• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡು, ವಿವಾಹವಾದ ಮಹಿಳೆಯ ರಕ್ಷಣೆಗೆ ಕೋರ್ಟ್ ಆದೇಶ

|
Google Oneindia Kannada News

ಲಕ್ನೋ, ಮೇ 27: ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮತ್ತು ಹಿಂದೂ ವಿಧಿಗಳ ಪ್ರಕಾರ ಮದುವೆಯಾದ ಮಹಿಳೆಗೆ ರಕ್ಷಣೆ ನೀಡುವಂತೆ ಅಲಹಾಬಾದ್ ಹೈಕೋರ್ಟ್ ಬುಧವಾರ ಪೊಲೀಸರಿಗೆ ಆದೇಶಿಸಿದೆ

ಮತಾಂತರ ಮತ್ತು ಮದುವೆಗೆ ಆಕ್ಷೇಪಿಸಿ ತನ್ನ ತಂದೆ ನೀಡಿದ ಬೆದರಿಕೆಗಳ ಬಗ್ಗೆ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಮುಸ್ಲಿಂನಿಂದ ಹಿಂದೂಗೆ ಮತಾಂತರಗೊಂಡ ಕಾರಣ ಮತ್ತು ಹಿಂದೂ ವಿಧಿಗಳ ಪ್ರಕಾರ ವಿವಾಹವಾದ ಕಾರಣಕ್ಕೆ ಕುಟುಂಬಸ್ಥರು ಜೀವ ಬೆದರಿಕೆ ಹಾಕುತ್ತಿರುವುದಾಗಿ 19 ವರ್ಷದ ಮಹಿಳೆ ಹಾಗೂ ಆಕೆಯ ಪತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿ ಈ ಆದೇಶ ನೀಡಿದೆ.

18 ವರ್ಷ ದಾಟಿದವರಿಗೆ ಧರ್ಮ ಆಯ್ಕೆಯ ಸ್ವಾತಂತ್ರ್ಯವಿದೆ: ಸುಪ್ರೀಂಕೋರ್ಟ್18 ವರ್ಷ ದಾಟಿದವರಿಗೆ ಧರ್ಮ ಆಯ್ಕೆಯ ಸ್ವಾತಂತ್ರ್ಯವಿದೆ: ಸುಪ್ರೀಂಕೋರ್ಟ್

ನ್ಯಾಯಮೂರ್ತಿ ಜೆ.ಜೆ.ಮುನೀರ್, ಮೀರತ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ, ಅರ್ಜಿದಾರರ ಜೀವನಕ್ಕೆ ಮತ್ತು ಜೀವಕ್ಕೆ ಅಗತ್ಯವಾದ ರಕ್ಷಣೆ ಒದಗಿಸಬೇಕು. ಮಹಿಳೆ ಮತ್ತು ಆಕೆಯ ಪತಿಗೆ ಕುಟುಂಬ, ಸ್ಥಳೀಯ ಸಮುದಾಯ ಅಥವಾ ಸ್ಥಳೀಯ ಪೊಲೀಸರಿಂದ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವಂತೆ ನಿರ್ದೇಶಿಸಿದೆ

ಅರ್ಜಿದಾರರ ಶಾಂತಿಯುತ ದಾಂಪತ್ಯ ಜೀವನದಲ್ಲಿ ಸ್ಥಳೀಯ ಪೊಲೀಸರು ಹಸ್ತಕ್ಷೇಪ ಮಾಡದಂತೆ ನೋಡಿಕೊಳ್ಳಬೇಕು. ಅರ್ಜಿದಾರರಿಗೆ ಯಾವುದೇ ದೈಹಿಕ ಹಾನಿಯಾಗದಂತೆಯೂ ನೋಡಿಕೊಳ್ಳುವುದು ಪೊಲೀಸರ ಕರ್ತವ್ಯವಾಗಿದೆ ಎಂದು ಆದೇಶದಲ್ಲಿ ನ್ಯಾಯಮೂರ್ತಿ ಜೆ.ಜೆ.ಮುನೀರ್ ಹೇಳಿದ್ದಾರೆ.

ಈ ಅರ್ಜಿಯಲ್ಲಿ ಆಕೆ ಹುಟ್ಟಿನಿಂದಲೇ ಮುಸ್ಲಿಂ ಆದರೂ ಹಿಂದೂ ಧರ್ಮದ ಬಗ್ಗೆ ಅಪಾರ ನಂಬಿಕೆ ಹೊಂದಿದ್ದಳು. ಹಿಂದೂ ಧರ್ಮ ಸ್ವೀಕರಿಸಿ, ಹಿಂದೂ ಹೆಸರನ್ನು ಇಟ್ಟುಕೊಂಡಿದ್ದಳು ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.

