ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ ಅಗ್ನಿಪಥ್ ಪ್ರತಿಭಟನೆ: 300 ಬಂಧನ- 2 ತಿಂಗಳ ಕಾಲ 144 ಸೆಕ್ಷನ್ ಜಾರಿ

|
Google Oneindia Kannada News

ಲಕ್ನೋ ಜೂನ್ 18: ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನೆಗೆ ಸಂಬಂಧಿಸಿದಂತೆ 300 ಬಂಧಿಸಲಾಗಿದೆ. ಜೊತೆಗೆ 2 ತಿಂಗಳ ಕಾಲ 144 ಸೆಕ್ಷನ್ ವಿಧಿಸಲಾಗಿದೆ. ಬಂಧಿತ 300 ಮಂದಿಯಲ್ಲಿ 109 ಜನರು ಬಲಿಯಾದಿಂದ ಬಂದಿದ್ದು, 70 ಮಂದಿ ಮಥುರಾದಿಂದ, 31 ಮಂದಿ ಅಲಿಗಢದಿಂದ, ವಾರಣಾಸಿಯಿಂದ (27) ಮತ್ತು ಗೌತಮ್ ಬುಧ್ ನಗರದಿಂದ (15) ಇದ್ದಾರೆ. ಶುಕ್ರವಾರ, ಉತ್ತರ ಪ್ರದೇಶದ ಬಲ್ಲಿಯಾ ರೈಲು ನಿಲ್ದಾಣದಲ್ಲಿ 'ಅಗ್ನಿಪಥ' ನೇಮಕಾತಿ ಯೋಜನೆಯ ವಿರುದ್ಧ ಪ್ರತಿಭಟನೆಯ ಸಂದರ್ಭದಲ್ಲಿ ಗುಂಪೊಂದು ರೈಲನ್ನು ಧ್ವಂಸಗೊಳಿಸಿತು.

ರಾಷ್ಟ್ರವ್ಯಾಪಿ ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನೆ ನಾಲ್ಕನೇ ದಿನವಾದ ಶನಿವಾರವೂ ಮುಂದುವರಿದಿದೆ. ತೆಲಂಗಾಣದ ಸಿಕಂದರಾಬಾದ್‌ನಲ್ಲಿ ಪೊಲೀಸ್ ಫೈರಿಂಗ್‌ನಲ್ಲಿ ಒಬ್ಬ ವ್ಯಕ್ತಿಯನ್ನು ಗುಂಡಿಕ್ಕಿ ಕೊಲ್ಲಲಾಯಿಗಿದೆ. ಜೊತೆಗೆ ರೈಲುಗಳು ಬೆಂಕಿಗೆ ಆಹುತಿಯಾಗಿದ್ದು ಸಾರ್ವಜನಿಕ ಮತ್ತು ಖಾಸಗಿ ವಾಹನಗಳ ಮೇಲೆ ದಾಳಿ ಮಾಡಲಾಗಿದೆ. ಅನೇಕ ರಾಜ್ಯಗಳಲ್ಲಿ ರೈಲ್ವೇ ನಿಲ್ದಾಣಗಳು ಮತ್ತು ಹೆದ್ದಾರಿಗಳು ಯುದ್ಧಭೂಮಿಯಾಗಿ ಮಾರ್ಪಟ್ಟಿರುವುದು ಕಂಡುಬಂದಿದೆ. ವಿವಾದಾತ್ಮಕ ರಕ್ಷಣಾ ನೇಮಕಾತಿ ಯೋಜನೆಯಾದ ಅಗ್ನಿಪಥ್ ವಿರುದ್ಧದ ಪ್ರತಿಭಟನೆಗಳ ನಡುವೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತು ಸೇನಾ ಮುಖ್ಯಸ್ಥರ ಭರವಸೆಗಳು ಕೋಪಗೊಂಡ ಯುವಕರನ್ನು ತಣ್ಣಗಾಗಿಸಲಿಲ್ಲ.

