ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸರಾಕ್ಕಾಗಿ ರಾವಣನ ಪ್ರತಿಕೃತಿ ನಿರ್ಮಿಸುವ ಮುಸ್ಲಿಂ ಕುಟುಂಬ

|
Google Oneindia Kannada News

ರಾಂಪುರ(ಉತ್ತರ ಪ್ರದೇಶ), ಅಕ್ಟೋಬರ್ 16: ಕೋಮು ಸೌಹಾರ್ದದ ಸಂಕೇತ ಎಂಬಂತೆ ಉತ್ತರ ಪ್ರದೇಶದ ರಾಂಪುರದಲ್ಲಿ ಹಲವು ದಶಕಗಳಿಂದಲೂ ದಸರಾಕ್ಕಾಗಿ ರಾವಣನ ಪ್ರತಿಕೃತಿಯನ್ನು ನಿರ್ಮಿಸುವ ಕೆಲಸವನ್ನು ಮುಸ್ಲಿಂ ಕುಟುಂಬವೊಂದು ಮಾಡುತ್ತಿದೆ!

ಮೈಸೂರು ದಸರಾ - ವಿಶೇಷ ಪುರವಣಿ

ಉತ್ತರ ಭಾರತದಲ್ಲಿ ಹತ್ತು ದಿನಗಳ ದಸರಾ ಆಚರಣೆಯ ಕೊನೆಯ ದಿನ ಅಂದರೆ ವಿಜಯ ದಶಮಿಯ ದ್ಯೋತಕವಾಗಿ ರಾವಣನ ಪ್ರತಿಕೃತಿಯನ್ನು ದಹಿಸಿ, ಆ ಮೂಲಕ ದುಷ್ಟಶಕ್ತಿಯ ವಿರುದ್ಧ ಶಿಷ್ಟರ ಗೆಲುವನ್ನು ಸಂಭ್ರಮಿಸಲಾಗುತ್ತದೆ.

ಗಣೇಶ ಹಬ್ಬ ಆಚರಣೆಗೆ ಕೈಜೋಡಿಸಿದ ಮುಸ್ಲಿಂ ಭಾಂದವರುಗಣೇಶ ಹಬ್ಬ ಆಚರಣೆಗೆ ಕೈಜೋಡಿಸಿದ ಮುಸ್ಲಿಂ ಭಾಂದವರು

ಅದಕ್ಕಾಗಿ ಅಗತ್ಯವಿರುವ ರಾವಣನ ಪ್ರತಿಕೃತಿಯನ್ನು ಕಳೆದ ನಾಲ್ಕೈದು ದಶಕಗಳಿಂದಲೂ ಇಲ್ಲಿನ ಮುಸ್ಲಿಂ ಕುಟುಂಬವೊಂದು ಮಾಡುತ್ತಿದೆ. ಜಾಹಿದ್ ಖಾನ್ ಎಂಬುವವರ ಕುಟುಂಬ ಈ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದು, 'ನಮ್ಮ ಊರಿನಲ್ಲಿ ಹಿಂದುಗಳೂ ಇದ್ದಾರೆ, ಮುಸ್ಲಿಮರೂ ಇದ್ದಾರೆ. ಆದರೆ ಯಾವುದೇ ರೀತಿಯ ಕೋಮುಗಲಭೆಗಳಿಲ್ಲದೆ ನಾವೆಲ್ಲರೂ ಸೌಹಾರ್ದದಿಂದಿದ್ದೇವೆ. ನಾವೂ ಹಿಂದುಗಳ ಹಬ್ಬಗಳನ್ನು ಆಚರಿಸುತ್ತೇವೆ. ಅವರೂ ನಮ್ಮ ಹಬ್ಬಗಳನ್ನು ಆಚರಿಸುತ್ತಾರೆ' ಎಂದು ಹೆಮ್ಮೆ ತುಂಬಿದ ಕಣ್ಣುಗಳಲ್ಲಿ ಹೇಳುತ್ತಾರೆ.

A muslim family making Ravana effigies for decades

ಮೈಸೂರು: ಹಿಂದು-ಮುಸ್ಲಿಂ ಒಟ್ಟಾಗಿ ಗೌರಿ-ಗಣೇಶ ಹಬ್ಬ ಆಚರಣೆಮೈಸೂರು: ಹಿಂದು-ಮುಸ್ಲಿಂ ಒಟ್ಟಾಗಿ ಗೌರಿ-ಗಣೇಶ ಹಬ್ಬ ಆಚರಣೆ

"ನಮ್ಮ ಬಳಿ ಹಲವರು ಕೆಲಸ ಮಾಡುತ್ತಾರೆ. ಅವರಲ್ಲಿ ಹಿಂದುಗಳೂ, ಮುಸ್ಲಿಮರೂ ಇದ್ದಾರೆ. ಎಲ್ಲರೂ ಸೇರಿ ರಾವಣನ ಪ್ರತಿಕೃತಿಯನ್ನು ತಯಾರಿಸುತ್ತೇವೆ. ನಾವು ತಯಾರಿಸಿದ ಪ್ರತಿಕೃತಿಗಳೇ ಉತ್ತರ ಪ್ರದೇಶ, ಉತ್ತರಾಖಂಡ್, ಪಂಜಾಬ್, ದೆಹಲಿ, ಹರ್ಯಾಣ ಮುಂತಾದ ರಾಜ್ಯಗಳಿಗೆ ಹೋಗುತ್ತದೆ" ಎನ್ನುತ್ತಾರೆ ಜಾಹಿದ್ ಖಾನ್.

English summary
Setting an example of communal harmony, a Muslim family in Uttar Pradesh's Rampur city has been making Ravana effigies for Dussehra celebrations for decades.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X