ಮದುವೆ, ಮತಾಂತರ: ಕೋಲ್ಕತ್ತ ಹೈಕೋರ್ಟ್ ಮಹತ್ವದ ತೀರ್ಪುಮದುವೆ, ಮತಾಂತರ: ಕೋಲ್ಕತ್ತ ಹೈಕೋರ್ಟ್ ಮಹತ್ವದ ತೀರ್ಪು

ಏಪ್ರಿಲ್ 15 ರಂದು, ಮೀರತ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಅರ್ಜಿ ಸಲ್ಲಿಸಿ ಆಕೆಯು ತನ್ನ ಹೆಸರನ್ನು ಹಾಗೂ ಧರ್ಮದ ಬದಲಾವಣೆ ಬಗ್ಗೆ ಮಾಹಿತಿ ನೀಡಿದ್ದಳು. ಈ ಬಗ್ಗೆ ಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಮಹಿಳೆ ಹಿಂದೂ ವಿಧಿಗಳ ಪ್ರಕಾರ ಏಪ್ರಿಲ್ 16 ರಂದು ಮೀರತ್‌ನ ಮಾಲಿಯಾನ ಆರ್ಯ ಸಮಾಜ ಮಂದಿರದಲ್ಲಿ ವಿವಾಹವಾಗಿದ್ದು, ಈ ನವ ದಂಪತಿ ಅದೇ ದಿನ ಮೀರತ್‌ನಲ್ಲಿ ಮದುವೆ ನೋಂದಾವಣಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ ವಿವಾಹವನ್ನು ಇನ್ನೂ ಕೂಡಾ ನೋಂದಾವಣೆ ಮಾಡಿಲ್ಲ. ಈ ನಡುವೆ ಆಕೆಯ ತಂದೆ ಸೇರಿದಂತೆ, ಕುಟುಂಬಸ್ಥರು, ಸ್ಥಳೀಯರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಕೂಡಾ ನ್ಯಾಯಾಲಯಕ್ಕೆ ತಿಳಿಸಲಾಗಿದೆ.

ಈ ಹಿನ್ನೆಲೆ ಅರ್ಜಿದಾರರ ಮನೆಗೆ ಸ್ನೇಹಿತರು, ಸಹವರ್ತಿಗಳು, ಮಧ್ಯವರ್ತಿಗಳು ತೆರಳಬಾರದು, ಯಾವುದೇ ಮೊಬೈಲ್‌ ಕರೆಯ ಮೂಲಕ ಅರ್ಜಿದಾರರನ್ನು ಸಂಪರ್ಕಿಸಬಾರದು, ಅರ್ಜಿದಾರರಿಗೆ ಯಾವುದೇ ದೈಹಿಕ ಹಾನಿ ಉಂಟು ಮಾಡಬಾರದು ಎಂದು ನ್ಯಾಯಾಲಯವು ಕುಟುಂಬ ಸದಸ್ಯರಿಗೆ ನಿರ್ದೇಶನ ನೀಡಿದೆ.

ಮದುವೆಗಾಗಿಯೇ ಮತಾಂತರ ಎಂದಿಗೂ ಸ್ವೀಕಾರಾರ್ಹವಲ್ಲ: ಅಲಹಾಬಾದ್ ಹೈಕೋರ್ಟ್ಮದುವೆಗಾಗಿಯೇ ಮತಾಂತರ ಎಂದಿಗೂ ಸ್ವೀಕಾರಾರ್ಹವಲ್ಲ: ಅಲಹಾಬಾದ್ ಹೈಕೋರ್ಟ್

ಈ ವಿಷಯದಲ್ಲಿ ಅಫಿಡವಿಟ್ ಸಲ್ಲಿಸಲು ರಾಜ್ಯ ಅಧಿಕಾರಿಗಳಿಗೆ ನಾಲ್ಕು ವಾರಗಳ ಕಾಲಾವಕಾಶ ನೀಡಿರುವ ನ್ಯಾಯಾಲಯ ವಿಚಾರಣೆಯನ್ನು ಜೂನ್ 23 ಕ್ಕೆ ಮುಂದೂಡಿದೆ.

English summary
Allahabad High Court orders protection for woman who converted from Islam to Hindu religion and married as per Hindu rites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X