ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2022 ರ ವಿಧಾನಸಭಾ ಚುನಾವಣೆ: ಪೂರ್ವ ಯುಪಿಯಲ್ಲಿ ಚುನಾವಣಾ ಚಟುವಟಿಕೆಗಳು ಈಗಲೇ ಪ್ರಾರಂಭ

|
Google Oneindia Kannada News

ಲಕ್ನೋ, ಜೂ. 25: 2022 ರ ವಿಧಾನಸಭಾ ಚುನಾವಣೆಗೆ ಉತ್ತರಪ್ರದೇಶದಲ್ಲಿ ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣಾ ಕಾರ್ಯ ಆರಂಭಿಸಿದೆ. ಈಗಾಗಲೇ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಕಾರ್ಯ ತಂತ್ರಗಳನ್ನು ರೂಪಿಸುತ್ತಲಿದೆ.

ಈ ನಡುವೆ ಈಗಾಗಲೇ ''ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 300 ಸ್ಥಾನಗಳನ್ನು ಗೆಲ್ಲುವುದು ಖಚಿತ'' ಎಂದು ಉತ್ತರಪ್ರದೇಶ ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೊರೊನಾ ನಿರ್ವಹಣೆ ವಿಚಾರದಲ್ಲಿ ಯೋಗಿ ಆದಿತ್ಯನಾಥ್‌ ವಿರುದ್ದ ಅಸಮಾಧಾನ ವ್ಯಕ್ತವಾದ ಹಿನ್ನೆಲೆ ಮೇ ಅಂತ್ಯದಲ್ಲೇ ಬಿಜೆಪಿ ಚುನಾವಣಾ ತಯಾರಿ ಆರಂಭಿಸಿದೆ.

2022ರ ವಿಧಾನಸಭಾ ಚುನಾವಣಾ ಯುದ್ಧಕ್ಕೆ ಈಗಲೇ ಸಜ್ಜಾಗುತ್ತಿದೆ ಬಿಜೆಪಿ 2022ರ ವಿಧಾನಸಭಾ ಚುನಾವಣಾ ಯುದ್ಧಕ್ಕೆ ಈಗಲೇ ಸಜ್ಜಾಗುತ್ತಿದೆ ಬಿಜೆಪಿ

ಬಿಜೆಪಿ ಮಾತ್ರವಲ್ಲದೇ ಉತ್ತರಪ್ರದೇಶದ 2022 ರ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಹಲವಾರು ರಾಜಕೀಯ ಪಕ್ಷಗಳು ಸಭೆಗಳನ್ನು ನಡೆಸಲು ಆರಂಭಿಸಿದೆ. ಸ್ಥಳೀಯ ಮಟ್ಟದಲ್ಲಿ ತಮ್ಮ ತಮ್ಮ ಪಕ್ಷವನ್ನು ಗಟ್ಟಿಗೊಳಿಸುವ ಕಾರ್ಯ ಮಾಡುತ್ತಲಿದೆ. ಸಮಾಜವಾದಿ ಪಕ್ಷ, ಅಪ್ನಾ ದಳ, ಎಸ್‌ಬಿಎಸ್‌ಪಿ ಮತ್ತು ಇತರ ಸ್ಥಳೀಯ ಪಕ್ಷಗಳ ನಾಯಕರು ಸಭೆ ನಡೆಸುತ್ತಲಿದ್ದಾರೆ.

