ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶದ ಕುಟುಂಬವೊಂದರಲ್ಲೇ ಬರೋಬ್ಬರಿ 66 ಮತದಾರರು!

|
Google Oneindia Kannada News

ಲಕ್ನೋ, ಮೇ 12: ಉತ್ತರಪ್ರದೇಶದ ಅಲಹಾಬಾದ್‌ ಸಮೀಪದ ಹಳ್ಳಿಯೊಂದರಲ್ಲಿ ಒಂದೇ ಕುಟುಂಬ 66 ಮತಗಳನ್ನು ಹೊಂದಿದೆ. ಇವರೆಲ್ಲರೂ ಒಂದೇ ಮನೆಯಲ್ಲಿ ವಾಸವಾಗಿದ್ದು, ಕೂಡು ಕುಟುಂಬದ ಜೀವನ ನಡೆಸುತ್ತಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಅಲಹಾಬಾದ್‌ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಬಹರಿಚಾ ಹಳ್ಳಿಯಲ್ಲಿ ರಾಮ್‌ ನರೇಶ್ ಕುಟುಂಬದಲ್ಲಿ ಒಟ್ಟು 82 ಜನರಿದ್ದು, ಅವರಲ್ಲಿ 66 ಮಂದಿಗೆ ಮತದಾನದ ಹಕ್ಕಿದೆ.

6ನೇ ಹಂತದ ಚುನಾವಣೆ LIVE:ವಿರಾಟ್ ಕೊಹ್ಲಿ ಮತದಾನ6ನೇ ಹಂತದ ಚುನಾವಣೆ LIVE:ವಿರಾಟ್ ಕೊಹ್ಲಿ ಮತದಾನ

ಇವರಲ್ಲಿ ಕೆಲವರು ಮೊದಲ ಮತದಾರರು ಕೂಡ ಇದ್ದಾರೆ. ಎಲ್ಲ 66 ಮಂದಿ ಮತದಾನ ಮಾಡಲಿದ್ದಾರೆ ಎಂದು ರಾಮ್‌ ನರೇಶ್ ತಿಳಿಸಿದ್ದು, ಸರ್ಕಾರಗಳ ಬಗ್ಗೆ ಅಸಮಾಧಾನವನ್ನೂ ಹೊಂದಿದ್ದಾರೆ.

66 eligible voters in one family

ಎಲ್ಲರ ಮತಗಳು ಒಂದೇ ಮತಗಟ್ಟೆಯಲ್ಲಿ ನೋಂದಣಿಯಾಗಿದ್ದು, ಮೊದಲ ಬಾರಿಗೆ ಮತದಾನ ಮಾಡಲು ಮುಂದಾಗಿರುವ ಮೊಮ್ಮಕ್ಕಳು ತುಂಬ ಕಾತುರದಲ್ಲಿದ್ದಾರೆ ಎಂದು ಮನೆಯ ಯಜಮಾನ ತಿಳಿಸಿದ್ದಾರೆ. ತಮ್ಮ ಸಮಸ್ಯೆಗಳ ಬಗೆಗೂ ಹೇಳಿಕೊಂಡಿರುವ ಇವರು, ಮನೆಯ ಪಕ್ಕದಲ್ಲಿಯೇ ಹೈ-ಟೆನ್ಶನ್‌ ವಿದ್ಯುತ್‌ ತಂತಿ ಹಾದು ಹೋಗಿದೆ.

ಇದನ್ನು ಬದಲಾಯಿಸಿ ಕೊಡಿ ಎಂದು ಸ್ಥಳೀಯ ಆಡಳಿತಕ್ಕೆ ದಶಕಗಳಿಂದ ಮನವಿ ಮಾಡುತ್ತಿದ್ದರೂ ಪ್ರಯೋಜನವಾಗಿಲ್ಲವಂತೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತ್ರಿಕೋನ ಸ್ಪರ್ಧೆ, ಅಭ್ಯರ್ಥಿಗಳ ಸವಿವರರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತ್ರಿಕೋನ ಸ್ಪರ್ಧೆ, ಅಭ್ಯರ್ಥಿಗಳ ಸವಿವರ

ಈ ಬಾರಿ ಒಮ್ಮೆ ಮತದಾನ ಮಾಡಿ, ಜನಪ್ರತಿನಿಧಿಗಳನ್ನು ಪರೀಕ್ಷಿಸುತ್ತಾರಂತೆ. ಈ ಬಾರಿಯೂ ಸಮಸ್ಯೆಗೆ ಪರಿಹಾರ ದೊರೆಯದಿದ್ದರೆ ಮತ್ತೆ ಮತ ಹಾಕುವುದಿಲ್ಲ ಎಂದು ಮನೆಯ ಯಜಮಾನ ಎಚ್ಚರಿಸಿದ್ದಾರೆ.

ಆರನೇ ಹಂತದ ಘಟಾನುಘಟಿ ಅಭ್ಯರ್ಥಿಗಳು ಯಾರ್ಯಾರು?ಆರನೇ ಹಂತದ ಘಟಾನುಘಟಿ ಅಭ್ಯರ್ಥಿಗಳು ಯಾರ್ಯಾರು?

ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಉತ್ತರಪ್ರದೇಶ ಸಚಿವೆ ರೀಟಾ ಬಹುಗುಣ ಜೋಷಿ ಹಾಗೂ ಎಸ್‌ಪಿ-ಬಿಎಸ್ಪಿಯಿಂದ ಆರ್‌.ಎಸ್‌.ಪಟೇಲ್‌ ಸ್ಪರ್ಧಿಸುತ್ತಿದ್ದಾರೆ. ಇದಲ್ಲದೇ ಅಯೋದ್ಯೆ ಕೂಡ ಇದೇ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.

English summary
66 voters are elible to cost their vote in one family village near Allahabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X