ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಅನಾಥಾಶ್ರಮದ 57 ಹೆಣ್ಣುಮಕ್ಕಳಿಗೆ ಕೊರೊನಾ ಸೋಂಕು

|
Google Oneindia Kannada News

ಲಕ್ನೋ, ಜೂನ್ 22: ಉತ್ತರ ಪ್ರದೇಶ ಸರ್ಕಾರ ನಡೆಸುತ್ತಿರುವ ಅನಾಥಾಶ್ರಮದ 57 ಮಂದಿ ಹೆಣ್ಣುಮಕ್ಕಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಕಾನ್‌ಪುರದಲ್ಲಿ ಸರ್ಕಾರ ನಡೆಸುತ್ತಿರುವ ಅನಾಥಾಶ್ರಮ ಇದಾಗಿದೆ, ಇದರಿಂದ ಯಾವ ಮಟ್ಟದಲ್ಲಿ ಕೊರೊನಾ ಸೋಂಕು ಹರಡುತ್ತಿದೆ ಎಂಬುದನ್ನು ಅಂದಾಜಿಸಬಹುದಾಗಿದೆ.

ಕೊರೊನಾ ಚಿಕಿತ್ಸೆ: ಜೀವರಕ್ಷಕ ಮಾತ್ರೆಯೊಂದಕ್ಕೆ 103 ರು ಮಾತ್ರಕೊರೊನಾ ಚಿಕಿತ್ಸೆ: ಜೀವರಕ್ಷಕ ಮಾತ್ರೆಯೊಂದಕ್ಕೆ 103 ರು ಮಾತ್ರ

ಈ 57 ಮಂದಿ ಹೆಣ್ಣುಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲೇ ಇದ್ದ ಉಳಿದ ಹೆಣ್ಣುಮಕ್ಕಳನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಮತ್ತೊಂದು ವಿವಾದ ಎದ್ದಿದ್ದು, ಅನಾಥಾಶ್ರಮದಲ್ಲಿದ್ದ ಇಬ್ಬರು ಹೆಣ್ಣುಮಕ್ಕಳು ಈಗ ಗರ್ಭಿಣಿ ಎಂಬುದು ತಿಳಿದುಬಂದಿದೆ. ಮಕ್ಕಳನ್ನು ರಕ್ಷಿಸಲು ಆರಂಭವಾದ ಅನಾಥಾಶ್ರಮದಲ್ಲಿಯೇ ಇಂತಹ ಘಟನೆ ನಡೆದಿರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

57 Girls At Government-Run Home In UPs Kanpur Test Positive For Coronavirus

ಅನಾಥಾಶ್ರಮಕ್ಕೆ ಬರುವ ಮುನ್ನವೇ ಅವರಿಬ್ಬರು ಗರ್ಭಿಣಿಯರಾಗಿದ್ದರು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ. ಬ್ರಹ್ಮದೇವ್ ತಿವಾರಿ ತಿಳಿಸಿದ್ದಾರೆ.

ಕಾನ್‌ಪುರದಲ್ಲಿ ಈಗಾಗಲೇ 400 ಮಂದಿ ಕೊರೊನಾ ಸೋಂಕಿತರಿದ್ದಾರ. ರಾಜ್ಯದಲ್ಲಿ ಎರಡನೇ ಅತಿ ಹೆಚ್ಚು ಪ್ರಕರಣ ಕಾನ್‌ಪುರದಲ್ಲಿ ಪತ್ತೆಯಾಗಿದೆ. ನೊಯ್ಡಾದಲ್ಲಿ 557 ಪ್ರಕರಣಗಳಿವೆ. ಉತ್ತರ ಪ್ರದೇಶದಲ್ಲಿ ಒಟ್ಟು 17,000 ಪ್ರಕರಣಗಳಿವೆ. 6 ಸಾವಿರ ಪ್ರಕರಣಗಳು ಸಕ್ರಿಯವಾಗಿವೆ. 507 ಮಂದಿ ಮೃತಪಟ್ಟಿದ್ದಾರೆ.

ಭಾರತದಲ್ಲಿ ಕೊರೊನಾವೈರಸ್ ಮಹಾಸ್ಫೋಟಗೊಂಡಿದೆ. 24 ಗಂಟೆಗಳಲ್ಲೇ 14,821 ಮಂದಿಗೆ ಸೋಂಕು ತಗುಲಿದೆ. ದೇಶದಲ್ಲಿ 445 ಮಂದಿ ಕೊವಿಡ್-19ಗೆ ಬಲಿಯಾಗಿದ್ದಾರೆ, ಒಟ್ಟು ಸೋಂಕಿತರ ಸಂಖ್ಯೆ 4,25,282ಕ್ಕೆ ಏರಿಕೆಯಾಗಿದೆ.

English summary
Fifty-seven girls who live at a government-run shelter in Uttar Pradesh's Kanpur have tested positive for the novel coronavirus in the past week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X