ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲಿಗಢ ಇನ್ಮುಂದೆ ಹರಿಘರ್‌?: ಯುಪಿ ಸರ್ಕಾರದ ಮುಂದಿದೆ ಪಂಚಾಯತ್‌ ಪ್ರಸ್ತಾಪ

|
Google Oneindia Kannada News

ನವದೆಹಲಿ, ಆ.17: ಉತ್ತರ ಪ್ರದೇಶದ ಅಲಿಗಢವನ್ನು ಹರಿಘರ್‌ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಜಿಲ್ಲಾ ಪಂಚಾಯತ್ ಸೋಮವಾರದ ಸಭೆಯಲ್ಲಿ ಅನುಮೋದಿಸಿದೆ ಎಂದು ಸ್ಥಳೀಯ ಸಂಸ್ಥೆಯ ಮುಖ್ಯಸ್ಥರು ಇಂದು ತಿಳಿಸಿದ್ದಾರೆ. ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎಂದು ವರದಿ ಉಲ್ಲೇಖ ಮಾಡಿದೆ.

ಅಲಿಗಢದ ಮರುನಾಮಕರಣದ ಕ್ರಮವನ್ನು ಉತ್ತರ ಪ್ರದೇಶ ಸರ್ಕಾರವು ಅನುಮೋದನೆ ಮಾಡಿದರೆ, ಇದು ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಮರುನಾಮಕರಣಗೊಂಡ ಸ್ಥಳಗಳ ಒಂದು ದೊಡ್ಡ ಪಟ್ಟಿಯನ್ನು ಅಲಿಗಢ ಸೇರಲಿದೆ. 2019 ರ ಜನವರಿಯಲ್ಲಿ ಕುಂಭ ಮೇಳಕ್ಕೂ ಮುನ್ನ ಇತ್ತೀಚಿನ ದಿನಗಳಲ್ಲಿ ಅಲಹಾಬಾದ್‌ನ ಪ್ರಯಾಗರಾಜ್ ಎಂದು ಮರುನಾಮಕರಣ ಮಾಡಲಾಯಿತು.

ಕಾನ್ಪುರದಲ್ಲಿ ಮಗಳ ಎದುರಲ್ಲೇ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆಕಾನ್ಪುರದಲ್ಲಿ ಮಗಳ ಎದುರಲ್ಲೇ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ

"ನಾವು ನಿನ್ನೆ (ಸೋಮವಾರ) ಜಿಲ್ಲಾ ಪಂಚಾಯತ್ ಮಂಡಳಿಯ ಸಭೆಯನ್ನು ಸೇರಿದ್ದೇವೆ. ಸಭೆಯಲ್ಲಿ ಕೆಲವು ಪ್ರಸ್ತಾಪಗಳನ್ನು ಅಂಗೀಕರಿಸಲಾಯಿತು. ಮೊದಲ ಪ್ರಸ್ತಾವನೆಯು ಅಲಿಗಢವನ್ನು ಹರಿಘಡ ಎಂದು ಮರುನಾಮಕರಣ ಮಾಡುವ ವಿಚಾರದ್ದು ಆಗಿದೆ. ಅದನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ನಾವು ಆ ಪ್ರಸ್ತಾಪವನ್ನು ಮುಖ್ಯಮಂತ್ರಿಗೆ ಯೋಗಿ ಆದಿತ್ಯನಾಥ್‌ಗೆ ಕಳುಹಿಸಿದ್ದೇವೆ. ಅನುಮೋದಿಸಲಾಗುವುದು ಎಂದು ನಾನು ಆಶಿಸುತ್ತೇನೆ," ಎಂದು ಅಲಿಗಢ ಜಿಲ್ಲಾ ಪಂಚಾಯತ್ ಮುಖ್ಯಸ್ಥ ವಿಜಯ್ ಸಿಂಗ್ ಸುದ್ದಿ ಸಂಸ್ಥೆ ಎಎನ್‌ಐ ಗೆ ತಿಳಿಸಿದರು.