 2017 ರ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

2017 ರ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

2017 ರಲ್ಲಿ ಪೂರ್ವ ಉತ್ತರಪ್ರದೇಶದ 61 ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿ 34, ಅಪ್ನಾ ದಳ (ಎಸ್) ನಾಲ್ಕು, ಸುಹೆಲ್ದೇವ್ ಭಾರತೀಯ ಸಮಾಜ ಪಕ್ಷ (ಎಸ್‌ಬಿಎಸ್‌ಪಿ) ಮೂರು, ಎಸ್‌ಪಿ 12 ಸ್ಥಾನಗಳು ಮತ್ತು ಬಹುಜನ ಸಮಾಜ ಪಕ್ಷ ಏಳು ಸ್ಥಾನಗಳನ್ನು ಗೆದ್ದಿದೆ. ನಾಲ್ಕು ವರ್ಷಗಳ ಹಿಂದೆ 403 ವಿಧಾನಸಭಾ ಸದಸ್ಯ ಬಲದಲ್ಲಿ 312 ಸ್ಥಾನಗಳನ್ನು ಬಿಜೆಪಿ ತನ್ನ ತೆಕ್ಕೆಗೆ ಪಡೆದು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. 2017 ರ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಏಳು ಸ್ಥಾನಗಳನ್ನು ಮಾತ್ರ ತನ್ನದಾಗಿ ಉಳಿಸಿಕೊಂಡು ಹೀನಾಯ ಸೋಲು ಕಂಡಿದೆ. ಉಳಿದಂತೆ ಬಿಎಸ್‌ಪಿ 19, ಎಸ್‌ಪಿ 47 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಯುಪಿ 2022ರ ಚುನಾವಣೆ: 'ನಮಗೆ 300 ಸ್ಥಾನಗಳಲ್ಲಿ ಗೆಲುವು ಖಚಿತ' ಎಂದ ಬಿಜೆಪಿಯುಪಿ 2022ರ ಚುನಾವಣೆ: 'ನಮಗೆ 300 ಸ್ಥಾನಗಳಲ್ಲಿ ಗೆಲುವು ಖಚಿತ' ಎಂದ ಬಿಜೆಪಿ

 ಆಡಳಿತಾರೂಢ ಬಿಜೆಪಿಯ ಚುನಾವಣಾ ತಯಾರಿ

ಆಡಳಿತಾರೂಢ ಬಿಜೆಪಿಯ ಚುನಾವಣಾ ತಯಾರಿ

ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಕಳೆದ 50 ದಿನಗಳಲ್ಲಿ ವಾರಣಾಸಿ ಮತ್ತು ಇತರ ಪೂರ್ವ ಉತ್ತರ ಪ್ರದೇಶ ಜಿಲ್ಲೆಗಳಲ್ಲಿ 40 ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಲ್ಯಾಣ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಲು ಪಕ್ಷವು ತನ್ನ ಕಾರ್ಯಕರ್ತರಿಗೆ ತಿಳಿಸಿದೆ. ಉತ್ತರಪ್ರದೇಶದಲ್ಲಿ ಕೊರೊನಾ ನಿರ್ವಹಣೆ ವಿಚಾರದಲ್ಲಿ ಯೋಗಿ ಆದಿತ್ಯನಾಥ್‌ ನೇತೃತ್ವದ ಸರ್ಕಾರದ ವಿರುದ್ದ ಬಿಜೆಪಿ ಶಾಸಕರೇ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಂತೆ ಬಿಜೆಪಿಯು ಹಲವು ಸಭೆಗಳನ್ನು ನಡೆಸಿದೆ. ಅಷ್ಟೇ ಅಲ್ಲದೇ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್‌ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ನೇತೃತ್ವದಲ್ಲಿ ಹಲವಾರು ಸಭೆ ನಡೆದಿದೆ. ಅಷ್ಟೇ ಅಲ್ಲದೇ ಆರ್‌ಎಸ್‌ಎಸ್‌ ಮುಖಂಡರು ಕೂಡಾ ಸಭೆ ನಡೆಸಿದ್ದರು.

