• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯೋಗಿ, ಭಾಗ್ವತ್ ನಿಂದನೆ: ಗಾಯಕಿ ಹರ್ದ್ ಕೌರ್ ವಿರುದ್ಧ ದೇಶದ್ರೋಹ ಪ್ರಕರಣ

|

ನವದೆಹಲಿ, ಜೂನ್ 20: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ವಿರುದ್ಧ ನಿಂದನಾತ್ಮಕ ಫೇಸ್‌ಬುಕ್ ಪೋಸ್ಟ್ ಪ್ರಕಟಿಸಿದ್ದಕ್ಕಾಗಿ ರಾಪ್ಪರ್ ತರಣ್ ಕೌರ್ ದಿಲ್ಲೋನ್ ಅಲಿಯಾಸ್ ಹರ್ದ್ ಕೌರ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ.

ವಾರಣಾಸಿಯ ವಕೀಲ ಶಶಾಂಕ್ ಶೇಖರ್ ಅವರು ನೀಡಿದ ದೂರಿನ ಅನ್ವಯ ಇಂಗ್ಲೆಂಡ್ ಮೂಲದ ಗಾಯಕಿ ಹರ್ದ್ ಕೌರ್ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 124ಎ (ದೇಶದ್ರೋಹ), 153ಎ (ಧಾರ್ಮಿಕ ನೆಲೆಯ ಆಧಾರದಲ್ಲಿ ವಿಭಿನ್ನ ಗುಂಪುಗಳ ನಡುವೆ ವೈಷಮ್ಯ ಮೂಡಿಸುವುದು) 500 (ಮಾನನಷ್ಟ) ಮತ್ತು ಐಟಿ ಕಾಯ್ದೆಯ ಸೆಕ್ಷನ್ 66 ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ದೇಶವನ್ನು ಟೀಕೆ ಮಾಡುವುದು ದೇಶ ದ್ರೋಹವಲ್ಲ: ಕಾನೂನು ಆಯೋಗ

ತಮ್ಮ ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು 'ರೇಪ್ ಮ್ಯಾನ್' ಎಂದು ನಿಂದಿಸಿದ್ದ ಹರ್ದ್ ಕೌರ್, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ ಅವರ ಸಾವಿಗೆ ಕಾರಣ ಎಂದು ಆರೋಪಿಸಿದ್ದರು.

ಮುಂಬೈ ಮೇಲೆ ನಡೆದ 26/11ರ ದಾಳಿ ಹಾಗೂ ಪುಲ್ವಾಮಾ ಉಗ್ರರ ದಾಳಿಗಳು ಸೇರಿದಂತೆ ಭಾರತದಲ್ಲಿ ನಡೆದ ಅನೇಕ ದಾಳಿಗಳಿಗೆ ಮೋಹನ್ ಭಾಗವತ್ ಕಾರಣ ಎಂದೂ ದೂರಿದ್ದರು.

ಖಾಸಗಿ ವಿವಿಗಳಲ್ಲಿ ದೇಶ ವಿರೋಧಿ ಚಟುವಟಿಕೆಗೆ ತಡೆ: ಶೀಘ್ರದಲ್ಲೇ ಸುಗ್ರೀವಾಜ್ಞೆ

ಕೌರ್ ಅವರ ಹೇಳಿಕೆಗಳಿಂದ ತೀವ್ರ ನೋವಾಗಿದ್ದು, ಹೀಗಾಗಿ ಅವರ ವಿರುದ್ಧ ದೂರು ದಾಖಲಿಸಿರುವುದಾಗಿ ಶೇಖರ್ ತಿಳಿಸಿದ್ದಾರೆ.

ಈ ಪ್ರಕರಣದ ತನಿಖೆಯನ್ನು ಅಪರಾಧ ದಳದ ವಿಚಕ್ಷಣಾ ಘಟಕಕ್ಕೆ ವಹಿಸಲಾಗುತ್ತಿದೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಅಮರ್ ಉಜಾಲ ತಿಳಿಸಿದ್ದಾರೆ.

ಯೋಗಿ ವಿರುದ್ಧ 'ಆಕ್ಷೇಪಾರ್ಹ' ಪೋಸ್ಟ್; ಪತ್ರಕರ್ತ ಕನೋಜಿಯಾ ಬಿಡುಗಡೆ

ರಾಪ್ ಸಾಂಗ್‌ಗಳನ್ನು ಹಾಡುವ ಮೂಲಕ ಖ್ಯಾತರಾಗಿರುವ ಹರ್ದ್ ಕೌರ್, ಬಾಲಿವುಡ್‌ನ ಸಿನಿಮಾಗಳಲ್ಲಿಯೂ ಹಾಡಿದ್ದಾರೆ. 39 ವರ್ಷದ ಕೌರ್, ಭಾರತದಲ್ಲಿ ಜನಿಸಿ ಬಳಿಕ ಇಂಗ್ಲೆಂಡ್‌ಗೆ ತೆರಳಿ ಅಲ್ಲಿ ನೆಲೆಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rapper Hard Kaur was charged under various sections of IPC including sedition for abbusive comment in her Facebook posts against Uttar Pradesh Chief Minister Yogi Adityanath and RSS chief Mohan Bhagwat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more