• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಲಿಘರ್ : ಮಗುವಿನ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ?

|

ಅಲಿಘರ್ (ಉತ್ತರ ಪ್ರದೇಶ), ಜೂನ್ 08 : ಎರಡೂವರೆ ವರ್ಷದ ಮಗುವಿನ ಮರಣೋತ್ತರ ಪರೀಕ್ಷೆಯ ವರದಿ ಹೊರಬಿದ್ದಿದ್ದು, ಹಲವಾರು ಆಘಾತಕಾರಿ ಸಂಗತಿಗಳನ್ನು ಅದರಲ್ಲಿ ವೈದ್ಯರು ದಾಖಲಿಸಿದ್ದಾರೆ. ಮಗುವಿನ ಮೇಲೆ ಅತ್ಯಾಚಾರ ಆಗಿರುವುದರ ಬಗ್ಗೆ ಅದರಲ್ಲಿ ಯಾವುದೇ ಪ್ರಸ್ತಾಪವಿಲ್ಲ.

ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ಮರಣೋತ್ತರ ಪರೀಕ್ಷೆಯಿಂದ ಸಾಬೀತಾಗಿಲ್ಲ. ಅಲ್ಲದೆ ಕಣ್ಣುಗುಡ್ಡೆಯನ್ನು ಕೀಳಲಾಗಿರಲಿಲ್ಲ ಮತ್ತು ಆಸಿಡ್ ಅನ್ನೂ ಸುರಿದಿರಲಿಲ್ಲ ಎಂದು ಅಲಿಘರ್ ಪೊಲೀಸರು ಖಚಿತಪಡಿಸಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಲ್ಲದ ಸುದ್ದಿಗಳನ್ನು ಹರಡಬಾರದು ಎಂದೂ ಕೋರಿದ್ದಾರೆ.

ಅತ್ಯಾಚಾರಿಗೆ ಗಲ್ಲು ಆಗಲೇಬೇಕು : ಮಗುವಿನ ತಾಯಿಯ ಆಕ್ರಂದನ

ಬಾಲಕಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಗಿದೆ, ಆಕೆಯ ದೇಹವನ್ನು ತಿರುಚಲಾಗಿದ್ದು, ಕಣ್ಣುಗುಡ್ಡೆಗಳನ್ನು ಕೀಳಲಾಗಿತ್ತು ಮತ್ತು ಆಕೆಯ ಮೇಲೆ ಅಮಾನವೀಯವಾಗಿ ಆಸಿಡ್ ಸುರಿದು ಸುಡಲಾಗಿತ್ತು ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿತ್ತು. ಹತ್ಯೆಯ ಬರ್ಬರತೆಯನ್ನು ಖಂಡಿಸಿ ದೇಶದಾದ್ಯಂತ ಭಾರೀ ಆಕ್ರೋಶದ ಮಾತುಗಳು ಕೇಳಿಬಂದಿದ್ದವು.

ಮಗಳ ಮೇಲೆಯೇ ಅತ್ಯಾಚಾರ : ಎರಡೂವರೆ ವರ್ಷದ ಪುಟ್ಟ ಮಗುವಿನ ಭಯಾನಕ ಹತ್ಯೆಯಲ್ಲಿ ಭಾಗಿಯಾಗಿರುವ ಇಬ್ಬರಲ್ಲಿ ಒಬ್ಬ ತನ್ನ ಸ್ವಂತ ಮಗಳ ಮೇಲೆಯೇ ಐದು ವರ್ಷಗಳ ಹಿಂದೆ ಅತ್ಯಾಚಾರ ನಡೆಸಿ ಜೈಲು ಪಾಲಾಗಿದ್ದ ಎಂಬ ಹೀನ ಸಂಗತಿ ಬಯಲಾಗಿದೆ.

ಈ ಸಂಗತಿಯನ್ನು ಉತ್ತರ ಪ್ರದೇಶದ ಪೊಲೀಸರು ಬಹಿರಂಗಪಡಿಸಿದ್ದು, 2014ರಲ್ಲಿಯೇ ಅಸ್ಲಂ ಎಂಬಾತ ತನ್ನ ನಾಲ್ಕು ವರ್ಷದ ಮಗಳ ಮೇಲೆ ಅತ್ಯಾಚಾರ ನಡೆಸಿದ್ದ. ಮಗಳ ಮೇಲೆ ಅತ್ಯಾಚಾರ ನಡೆದ ಸಂಗತಿ ತಿಳಿಯುತ್ತಿದ್ದಂತೆ, ಮಗುವಿನ ತಾಯಿ ಮಗುವನ್ನೆತ್ತಿಕೊಂಡು ಮನೆ ಖಾಲಿ ಮಾಡಿ ತವರುಮನೆ ಸೇರಿದ್ದಳು.

ಮಗುವಿನ ಬರ್ಬರ ಹತ್ಯೆ : ತುಕ್ಡೇ ಗ್ಯಾಂಗ್ ಎಲ್ಲಿದೆ, ಆಷಾಡಭೂತಿ ತಾರೆಯರೇ ಎಲ್ಲಿದ್ದೀರಿ?

