ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಕರ್ತವ್ಯದಲ್ಲಿದ್ದ 135 ಜನ ಕೋವಿಡ್‌ಗೆ ಬಲಿ

|
Google Oneindia Kannada News

ಲಕ್ನೋ, ಏಪ್ರಿಲ್ 27; ಉತ್ತರ ಪ್ರದೇಶದಲ್ಲಿ ಪಂಚಾಯಿತಿ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ 135 ಜನರು ಕೋವಿಡ್‌ಗೆ ಬಲಿಯಾಗಿದ್ದಾರೆ. ಅಲಹಾಬಾದ್ ಹೈಕೋರ್ಟ್ ಈ ಕುರಿತು ರಾಜ್ಯ ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿದೆ.

ನ್ಯಾಯಮೂರ್ತಿ ಸಿದ್ಧಾರ್ಥ ವರ್ಮಾ ಮತ್ತು ಅಜಿತ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಚುನಾವಣಾ ಕಾರ್ಯದಲ್ಲಿದ್ದ ಸಿಬ್ಬಂದಿಗಳ ರಕ್ಷಣೆ ಬಗ್ಗೆ ಏಕೆ ಗಮನಹರಿಸಲಿಲ್ಲ? ಎಂದು ಆಯೋಗವನ್ನು ಕೇಳಿದೆ.

ಒಂದೇ ದಿನ 3 ಹಂತಗಳ ಚುನಾವಣೆ ಸಾಧ್ಯವೇ ಇಲ್ಲ; ಚುನಾವಣಾ ಆಯೋಗಒಂದೇ ದಿನ 3 ಹಂತಗಳ ಚುನಾವಣೆ ಸಾಧ್ಯವೇ ಇಲ್ಲ; ಚುನಾವಣಾ ಆಯೋಗ

ಚುನಾವಣಾ ಕಾರ್ಯದಲ್ಲಿ ತೊಡಗಿದ್ದ ಶಿಕ್ಷಕರು, ಶಿಕ್ಷ ಮಿತ್ರರು ಸೇರಿದಂತೆ 135 ಜನರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿತ್ತು. 26/4/2021ರಂದು ಈ ವರದಿ ಸಂಚಲನ ಮೂಡಿಸಿತ್ತು.

ದಾವಣಗೆರೆಯಲ್ಲಿ ವೆಂಟಿಲೇಟರ್ ಸಿಗದೆ ಒದ್ದಾಡಿದ್ದ ಕೊರೊನಾ ಸೋಂಕಿತೆ ಸಾವುದಾವಣಗೆರೆಯಲ್ಲಿ ವೆಂಟಿಲೇಟರ್ ಸಿಗದೆ ಒದ್ದಾಡಿದ್ದ ಕೊರೊನಾ ಸೋಂಕಿತೆ ಸಾವು

 Allahabad HC Notice To EC Over Death Of 135 Election duty Staff Due To Covid

ವರದಿಯ ಬಗ್ಗೆ ತಿಳಿದ ಬಳಿಕ ಕೋರ್ಟ್ ಚುನಾವಣಾ ಆಯೋಕ್ಕೆ ನೋಟಿಸ್ ನೀಡಿದೆ. ಪೊಲೀಸ್ ಮತ್ತು ಚುನಾವಣಾ ಆಯೋಗ ಸಿಬ್ಬಂದಿಯ ಆರೋಗ್ಯ ಕಾಪಾಡಲು ಯಾವ ಕ್ರಮ ಕೈಗೊಂಡಿತ್ತು? ಎಂದು ಸಹ ಪ್ರಶ್ನೆ ಮಾಡಿದೆ.

Infographics: ಕೋವಿಡ್ ಲಸಿಕೆ ಪಡೆಯಲು ಕೋವಿನ್ app ಮೂಲಕ ನೋಂದಣಿ ಹೇಗೆ?Infographics: ಕೋವಿಡ್ ಲಸಿಕೆ ಪಡೆಯಲು ಕೋವಿನ್ app ಮೂಲಕ ನೋಂದಣಿ ಹೇಗೆ?

ಮುಂಬರುವ ಹಂತದ ಪಂಚಾಯಿತಿ ಚುನಾವಣೆ ವೇಳೆಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಸೇರಿದಂತೆ 20/4/2021ರಂದು ಹೊರಡಿಸಿರುವ ಮಾರ್ಗಸೂಚಿ ಪಾಲನೆ ಮಾಡಲು ಆಯೋಗ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.

English summary
Allahabad high court issued notice to election commission in the issue of death of 135 persons due to COVID 19 who were on election duty during panchayat elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X