 ಉತ್ತರಪ್ರದೇಶದಲ್ಲಿ 2022 ರ ಚುನಾವಣೆಗೆ ಸಜ್ಜಾಗುತ್ತಿದೆ ರಾಜಕೀಯ ಪಕ್ಷಗಳು

ಉತ್ತರಪ್ರದೇಶದಲ್ಲಿ 2022 ರ ಚುನಾವಣೆಗೆ ಸಜ್ಜಾಗುತ್ತಿದೆ ರಾಜಕೀಯ ಪಕ್ಷಗಳು

ಮುಂದಿನ ವರ್ಷ ಆರಂಭದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ರಾಜಕೀಯ ಪಕ್ಷಗಳು ರಾಜ್ಯದ ಪೂರ್ವ ಪ್ರದೇಶದಿಂದ ತಮ್ಮ ಚುನಾವಣಾ ಚಟುವಟಿಕೆಗಳನ್ನು ಪ್ರಾರಂಭಿಸಿದೆ. ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಮರಳುವ ಆಶಯದಲ್ಲಿರುವ ಸಮಾಜವಾದಿ ಪಕ್ಷ (ಎಸ್‌ಪಿ) ವಾರಣಾಸಿ ಮತ್ತು ಪಕ್ಕದ ಪ್ರದೇಶಗಳಲ್ಲಿ ಮಾತ್ರ ಸುಮಾರು 20 ಸಭೆಗಳನ್ನು ಆಯೋಜಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್‌ಪಿ ನಾಯಕ ಅಶುತೋಷ್ ಸಿನ್ಹಾ, ''2022 ರ ಚುನಾವಣೆಗೆ ಸಜ್ಜಾಗಲು ವಾರಣಾಸಿ, ಜೌನ್‌ಪುರ, ಸೋನ್‌ಭದ್ರ, ಗಾಜಿಪುರ, ಮತ್ತು ಚಂದೌಲಿಯದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಲಾಗಿದೆ. ಈ ಜಿಲ್ಲೆಗಳಲ್ಲಿ ಜಿಲ್ಲಾ ಪರಿಷತ್ ಮುಖ್ಯಸ್ಥರನ್ನು ಭೇಟಿ ಮಾಡಿದ್ದೇನೆ. ಬಲ್ಲಿಯಾ, ಅಜಮ್‌ಗಢ, ಭಾದೋಹಿ ಮತ್ತು ಮಿರ್ಜಾಪುರದಲ್ಲಿ ಹಲವಾರು ಸಭೆಗಳು ನಡೆದಿವೆ," ಎಂದು ತಿಳಿಸಿದ್ದಾರೆ. "ಹಿಂದುಳಿದ ವರ್ಗ (ಒಬಿಸಿ) ಮತ್ತು ಪರಿಶಿಷ್ಟ ಜಾತಿ (ಎಸ್‌ಸಿ) ಮತದಾರರು 50 ಕ್ಕೂ ಹೆಚ್ಚು ಸ್ಥಾನಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವ 10 ಜಿಲ್ಲೆಗಳಲ್ಲಿ ತಾವು ಕೂಡಾ ಸಭೆ ನಡೆಸುತ್ತಿರುವುದಾಗಿ ಬಿಜೆಪಿ, ಅಪ್ನಾ ದಳ, ಎಸ್‌ಬಿಎಸ್‌ಪಿ ಮತ್ತು ಇತರ ಸ್ಥಳೀಯ ಪಕ್ಷಗಳ ನಾಯಕರು ಮಾಹಿತಿ ನೀಡಿದ್ದಾರೆ. ರಾಜಕೀಯ ತಜ್ಞರು ಹೇಳುವಂತೆ ಒಬಿಸಿ ಸಮುದಾಯ ಮತ್ತು ದಲಿತರು ಈ ಪ್ರದೇಶದ ಜನಸಂಖ್ಯೆಯ ಸುಮಾರು ಶೇ.60 ರಷ್ಟಿದ್ದಾರೆ. ಪ್ರತಿ ರಾಜಕೀಯ ಪಕ್ಷವು ಈ ಸಮುದಾಯದ ಬೆಂಬಲವನ್ನು ಗಳಿಸಲು ಪ್ರಯತ್ನಿಸುತ್ತಿದೆ.

 ರಾಜಕೀಯ ವಿಶ್ಲೇಷಕರು ಏನು ಹೇಳ್ತಾರೆ?

ರಾಜಕೀಯ ವಿಶ್ಲೇಷಕರು ಏನು ಹೇಳ್ತಾರೆ?

