ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಿಯಾಂಕ ಎಲ್ಲಿಂದ ಸ್ಪರ್ಧೆ? ಇನ್ನಷ್ಟು ಗೊಂದಲ ಹುಟ್ಟುಹಾಕಿದ ಕಾಂಗ್ರೆಸ್ ಟ್ವೀಟ್

|
Google Oneindia Kannada News

ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟ ಪ್ರಿಯಾಂಕ ಗಾಂಧಿ ವಾಧ್ರಾ ಎಲ್ಲಿಂದ ಸ್ಪರ್ಧಿಸಲಿದ್ದಾರೆ ಎನ್ನುವ ವಿಚಾರದಲ್ಲಿನ ಗೊಂದಲ ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರ ಟ್ವೀಟ್ ನಿಂದ ಇನ್ನಷ್ಟು ಹೆಚ್ಚಾಗಿದೆ.

ರಾಜಕಾರಣಕ್ಕೆ ಪ್ರಿಯಾಂಕ: ಶಾ, ಮೋದಿಗೆ ರಾಹುಲ್ 'ಸರ್ಜಿಕಲ್ ಸ್ಟ್ರೈಕ್'ರಾಜಕಾರಣಕ್ಕೆ ಪ್ರಿಯಾಂಕ: ಶಾ, ಮೋದಿಗೆ ರಾಹುಲ್ 'ಸರ್ಜಿಕಲ್ ಸ್ಟ್ರೈಕ್'

ತಾಯಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅನಾರೋಗ್ಯದಿಂದ ಸ್ಪರ್ಧಿಸುತ್ತಿಲ್ಲ, ಅವರ ಜಾಗದಲ್ಲಿ ಅಂದರೆ ಪೂರ್ವ ಉತ್ತರಪ್ರದೇಶದ ರಾಯ್ ಬರೇಲಿಯಿಂದ ಪ್ರಿಯಾಂಕ ಸ್ಪರ್ಧಿಸಲಿದ್ದಾರೆಂದು ಸುದ್ದಿಯಾಗಿತ್ತು.

ಅಮ್ಮನ ಕ್ಷೇತ್ರದಲ್ಲಿ ಮಗಳ ಸ್ಪರ್ಧೆ: ರಾಯ್‌ ಬರೇಲಿಗೆ ಪ್ರಿಯಾಂಕಾ? ಅಮ್ಮನ ಕ್ಷೇತ್ರದಲ್ಲಿ ಮಗಳ ಸ್ಪರ್ಧೆ: ರಾಯ್‌ ಬರೇಲಿಗೆ ಪ್ರಿಯಾಂಕಾ?

ಆದರೆ, ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ಮಾಡಿರುವ ಟ್ವೀಟ್, ಪ್ರಿಯಾಂಕ, ರಾಯ್ ಬರೇಲಿ ಅಥವಾ ಅಮೇಥಿ ಎರಡೂ ಕ್ಷೇತ್ರವನ್ನು ಬಿಟ್ಟು ಇನ್ನೊಂದು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರಾ ಎನ್ನುವ ಚರ್ಚೆ ಹುಟ್ಟುಹಾಕುವಂತೆ ಮಾಡಿದೆ.

AICC General Secretary Priyanka Gandhi from where she is contesting, Kapil Sibal tweet

ಪ್ರಿಯಾಂಕ ಸ್ಪರ್ಧೆಯ ವಿಚಾರದಲ್ಲಿ ಟ್ವೀಟ್ ಮಾಡಿರುವ ಕಪಿಲ್ ಸಿಬಲ್, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಬ್ಬರೂ, ' ಕಾಂಗ್ರೆಸ್ ಮುಕ್ತ್ ಭಾರತ್' ಎಂದು ಹೇಳುತ್ತಿರುತ್ತಾರೆ.

ಆದರೆ, ಈಗ ಪ್ರಿಯಾಂಕ ಆಗಮನದಿಂದ ... ಮುಕ್ತ್ ವಾರಣಾಸಿ?, ... ಮುಕ್ತ್ ಗೋರಖಪುರ? ಎಂದು ಟ್ವೀಟ್ ಮಾಡುವ ಮೂಲಕ, ಪ್ರಿಯಾಂಗ ಆ ಎರಡು ಕ್ಷೇತ್ರದಲ್ಲಿ ಎಲ್ಲಾದರೂ ಒಂದರಿಂದ ಸ್ಪರ್ಧಿಸಲಿದ್ದಾರಾ ಎನ್ನುವ ಕುತೂಹಲ ಕಾರ್ಯಕರ್ತರ ವಲಯದಲ್ಲಿ ಮೂಡುವಂತೆ ಮಾಡಿದ್ದಾರೆ.

ಕಳೆದ ಚುನಾವಣೆಯಲ್ಲಿ ವಾರಣಾಸಿಯಿಂದ ನರೇಂದ್ರ ಮೋದಿ ಮತ್ತು ಗೋರಖಪುರದಿಂದ ಯೋಗಿ ಆದಿತ್ಯನಾಥ್ ಆಯ್ಕೆಯಾಗಿದ್ದರು. ಯೋಗಿ, ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ನಂತರ ನಡೆದ ಮರುಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಪ್ರವೀಣ್ ಕುಮಾರ್ ನಿಷಾದ್ ಸಂಸದರಾಗಿ ಆಯ್ಕೆಯಾಗಿದ್ದರು.

English summary
AICC General Secretary Priyanka Gandhi from where she is contesting, Senior Congress leader Kapil Sibal tweet. Modiji and Amit Shah called for a, Congress mukt Bharat, With the entry of Priyanka Gandhi in UP (East) will we see a : .............mukt Varanasi ? .............mukt Gorakhpur ?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X