ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋರಖ್‌ಪುರದಲ್ಲಿ ಸಿಎಂ ಯೋಗಿ ವಿರುದ್ಧ ಹಾಲಿ ಬಿಜೆಪಿ ಶಾಸಕನಿಗೆ ಎಸ್‌ಪಿ ಟಿಕೆಟ್!?

|
Google Oneindia Kannada News

ಲಕ್ನೋ, ಜನವರಿ 17: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ಪರ್ಧಿಸುತ್ತಿರುವ ಗೋರಖ್‌ಪುರ ನಗರ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಶಾಸಕನಿಗೆ ಸಮಾಜವಾದಿ ಪಕ್ಷದಿಂದ ಟಿಕೆಟ್ ನೀಡಲಾಗುವುದು ಎಂದು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಆಫರ್ ನೀಡಿದ್ದಾರೆ.

ಆನ್ ಸಂಕಲ್ಪ್ ದಿವಸ್' ಹಿನ್ನೆಲೆ ಪಕ್ಷದ ಪ್ರಧಾನ ಕಚೇರಿಯಲ್ಲಿ ಮಾತನಾಡಿದ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಬಿಜೆಪಿಯ ಗೋರಖ್‌ಪುರ ನಗರ ಕ್ಷೇತ್ರದ ಶಾಸಕ ಅಗರ್‌ವಾಲ್‌ ಅವರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಗೋರಖ್‌ಪುರ ನಗರ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ರಾಧಾ ಮೋಹನ್ ಅಗರ್ವಾಲ್ ಅವರನ್ನು ಒಲಿಸಿಕೊಳ್ಳಲು ಪ್ರಯತ್ನಿಸಿದ್ದು, ಅವರಿಗೆ ಈ ಪಕ್ಷದಿಂದ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವುದಾಗಿ ಹೇಳಿದರು.

ಯುಪಿ ಚುನಾವಣೆ: ಎಸ್‌ಪಿಗಿರುವ ನಿಷೇಧ ಬಿಜೆಪಿಗೆ ಯಾಕಿಲ್ಲ? ಅಖಿಲೇಶ್ಯುಪಿ ಚುನಾವಣೆ: ಎಸ್‌ಪಿಗಿರುವ ನಿಷೇಧ ಬಿಜೆಪಿಗೆ ಯಾಕಿಲ್ಲ? ಅಖಿಲೇಶ್

ಕಳೆದ 2002 ರಿಂದ ಗೋರಖ್‌ಪುರ ನಗರ ಕ್ಷೇತ್ರದಲ್ಲಿ ರಾಧಾ ಮೋಹನ್ ಅಗರ್ವಾಲ್ ಶಾಸಕರಾಗಿದ್ದಾರೆ. "ನನಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಮಾಣ ವಚನ ಸ್ವೀಕಾರ ಸಮಾರಂಭ ನೆನಪಿದೆ. ಆ ಸಂದರ್ಭದಲ್ಲಿ ನಾನು ರಾಧಾ ಮೋಹನ್ ಅಗರ್ವಾಲ್ ಅವರನ್ನು ನೋಡಿದ್ದೆ. ಅವರು ಸೀಟು ಸಿಗದೇ ನಿಂತುಕೊಳ್ಳುವಂತಾ ಸ್ಥಿತಿಯನ್ನು ಎದುರಿಸಿದ್ದರು. ಬಿಜೆಪಿ ಸರ್ಕಾರದಲ್ಲಿ ಅವರನ್ನು ತೀರಾ ಅವಮಾನಿಸಲಾಗಿದೆ," ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

Akhilesh offer SPs ticket to Sitting BJP MLA against Yogi in Gorakhpur Urban Constituency

ಅಗರ್ವಾಲ್ ಹೆಸರು ಹೇಳಿದಾಕ್ಷಣ ಟಿಕೆಟ್ ಪ್ರಸ್ತಾಪ:

ಬಿಜೆಪಿಯ ಅತೃಪ್ತ ಶಾಸಕರ ಬಗ್ಗೆ ಕೇಳಿದ ಪ್ರಶ್ನೆಗೆ, ಅಖಿಲೇಶ್ ಯಾದವ್, "ನಾವು ಎಲ್ಲರಿಗೂ ಸ್ಥಾನಗಳನ್ನು ನೀಡಲು ಸಾಧ್ಯವಿಲ್ಲ, ಬಿಜೆಪಿ ತನ್ನ ಟಿಕೆಟ್‌ಗಳನ್ನು ಹಂಚಬಹುದು. ನಾವು ಈಗ ಯಾರನ್ನೂ ಸಮಾಜವಾದಿ ಪಕ್ಷಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ," ಎಂದು ಹೇಳಿದರು. ಇದರ ಮಧ್ಯೆ ರಾಧಾ ಮೋಹನ್ ಅಗರ್ವಾಲ್ ಹೆಸರು ಪ್ರಸ್ತಾಪಿಸಿದ ಕೂಡಲೇ ಟಿಕೆಟ್ ನೀಡುವುದಾಗಿ ಹೇಳಿದ್ದಾರೆ.

ಬಿಜೆಪಿಗೆ ನನ್ನ ಕುಟುಂಬದ ಬಗ್ಗೆ ಹೆಚ್ಚು ಕಾಳಜಿ:

ತಮ್ಮ ಕಿರಿಯ ಸಹೋದರನ ಪತ್ನಿ ಅಪರ್ಣಾ ಯಾದವ್ ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹವನ್ನು ತಳ್ಳಿಹಾಕಿದ ಅಖಿಲೇಶ್ ಯಾದವ್, "ಬಿಜೆಪಿಗೆ ನನ್ನ ಕುಟುಂಬದ ಬಗ್ಗೆ ನನಗಿಂತ ಕಾಳಜಿ ಇದೆ, ನೀವು ಬಿಜೆಪಿಯಿಂದ ಸ್ಫೂರ್ತಿ ಪಡೆದು ಪ್ರಶ್ನೆ ಕೇಳುತ್ತಿದ್ದೀರಾ?," ಎಂದು ಮರುಪ್ರಶ್ನೆ ಹಾಕಿದರು. 2017ರ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಲಕ್ನೋ ಕಂಟೋನ್ಮೆಂಟ್‌ನಿಂದ ಎಸ್‌ಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ಅಪರ್ಣಾ ಯಾದವ್, ಬಿಜೆಪಿಯ ರೀಟಾ ಬಹುಗುಣ ಜೋಶಿ ವಿರುದ್ಧ ಸೋಲು ಕಂಡಿದ್ದರು.

Akhilesh offer SPs ticket to Sitting BJP MLA against Yogi in Gorakhpur Urban Constituency

ಉತ್ತರ ಪ್ರದೇಶದಲ್ಲಿ ಚುನಾವಣೆ ಪೈಪೋಟಿ:

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.

2017 ಉತ್ತರ ಪ್ರದೇಶ ಚುನಾವಣೆ ಫಲಿತಾಂಶ

Recommended Video

Weekend Curfew ತುಂಬಾ ಕಷ್ಟ ಆಗ್ತಿದೆ ! | People Reacts On Weekend Curfew | Oneindia Kannada

ಕಳೆದ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.

English summary
Uttar pradesh Assembly Election: Akhilesh Yadav offers Samajwadi party ticket to Sitting BJP MLA against Yogi in Gorakhpur Urban Constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X