ಮೇ 31ರಂದು ಅಲಿಘರ್ ನಲ್ಲಿ ನಡೆದ ಪುಟ್ಟ ಬಾಲಕಿಯ ಬರ್ಬರ ಹತ್ಯಾಕಾಂಡದಲ್ಲಿಯೂ ಅಸ್ಲಂ ಕೈವಾಡವಿದೆ. ಮಗುವಿಗೆ ಬಿಸ್ಕತ್ ಕೊಡಿಸುವ ಆಸೆ ತೋರಿಸಿ ಅಪಹರಿಸಿದ ನಂತರ, ಮಗುವನ್ನು ಈ ಅಸ್ಲಂ ಮನೆಯಲ್ಲಿಯೇ ಇಡಲಾಗಿತ್ತು. ಅಲ್ಲಿಯೇ ದುಪಟ್ಟಾದಿಂದ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ.

ಈ ಮೊದಲು ಕೂಡ ಅಸ್ಲಂ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ), ಸೆಕ್ಷನ್ 354 (ಮಹಿಳೆ ಮೇಲೆ ಹಲ್ಲೆ) ಮತ್ತು ಸೆಕ್ಷನ್ 363 (ಅಪಹರಣ) ಅಡಿಯಲ್ಲಿ ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿತ್ತು. ಎರಡೂವರೆ ವರ್ಷದ ಬಾಲಕಿಯ ಹತ್ಯೆಯ ಕೇಸಿನಲ್ಲಿ ಮೊಹಮ್ಮದ್ ಜಾಹಿದ್ ಇದೇ ಅಸ್ಲಂನ ಸಹಾಯವನ್ನು ಪಡೆದಿದ್ದ.

ಕೊಲೆಯಾಗಿ ಮೂರು ದಿನಗಳ ನಂತರ ತಿಪ್ಪೆಗುಂಡಿಯಲ್ಲಿ ಮಗುವಿನ ಶವ ದೊರೆತಿತ್ತು. ತೀವ್ರವಾಗಿ ಕೊಳೆತಿದ್ದ ಮಗುವಿನ ದೇಹದ ಕೆಲ ಭಾಗಗಳನ್ನು ನಾಯಿಗಳು ಕಚ್ಚಿ ಒಯ್ಯುತ್ತಿದ್ದಾಗ ಗಮನಿಸಿದ ಜನರು ಪೊಲೀಸರಿಗೆ ತಿಳಿಸಿದ್ದಾರೆ. ಅಲಿಘರ್ ನ ತಪ್ಪಲ್ ಪ್ರದೇಶದಲ್ಲಿ ಈ ಹತ್ಯೆ ನಡೆದಿದೆ. ಜೂನ್ 2ರಂದು ಮಗುವಿನ ದೇಹ ಪತ್ತೆಯಾಗಿತ್ತು.

ಸಾಲ ವಾಪಸ್ ನೀಡದ ಕಾರಣಕ್ಕೆ ಹೆಣ್ಣುಮಗುವನ್ನು ಕೊಂದ ಕಿರಾತಕರು

ಅಮೇಥಿಯ ಸಂಸದೆ ಸ್ಮೃತಿ ಇರಾನಿ ಅವರು, ಸೋಷಿಯಲ್ ಮೀಡಿಯಾದಲ್ಲಿ ಮಗುವಿನ ಹೆಸರು ಯಾರೂ ನಮೂದಿಸಬಾರದು, ಇದು ಕಾನೂನನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ತಿಳಿಸಿದ್ದಾರೆ. ಆರೋಪಿಗಳಾದ ಮೊಹಮ್ಮದ್ ಜಾಹಿದ್ ಮತ್ತು ಅಸ್ಲಂನನ್ನು ಬಂಧಿಸಲಾಗಿದ್ದು, ನ್ಯಾಷನಲ್ ಸೆಕ್ಯೂರಿಟಿ ಆಕ್ಟ್ (ಎನ್ಎಸ್ಎ) ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿದೆ.

ಬಾಲಕಿಯ ತಾತನಿಂದ ಆರೋಪಿ ಮೊಹಮ್ಮದ್ ಜಾಹಿದ್ 50 ಸಾವಿರ ರುಪಾಯಿ ಸಾಲ ಪಡೆದಿದ್ದ. ಅದರಲ್ಲಿ 40 ಸಾವಿರ ರುಪಾಯಿ ತೀರಿಸಿದ್ದ, ಉಳಿದ 10 ಸಾವಿರ ಕೊಡಲು ತರಕಾರು ಮಾಡುತ್ತಿದ್ದ. ಸಾಲದ ಹಣ ವಾಪಸ್ ನೀಡಲು ಒತ್ತಾಯಿಸಿದಾಗ ಮಗುವಿನ ತಾತನ ವಿರುದ್ಧವೇ ಜಾಹಿದ್ ಬೆದರಿಕೆ ಹಾಕಿದ್ದ. ಈ ದ್ವೇಷದ ಹಿನ್ನೆಲೆಯಲ್ಲಿಯೇ ಮಗುವನ್ನು ಅಪಹರಿಸಿ ಜಾಹಿದ್ ಹತ್ಯೆಗೈದಿದ್ದ.

English summary
Aligarh (Uttar Pradesh) baby brutal murder : Postmortem report says no rape on the two and half year old baby and no acid was poured on her. But, she has been strangulated by the culprits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X