ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಹಕ್ಕು ಬಿಡುವುದಿಲ್ಲ: ಅರ್ಜಿ ಸಲ್ಲಿಸಲು ಮುಸ್ಲಿಂ ಮಂಡಳಿ ನಿರ್ಧಾರ

|
Google Oneindia Kannada News

ಲಕ್ನೋ, ನವೆಂಬರ್ 27: ಅಯೋಧ್ಯಾ ವಿವಾದದ ತೀರ್ಪಿಗೆ ಸಂಬಂಧಿಸಿದಂತೆ ಸುನ್ನಿ ವಕ್ಫ್ ಮಂಡಳಿ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ನಿರಾಕರಿಸಿದ ಮರುದಿನ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ತಾನು ಮತ್ತೊಮ್ಮೆ ಕಾನೂನು ಸಮರ ನಡೆಸುವುದಾಗಿ ಹೇಳಿದೆ.

'ನಮ್ಮ ಸಾಂವಿಧಾನಿಕ ಹಕ್ಕನ್ನು ನಾವು ಬಳಸಿಕೊಳ್ಳುತ್ತೇವೆ. ಡಿಸೆಂಬರ್ ಮೊದಲ ವಾರದಲ್ಲಿ ಬಾಬ್ರಿ ಮಸೀದಿ ಪ್ರಕರಣದ ಕುರಿತು ತೀರ್ಪು ಪರಾಮರ್ಶನಾ ಅರ್ಜಿಯನ್ನು ಸಲ್ಲಿಸಲಿದ್ದೇವೆ' ಎಂದು ಮಂಡಳಿ ಬುಧವಾರ ತಿಳಿಸಿದೆ.

ಅಯೋಧ್ಯೆ ತೀರ್ಪು: ಮರುಪರಿಶೀಲನಾ ಅರ್ಜಿಗೆ ಒಲ್ಲೆ ಎಂದ ಸುನ್ನಿ ವಕ್ಫ್ ಬೋರ್ಡ್ಅಯೋಧ್ಯೆ ತೀರ್ಪು: ಮರುಪರಿಶೀಲನಾ ಅರ್ಜಿಗೆ ಒಲ್ಲೆ ಎಂದ ಸುನ್ನಿ ವಕ್ಫ್ ಬೋರ್ಡ್

ಅಯೋಧ್ಯಾ ತೀರ್ಪನ್ನು ಮರುಪ್ರಶ್ನಿಸದೆ ಇರಲು ಸುನ್ನಿ ವಕ್ಫ್ ಮಂಡಳಿ ನಿರ್ಧರಿಸಿರುವುದು ಕಾನೂನಿನಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಮುಸ್ಲಿಂ ಮಂಡಳಿ ತನ್ನ ನಿಲುವು ಬದಲಿಸಿಲ್ಲ ಎಂದು ಅದು ಹೇಳಿದೆ.

AIMPLB Decided To File Review Petition Against Ayodhya Verdict

ಅಯೋಧ್ಯಾ ಮೇಲ್ಮನವಿಗೆ ಮುಸ್ಲಿಂ ಸೆಲೆಬ್ರಿಟಿಗಳ ವಿರೋಧಅಯೋಧ್ಯಾ ಮೇಲ್ಮನವಿಗೆ ಮುಸ್ಲಿಂ ಸೆಲೆಬ್ರಿಟಿಗಳ ವಿರೋಧ

ಅಯೋಧ್ಯಾ ವಿವಾದದ ಕುರಿತು ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಮರುಪರಿಶೀಲನೆ ನಡೆಸುವಂತೆ ಅರ್ಜಿ ಸಲ್ಲಿಸುವುದಿಲ್ಲ ಎಂದು ಸುನ್ನಿ ವಕ್ಫ್ ಮಂಡಳಿ ಮಂಗಳವಾರ ತಿಳಿಸಿತ್ತು. ಹಾಗೆಯೇ ಮುಸ್ಲಿಂ ಅರ್ಜಿದಾರರಿಗೆ ಐದು ಎಕರೆ ಪರ್ಯಾಯ ಭೂಮಿ ನೀಡುವ ಆದೇಶದ ಕುರಿತು ಸಹ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಈ ಬಗ್ಗೆ ಮತ್ತೊಂದು ಸುತ್ತಿನ ಸಭೆ ನಡೆಸುವುದಾಗಿ ಮಂಡಳಿ ತಿಳಿಸಿತ್ತು.

English summary
AlMPLB has said that, it will file a review petition against the Supreme Court's verdict on Ayodhya case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X