗಾಗಿ ಮತಾಂತರ ನಡೆದಿರುವುದು ಸ್ಪಷ್ಟವಾಗುತ್ತಿದೆ ಎಂದಿದ್ದು 2014 ರಲ್ಲಿ ನೂರ್ ಜಹಾನ್ ಬೇಗಮ್ ಪ್ರಕರಣದ ತೀರ್ಪನ್ನು ಉಲ್ಲೇಖಿಸಿದ್ದು, ಮದುವೆಗಾಗಿಯೇ ಮತಾಂತರಗೊಳ್ಳುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದು, ಅರ್ಜಿಯನ್ನು ತಿರಸ್ಕರಿಸಿದೆ.

ಪ್ರಿಯಾಂಶಿ ಅಲಿಯಾಸ್ ಸಮ್ರೀನ್ ಹಾಗು ಆಕೆಯ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಮಹೇಶ್ ಚಂದ್ರ ತ್ರಿಪಾಠಿ ಇದ್ದ ನ್ಯಾಯಪೀಠ, ಮಹಿಳೆ ಮುಸಲ್ಮಾನ ಮತಕ್ಕೆ ಸೇರಿದ್ದು, ಮದುವೆಗೂ ಒಂದು ತಿಂಗಳ ಮುಂಚೆಯಷ್ಟೇ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.

English summary
Religious conversion - just for the purpose of marriage - is not acceptable, the Allahabad High Court said referring to an earlier order as it refused to interfere in a petition by a couple, seeking protection three months after their marriage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X