ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾದಿಂದ 66 ವರ್ಷದ ಕ್ಯಾನ್ಸರ್ ರೋಗಿ ಚೇತರಿಕೆ, ವೈದ್ಯರು ಸಂತಸ

|
Google Oneindia Kannada News

ಲಕ್ನೌ, ಮೇ 23: ಕೊರೊನಾ ವೈರಸ್ ಗೆ ಯಾವುದೇ ವಯಸ್ಸಿನ ಮಿತಿಯಿಲ್ಲ. ನಿರ್ದಿಷ್ಟ ವಯಸ್ಸು, ಲಿಂಗ, ಪ್ರದೇಶ ಎಂಬ ಗಡಿಯಿಲ್ಲ. ಒಬ್ಬ ಮನುಷ್ಯನಿಂದ ಮತ್ತೊಬ್ಬ ಮನುಷ್ಯನಿಗೆ ಹರಡುತ್ತಿದೆ.

Recommended Video

ತರಕಾರಿಯಿಂದಲು ಹಬ್ಬುತ್ತಿದೆ ಕೊರೋನಾ ಮಹಾಮಾರಿ!! ಎಚ್ಚರ!! | Oneindia Kannada

ಜಗತ್ತಿನಾದ್ಯಂತ ದಾಖಲಾಗಿರುವ ಅಂಕಿ ಅಂಶಗಳನ್ನು ಗಮನಿಸಿದರೆ 50 ವರ್ಷ ದಾಟಿದವರಲ್ಲಿಯೇ ಈ ಸೋಂಕು ಹೆಚ್ಚು ಕಾಣಿಸಿಕೊಂಡಿದೆ. ಇನ್ನು ಸೋಂಕಿನಿಂದ ಮೃತಪಟ್ಟವರ ವಯಸ್ಸು ನೋಡಿದರೆ 50 ವರ್ಷಕ್ಕೂ ಮೇಲ್ಪಟ್ಟವರೇ ಹೆಚ್ಚು.

ಏಮ್ಸ್ ಆಸ್ಪತ್ರೆಯ ಆಶ್ರಯ ಕೇಂದ್ರದಲ್ಲಿ 21 ಜನರಿಗೆ ಕೊರೊನಾ ಸೋಂಕು ಏಮ್ಸ್ ಆಸ್ಪತ್ರೆಯ ಆಶ್ರಯ ಕೇಂದ್ರದಲ್ಲಿ 21 ಜನರಿಗೆ ಕೊರೊನಾ ಸೋಂಕು

ಕೊರೊನಾಗಿಂತ ಮೊದಲೇ ಆ ವ್ಯಕ್ತಿ ಯಾವುದಾದರೂ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರ ಚೇತರಿಸಿಕೊಳ್ಳುವುದು ಕಷ್ಟ ಎಂದು ಹಲವು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಅದಕ್ಕೆ ತಕ್ಕಂತೆ ಪ್ರಕರಣಗಳು ಕಾಣಬಹುದು.

A 66 year old cancer survivor recovered from coronavirus

ಇದೀಗ, ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ 66 ವರ್ಷದ ವ್ಯಕ್ತಿ ಕೊರೊನಾ ವೈರಸ್‌ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಲಕ್ನೌ ವೈದ್ಯರು ತಿಳಿಸಿದ್ದು, ಅಚ್ಚರಿ ವ್ಯಕ್ತಪಡಿಸಿದ್ದಾರೆ.

''ಕೊರೊನಾ ವೈರಸ್‌ ಜೊತೆ ಇತರೆ ರೋಗ ಇದ್ದರೆ ಚೇತರಿಸಿಕೊಳ್ಳುವುದು ಕಷ್ಟ. ಆದರೆ, ಈ ವ್ಯಕ್ತಿ ಚೇತರಿಸಿಕೊಂಡಿದ್ದಾನೆ. ಈ ಕೇಸ್ ಭರವಸೆ ಮೂಡಿಸಿದೆ. ಅಂತಹ ರೋಗಿಗಳು ಚೇತರಿಸಿಕೊಳ್ಳಬಹುದು'' ಎಂದು ಕೆಜಿಎಂಯು ಉಪಕುಲಪತಿ ಎಂಎಲ್‌ಬಿ ಭಟ್ ತಿಳಿಸಿದ್ದಾರೆ.

English summary
A 66-yr-old cancer survivor recovered from coronavirus & was discharged in Lucknow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X