ಉತ್ತರಪ್ರದೇಶ ವಿಧಾನ ಸಭೆ ಚುನಾವಣೆಯ ಬಗ್ಗೆ ಪ್ರತಿಕ್ರಿಯಿಸಿದ ರಾಜಕೀಯ ವಿಶ್ಲೇಷಕರಾದ ಸತೀಶ್ ಕುಮಾರ್, ''ಉತ್ತರಪ್ರದೇಶದಲ್ಲಿ ರಾಜಕೀಯ ಪಕ್ಷಗಳು ತಮ್ಮ ನೆಲೆಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿವೆ. ಒಬಿಸಿ ಮತ್ತು ಎಸ್‌ಸಿ ಸಮುದಾಯದತ್ತ ರಾಜಕೀಯ ಪಕ್ಷಗಳು ಗಮನ ಹರಿಸುತ್ತಿವೆ. 2017 ರ ವಿಧಾನಸಭಾ ಚುನಾವಣೆಗೆ ಮುಂಚೆಯೇ ಬಿಜೆಪಿ ಕಾರ್ಯತಂತ್ರ ರೂಪಿಸಿ ಗೆಲುವು ತನ್ನದಾಗಿಸಿಕೊಂಡಿದೆ. ಈ ಪ್ರದೇಶದಲ್ಲಿ ಬಲವಾದ ಬೆಂಬಲವನ್ನು ಹೊಂದಿರುವ ಎಸ್‌ಪಿ ಖಂಡಿತವಾಗಿಯೂ ಈ ಬಾರಿ ಹೆಚ್ಚಿನ ಸ್ಥಾನ ಪಡೆಯಲಿದೆ. ಬಿಜೆಪಿಯಲ್ಲಿ ಅಧಿಕಾರ ವಿರೋಧಿ ಮನಸ್ಥಿತಿಗಳು, ಎಸ್‌ಬಿಎಸ್‌ಪಿ ಮತ್ತು ಬಿಜೆಪಿಯಂತಹ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳು ಎಸ್‌ಪಿಗೆ ಪ್ರಯೋಜನವನ್ನು ನೀಡುತ್ತವೆ,'' ಎಂದು ಅಭಿಪ್ರಾಯಿಸಿದ್ದಾರೆ.

 ಯುಪಿ ರಾಜಕೀಯದ ಬಗ್ಗೆ ಇತರರು ಹೇಳಿದ್ದೇನು?

ಯುಪಿ ರಾಜಕೀಯದ ಬಗ್ಗೆ ಇತರರು ಹೇಳಿದ್ದೇನು?

ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ವಿಭಾಗದ ಡೀನ್ ಕೌಶಲ್ ಕಿಶೋರ್ ಮಿಶ್ರಾ ಮಾತನಾಡಿ, ''ಪೂರ್ವ ಉತ್ತರ ಪ್ರದೇಶ ಯಾವಾಗಲೂ ರಾಜಕೀಯವಾಗಿ ಮಹತ್ವದ ಪ್ರದೇಶವಾಗಿದೆ. ಆದರೆ ವಾರಣಾಸಿ 2014 ರಿಂದ ಪ್ರಧಾನಿ ನರೇಂದ್ರ ಮೋದಿಯವರ ಸಂಸದೀಯ ಕ್ಷೇತ್ರವಾಗಿರುವುದರಿಂದ ಇದರ ಮಹತ್ವ ಹೆಚ್ಚಾಗಿದೆ. ಸಣ್ಣ ಪಕ್ಷಗಳು ಪೂರ್ವ ಉತ್ತರ ಪ್ರದೇಶದ ಮೇಲೆ ಕೇಂದ್ರೀಕರಿಸುತ್ತಿವೆ. ಚುನಾವಣೆಗೆ ಏಳು ತಿಂಗಳು ಇದ್ದರೂ ಪಕ್ಷಗಳು ಈಗಲೇ ತಯಾರಿ ಆರಂಭಿಸಿದೆ. ಕೆಲವು ಸಣ್ಣ ಪಕ್ಷಗಳು ತಮ್ಮ ಜಾತಿಗಳ ಬೆಂಬಲದಿಂದಾಗಿ ಐದರಿಂದ 10 ಸ್ಥಾನಗಳಲ್ಲಿ ಪ್ರಭಾವ ಬೀರಲಿದೆ. ಇತರರು 10 ರಿಂದ 20 ಸ್ಥಾನಗಳಲ್ಲಿ ಪ್ರಭಾವ ಬೀರುತ್ತಾರೆ. ಈ ರಾಜಕೀಯ ಪಕ್ಷಗಳು ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆದ್ದು ಅಧಿಕಾರ ಪಡೆಯಲು ಸಾಧ್ಯವಿಲ್ಲದಿದ್ದರೂ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಮತವನ್ನು ಮಾತ್ರ ಹಾಳು ಮಾಡಬಹುದು,'' ಎಂದಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Ahead of 2022 assembly polls, parties begin electoral activity from eastern Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X