• search
 • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಂಸ್ಕೃತ ವಿವಿ ವಿದ್ಯಾರ್ಥಿ ಚುನಾವಣೆ: ಎಲ್ಲ ನಾಲ್ಕೂ ಸ್ಥಾನಗಳಲ್ಲಿ ಎಬಿವಿಪಿಗೆ ಸೋಲು

|

ವಾರಣಾಸಿ, ಜನವರಿ 9: ವಾರಣಾಸಿಯ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿ ಒಕ್ಕೂಟದ ಚುನಾವಣೆಯಲ್ಲಿ ಎಲ್ಲ ನಾಲ್ಕೂ ಸೀಟುಗಳಲ್ಲಿ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್‌ಯುಐ) ಜಯಭೇರಿ ಭಾರಿಸಿದೆ. ಎನ್‌ಎಸ್‌ಯುಐ ಎದುರು ಆರೆಸ್ಸೆಸ್‌ನ ವಿದ್ಯಾರ್ಥಿ ಘಟಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸೋಲಿನ ಮುಖಭಂಗ ಅನುಭವಿಸಿದೆ.

   ನರೇಂದ್ರ ಮೋದಿ ಸಂಪುಟ ಸೇರಿರುವ ಧಾರವಾಡದ ಸಂಸದ ಪ್ರಹ್ಲಾದ್ ಜೋಶಿ ಪರಿಚಯ

   ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಎನ್‌ಎಸ್‌ಯುಐನ ಶಿವಮ್ ಶುಕ್ಲಾ, ಎಬಿವಿಪಿಯ ಹರ್ಷಿತ್ ಪಾಂಡೆ ವಿರುದ್ಧ ಭಾರಿ ಅಂತರದ ಜಯಗಳಿಸಿದರು. ಚಂದನ್ ಕುಮಾರ್ ಮಿಶ್ರಾ ಉಪಾಧ್ಯಕ್ಷರಾಗಿ, ಅವಿನಾಶ್ ಪಾಂಡೆ ಪ್ರಧಾನ ಕಾರ್ಯದರ್ಶಿ ಮತ್ತು ರಜನಿಕಾಂತ್ ದುಬೆ ಗ್ರಂಥಪಾಲಕ ಹುದ್ದೆಗಳಿಗೆ ಆಯ್ಕೆಯಾದರು.

   ಮಹಾರಾಷ್ಟ್ರದ ಆರ್ ಎಸ್ ಎಸ್ ಗರ್ಭಗುಡಿಯಲ್ಲೇ ಮುಗ್ಗರಿಸಿದ ಬಿಜೆಪಿ

   ಚುನಾವಣೆಯಲ್ಲಿ ಶಿವಮ್ ಶುಕ್ಲಾ 709 ಮತಗಳನ್ನು ಪಡೆದರೆ, ಅವರ ಎದುರಾಳಿಯಾಗಿದ್ದ ಹರ್ಷಿತ್ ಪಾಂಡೆ ಕೇವಲ 224 ಮತಗಳನ್ನು ಪಡೆದರು. ಉಪಾಧ್ಯಕ್ಷ ಚಂದನ್ ಕುಮಾರ್ ಮಿಶ್ರಾ 553 ಮತಗಳನ್ನು ಗಳಿಸಿದರು. ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಎನ್‌ಎಸ್‌ಯುಐನ ಅವಿನಾಶ್ ಪಾಂಡೆ 487 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಎಬಿವಿಪಿಯ ಗೌರವ್ ದುಬೆ 424 ಮತಗಳನ್ನು ಗಳಿಸಿದರು. ಗ್ರಂಥಪಾಲಕ ಹುದ್ದೆಗಾಗಿ ರಜನಿಕಾಂತ್ ದುಬೆ 567 ಮತ ಗಳಿಸಿದರೆ, ಅಜಯ್ ಕುಮಾರ್ ಮಿಶ್ರಾ 482 ಮತಗಳನ್ನು ಗಳಿಸಿದರು. ಅಶುತೋಷ್ ಉಪಾಧ್ಯಾಯ 227, ಶಿವ ಓಂ ಮಿಶ್ರಾ 106 ಮತ್ತು ಅರ್ಪಣ್ ತಿವಾರಿ 21 ಮತಗಳನ್ನು ಪಡೆದರು.

   ರಾಜ್ಯದ ಆರು ನಗರಸಭೆ, ಪುರಸಭೆ, ಪಂಚಾಯಿತಿ ಚುನಾವಣೆ: ಸಿದ್ಧತೆಗೆ ಸೂಚನೆ

   ವಿವಿ ಆವರಣದಲ್ಲಿ ಯಾವುದೇ ವಿವಾದ ಮತ್ತು ಗಲಾಟೆಗಳಿಗೆ ಅವಕಾಶ ನೀಡದಂತೆ ಗೆದ್ದ ಅಭ್ಯರ್ಥಿಗಳು ಸಂಭ್ರಮಾಚರಣೆಗಳನ್ನು ಮಾಡುವಂತಿಲ್ಲ ಎಂದು ಚುನಾವಣಾಧಿಕಾರಿಯಾಗಿದ್ದ ಪ್ರೊ. ಶೈಲೇಶ್ ಕುಮಾರ್ ಮಿಶ್ರಾ ಸೂಚಿಸಿದರು. ಗೆದ್ದ ಅಭ್ಯರ್ಥಿಗಳನ್ನು ಪೊಲೀಸ್ ಭದ್ರತೆಯಲ್ಲಿ ಮನೆಗೆ ಕಳುಹಿಸಿಕೊಡಲಾಯಿತು.

   ದೆಹಲಿ ವಿಧಾನಸಭೆ ಚುನಾವಣೆಗೆ ಮುಹೂರ್ತ: ಮತದಾನ, ಫಲಿತಾಂಶದ ದಿನಾಂಕ ಪ್ರಕಟ

   ವಿಶ್ವವಿದ್ಯಾಲಯದ 1950 ವಿದ್ಯಾರ್ಥಿಗಳ ಪೈಕಿ ಶೇ 50.82ರಷ್ಟು ಅಂದರೆ ಕೇವ 991 ವಿದ್ಯಾರ್ಥಿಗಳು ಮತ ಚಲಾಯಿಸಿದ್ದರು. ಇದರಲ್ಲಿ 931 ವಿದ್ಯಾರ್ಥಿಗಳು ಹಾಗೂ 60 ವಿದ್ಯಾರ್ಥಿನಿಯರು ಇದ್ದರು.

   English summary
   NSUI has registered win in all four seats against ABVP in the students union's elections in Sampurnanand Sanskrit Vishwavidyalaya in Varanasi.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X