300 ಆರೋಪಿಗಳ ಅರೆಸ್ಟ್

300 ಆರೋಪಿಗಳ ಅರೆಸ್ಟ್

ನಿನ್ನೆ ಅಗ್ನಿಪಥ್ ಯೋಜನೆ ವಿರುದ್ಧ ನಡೆದ ಹಿಂಸಾತ್ಮಕ ಪ್ರತಿಭಟನೆಗಾಗಿ ಬಲಿಯಾ ಪೊಲೀಸರು 300 ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಬಲ್ಲಿಯಾ ರೈಲು ನಿಲ್ದಾಣ ಸೇರಿದಂತೆ ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲಿ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಜಿಲ್ಲೆಯಲ್ಲಿ 2 ತಿಂಗಗಳ ಕಾಲ 144 ಸೆಕ್ಷನ್ ವಿಧಿಸಲಾಗಿದೆ ಎಂದು ಡಿಎಂ ಹೇಳಿದರು.

11 ವಾಹನಗಳಿಗೆ ಬೆಂಕಿ

11 ವಾಹನಗಳಿಗೆ ಬೆಂಕಿ

ಯುಪಿಯ ಅಲಿಗಢದಲ್ಲಿ ಅಗ್ನಿಪಥ್ ಹಿಂಸಾಚಾರದಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿವೆ. ಜತ್ತರಿ ಹೊರಠಾಣೆ ಉಸ್ತುವಾರಿ ಜಿತೇಂದ್ರ ಸಿಂಗ್ ಅವರು 500 ಅಪರಿಚಿತ ಮತ್ತು 66 ಹೆಸರಿಸಲಾದ ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಎಡಿಜಿ ವಲಯ ಆಗ್ರಾದ ಕಾರು ಸೇರಿದಂತೆ ಕನಿಷ್ಠ 11 ವಾಹನಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ಇದುವರೆಗೆ 40ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.

200 ಕೋಟಿ ರೂ.ಗೂ ಹೆಚ್ಚು ನಷ್ಟ

200 ಕೋಟಿ ರೂ.ಗೂ ಹೆಚ್ಚು ನಷ್ಟ

ರೈಲ್ವೆ ಆವರಣದಲ್ಲಿ ವಿಧ್ವಂಸಕ ಘಟನೆಗಳು 200 ಕೋಟಿ ರೂ.ಗೂ ಹೆಚ್ಚು ನಷ್ಟಕ್ಕೆ ಕಾರಣವಾಗಿವೆ ಎಂದು ದಾನಪುರ ರೈಲು ವಿಭಾಗದ ಡಿಆರ್‌ಎಂ ತಿಳಿಸಿದ್ದಾರೆ. ಇದರಿಂದಾಗಿ ಅಗ್ನಿಪಥ್ ಯೋಜನೆಯ "ಹಿಂತಿರುಗುವಿಕೆ ಮತ್ತು ಮರು ಚರ್ಚೆ"ಗಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಆಪ್ ಸಂಸದ ರಾಘವ್ ಚಡ್ಡಾ ಪತ್ರ ಬರೆದಿದ್ದಾರೆ. ಜೊತೆಗೆ ಅಗ್ನಿಪಥ್ ಯೋಜನೆಗೆ ಸಂಬಂಧಿಸಿದಂತೆ ಜಮ್ಮುವಿನಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ

ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ

ಇನ್ನೂ ಇಂದು ಬಿಹಾರದ ಮುಂಗೇರ್‌ನಲ್ಲಿ ವಿದ್ಯಾರ್ಥಿಗಳು ಟೈರ್ ಸುಟ್ಟು ಬಿಡಿಒ ವಾಹನಕ್ಕೆ ಹಾನಿ ಮಾಡಿದ್ದಾರೆ. ಬಿಹಾರದ ಮುಂಗೇರ್‌ನ ತಾರಾಪುರ ಸುಲ್ತಂಗಂಜ್ ಮುಖ್ಯರಸ್ತೆಯಲ್ಲಿ ವಿದ್ಯಾರ್ಥಿಗಳು ಟೈರ್‌ಗಳನ್ನು ಸುಟ್ಟು ಪ್ರತಿಭಟಿಸಿದ್ದಾರೆ. ಆಕ್ರೋಶಗೊಂಡ ವಿದ್ಯಾರ್ಥಿಗಳು ತಾರಾಪುರ ಬಿಡಿಒ ಅವರ ಸರ್ಕಾರಿ ವಾಹನಕ್ಕೂ ಹಾನಿ ಮಾಡಿದ್ದಾರೆ.

English summary
Agnipath protest: 109 held in UP's Ballia- Sec 144 imposed for 2 months
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X