Aligarh To Be Renamed Harigarh? Plan Sent To UP Govt Says Panchayat

ಅಲಿಗಢವನ್ನು ಹರಿಗಢ ಎಂದು ಮರು ಹೆಸರಿಸಲು ಒತ್ತಾಯವು ಬ್ಲಾಕ್ ಪಂಚಾಯತ್ ನಾಯಕರಾದ ಕೊಹ್ರಿ ಸಿಂಗ್ ಮತ್ತು ಉಮೇಶ್ ಯಾದವ್ ಅವರಿಂದ ಬಂದಿದೆ ಎಂದು ಪಂಚಾಯತ್ ಸದಸ್ಯರು ತಿಳಿಸಿದ್ದಾರೆ. ಪಂಚಾಯತ್ ಅನುಮೋದಿಸಿದ ಇನ್ನೊಂದು ಪ್ರಸ್ತಾವನೆಯೆಂದರೆ ಅಲಿಗಢದ ಧನಿಪುರ್ ಏರ್ ಸ್ಟ್ರಿಪ್ ಅನ್ನು ಕಲ್ಯಾಣ್ ಸಿಂಗ್ ಏರ್ ಸ್ಟ್ರಿಪ್ ಎಂದು ಮರುನಾಮಕರಣ ಮಾಡುವುದು ಎಂದು ಸ್ಥಳೀಯ ಸಂಸ್ಥೆಯ ಸದಸ್ಯರು ತಿಳಿಸಿದ್ದಾರೆ.

ನವೆಂಬರ್ 2019 ರಲ್ಲಿ, ಯೋಗಿ ಆದಿತ್ಯನಾಥ್ ರಾಜ್ಯ ಸರ್ಕಾರವು ರಾಜ್ಯದಾದ್ಯಂತ ಸ್ಥಳಗಳ ಮರುನಾಮಕರಣವನ್ನು ಮುಂದುವರಿಸುವ ಸಾಧ್ಯತೆಯನ್ನು ಸೂಚಿಸಿತ್ತು. "ನಾವು ಉತ್ತಮವೆಂದು ಭಾವಿಸಿದ್ದನ್ನು ನಾವು ಮಾಡಿದ್ದೇವೆ. ನಾವು ಮೊಘಲ್ ಸರಾಯ್ ಅನ್ನು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ನಗರ, ಅಲಹಾಬಾದ್ ಅನ್ನು ಪ್ರಯಾಗರಾಜ್ ಮತ್ತು ಫೈಜಾಬಾದ್ ಅನ್ನು ಅಯೋಧ್ಯೆ ಎಂದು ಮರುನಾಮಕರಣ ಮಾಡಿದ್ದೇವೆ. ಅಗತ್ಯವಿರುವಲ್ಲಿ ಸರ್ಕಾರವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ," ಎಂದು ಯೋಗಿ ಆದಿತ್ಯನಾಥ್ ಹೇಳಿದರು.

ಯುಪಿ ಚುನಾವಣೆ: ಬಿಜೆಪಿ ವಿರುದ್ದ ರಣಕಹಳೆ, ಮೈತ್ರಿಗಾಗಿ 'ನಮ್ಮ ಪಕ್ಷದ ಬಾಗಿಲು ತೆರೆದಿದೆ' ಎಂದ ಅಖಿಲೇಶ್ಯುಪಿ ಚುನಾವಣೆ: ಬಿಜೆಪಿ ವಿರುದ್ದ ರಣಕಹಳೆ, ಮೈತ್ರಿಗಾಗಿ 'ನಮ್ಮ ಪಕ್ಷದ ಬಾಗಿಲು ತೆರೆದಿದೆ' ಎಂದ ಅಖಿಲೇಶ್

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಉತ್ತರ ಪ್ರದೇಶದ ಅಲಿಗಢವನ್ನು ಹರಿಘರ್‌ ಎಂದು ಮರುನಾಮಕರಣ ಮಾಡುವ ಪ್ರಸ್ತಾಪವನ್ನು 72 ರಲ್ಲಿ 50 ಸದಸ್ಯರು ಹಾಜರಿರುವ ಮೂಲಕ ಯಾವುದೇ ವಿರೋಧವಿಲ್ಲದೆ ಮೊದಲ ಸಭೆಯಲ್ಲಿ ಅಂಗೀಕಾರ ಮಾಡಲಾಗಿದೆ. ರಾಮ ಜನ್ಮಭೂಮಿ ಚಳುವಳಿಯ ಸಮಯದಲ್ಲಿ ಅಲಿಗಢದ ನಿವಾಸಿಯಾಗಿದ್ದ ಮತ್ತು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿಜೆಪಿ ನಾಯಕ ಕಲ್ಯಾಣ್ ಸಿಂಗ್ ಹೆಸರನ್ನು ಅಲಿಘರ್ ವಿಮಾನ ನಿಲ್ದಾಣಕ್ಕೆ ಹೆಸರಿಸಲು ಮತ್ತೊಂದು ಪ್ರಸ್ತಾಪವನ್ನು ಅಂಗೀಕರಿಸಲಾಗಿದೆ ಎಂದು ವರದಿ ತಿಳಿಸಿದೆ.

ಏತನ್ಮಧ್ಯೆ, ಮೈನ್‌ಪುರಿಯ ಜಿಲ್ಲಾ ಪಂಚಾಯತ್ ಕೂಡ ಮೈನ್‌ಪುರಿಯನ್ನು ಮಾಯನ್ ನಗರ ಎಂದು ಮರುನಾಮಕರಣ ಮಾಡುವ ನಿರ್ಣಯವನ್ನು ಅಂಗೀಕರಿಸಿದೆ. ಗಮನಾರ್ಹವಾಗಿ, ಮೈನ್‌ಪುರಿ ಸಮಾಜವಾದಿ ಪಕ್ಷದ ಪಿತಾಮಹ ಮುಲಾಯಂ ಸಿಂಗ್ ಯಾದವ್ ಭದ್ರಕೋಟೆಯಾಗಿದೆ, ಮುಲಾಯಂ ಸಿಂಗ್ ಯಾದವ್ ಐದು ಕ್ಷೇತ್ರಗಳಲ್ಲಿ ಜಯಗಳಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಫಿರೋಜಾಬಾದ್ ಜಿಲ್ಲಾ ಪಂಚಾಯತ್ ಫಿರೋಜಾಬಾದ್ ಅನ್ನು ಚಂದ್ರ ನಗರ ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿ ನಿರ್ಣಯವನ್ನು ಅಂಗೀಕರಿಸಿತ್ತು. ಸ್ಥಳೀಯರ ನಂಬಿಕೆಗಳ ಪ್ರಕಾರ, ರಾಜ ಚಂದ್ರಸೇನ್ ಫಿರೋಜಾಬಾದ್‌ನಲ್ಲಿ ವಾಸಿಸುತ್ತಿದ್ದನು ಮತ್ತು ಈ ಕಾರಣದಿಂದಾಗಿ ಇದನ್ನು ಕ್ರಿಸ್ತಶಕ 1560 ರವರೆಗೆ ಚಂದ್ರವರ್ ನಗರ ಎಂದು ಕರೆಯಲಾಗುತ್ತಿತ್ತು. ಹಾಗೆಯೇ ರಾಣಿ ಲಕ್ಷ್ಮಿ ಬಾಯಿ ನಂತರ ಝಾನ್ಸಿ ರೈಲ್ವೆ ನಿಲ್ದಾಣದ ಹೆಸರನ್ನು ಬದಲಾಯಿಸಲು ಅದು ಇತ್ತೀಚೆಗೆ ಶಿಫಾರಸು ಮಾಡಿದೆ.

(ಒನ್‌ಇಂಡಿಯಾ ಸುದ್ದಿ)

English summary
A proposal to rename Uttar Pradesh's Aligarh to Harigarh has been cleared by the zila panchayat at a meeting, the local body's chief said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X