• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಯೋಧ್ಯಾದಲ್ಲೇ 5 ಎಕರೆ ಜಾಗ ಬೇಕು ಎಂದು ಮುಸ್ಲಿಮರ ಹಠ

|

ಲಕ್ನೋ, ನವೆಂಬರ್ 12: ಅಯೋಧ್ಯಾದಲ್ಲಿರುವ ರಾಮ ಜನ್ಮ ಭೂಮಿ-ಬಾಬ್ರಿ ಮಸೀದಿ ಭೂ ಹಂಚಿಕೆ ವಿವಾದ ಬಗೆಹರಿದಿದೆ. ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ವಿವಾದಿತ ಸ್ಥಳವನ್ನು ರಾಮಲಲ್ಲಾಗೆ ನೀಡಿದ್ದು, ಮಸೀದಿ ನಿರ್ಮಾಣಕ್ಕೆ ಪ್ರತ್ಯೇಕವಾಗಿ 5 ಎಕರೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ನವೆಂಬರ್ 09ರಂದು ಬಂದ ತೀರ್ಪನ್ನ್ ಸ್ವಾಗತಿಸಿದ್ದ ಮೂಲ ಅರ್ಜಿದಾರ, ಅಯೋಧ್ಯಾ ನಿವಾಸಿ ಇಕ್ಬಾಲ್ ಅನ್ಸಾರಿ ಈಗ ತಕರಾರು ಎತ್ತಿದ್ದಾರೆ. 5 ಎಕರೆ ಭೂಮಿ ನೀಡುವುದಿದ್ದರೆ ಆಯೋಧ್ಯಾದಲ್ಲಿ ಸರ್ಕಾರ ವಶಪಡಿಸಿಕೊಂಡ 67 ಎಕರೆ ಸ್ಥಳದಲ್ಲೇ ನೀಡುವಂತೆ ಕೋರಿದ್ದಾರೆ.

ಸುಪ್ರೀಂ ತೀರ್ಪಿನ ಬಗ್ಗೆ ತಕರಾರಿಲ್ಲವೆಂದ ಮೂಲ ಅರ್ಜಿದಾರ ಟೈಲರ್!

1992ರಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ನಂತರ 1993ರಲ್ಲಿ ಉತ್ತರಪ್ರದೇಶ ಸರ್ಕಾರವು ವಿವಾದಿತ ಸ್ಥಳ ಸೇರಿದಂತೆ 67 ಎಕರೆ ಭೂಮಿಯನ್ನು ವಶಪಡಿಸಿಕೊಂಡಿತ್ತು. ಈಗ ಕೋರ್ಟ್ ಆದೇಶದಂತೆ ಇದರಲ್ಲಿ 5 ಎಕರೆ ಜಾಗವನ್ನು ಮಸೀದಿ ನಿರ್ಮಾಣಕ್ಕೆ ನೀಡಬೇಕಾಗುತ್ತದೆ. ಸದ್ಯ ಲಭ್ಯ ಮಾಹಿತಿಯಂತೆ ವಿವಾದಿತ ಸ್ಥಳದಿಂದ 15 ಕಿ.ಮೀ ದೂರದಲ್ಲಿ ಮಸೀದಿ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಲಾಗಿದೆ.

ಮೂಲ ಅರ್ಜಿದಾರನ ತಕರಾರು

ಮೂಲ ಅರ್ಜಿದಾರನ ತಕರಾರು

ಆದರೆ, ಇದನ್ನು ಒಪ್ಪದ ಇಕ್ಬಾಲ್ ಅನ್ಸಾರಿ ಹಾಗೂ ಇನ್ನಿತರ ಮುಸ್ಲಿಂ ನಾಯಕರು, ಮಸೀದಿ ನಿರ್ಮಾಣಕ್ಕಾಗಿ ಬೇಕಾದ ಜಾಗವನ್ನು ಖರೀದಿಸುವಷ್ಟು ನಾವು ಸ್ಥಿತಿವಂತರಿದ್ದೇವೆ. ಇದಕ್ಕಾಗಿ ಸರ್ಕಾರದ ಮೇಲೆ ಅವಲಂಬನೆ ಬೇಡ ಎಂದಿದ್ದಾರೆ.

ಬಾಬ್ರಿ ಮಸೀದಿ ಅಲ್ಲದೆ 18ನೇ ಶತಮಾನದ ಸೂಫಿ ಸಂತ ಖಾಜಿ ಖುದ್ವಾ ಅವರ ದರ್ಗಾ ಕೂಡಾ ಇಲ್ಲೇ ಇದೆ, ಹೀಗಾಗಿ ನಮಗೆ ಇಲ್ಲೇ ಸ್ಥಳ ಮಂಜೂರಾಗಲಿ ಎಂದು ಸ್ಥಳೀಯ ಮೌಲ್ವಿ ಮೌಲಾನಾ ಜಲಾಲ್ ಅಶ್ರಫ್ ಬೇಡಿಕೆ ಸಲ್ಲಿಸಿದ್ದಾರೆ.

1949ರಲ್ಲೇ ಕೇಸ್ ಹಾಕಿದ್ದ ಅಯೋಧ್ಯಾ ನಿವಾಸಿಗಳು

1949ರಲ್ಲೇ ಕೇಸ್ ಹಾಕಿದ್ದ ಅಯೋಧ್ಯಾ ನಿವಾಸಿಗಳು

1528ರಲ್ಲಿ ಸ್ಥಾಪನೆಯಾದ ಬಾಬರ್ ಮಸೀದಿ ಇರುವ ಸ್ಥಳವು 1885ರಲ್ಲಿ ಮೊದಲ ಬಾರಿಗೆ ಭೂಮಿ ಆಸ್ತಿ ಹಕ್ಕು ವ್ಯಾಜ್ಯ ಕೋರ್ಟ್ ಮೇಟ್ಟಿಲೇರಿತ್ತು. ಅಂದಿನಿಂದ ಮೊದಲುಗೊಂಡು ಆರಂಭವಾದ ರಾಮಜನ್ಮಭೂಮಿ, ಬಾಬ್ರಿ ಮಸೀದಿ ವಿವಾದ ಇಂದಿನ ತನಕ ಪರಿಹಾರ ಕಾಣದಂತೆ ನಡೆದುಕೊಂಡು ಬಂದಿತ್ತು. ಪರಸ್ಪರ ಮಾತುಕತೆ ಮೂಲಕ ಸಮಸ್ಯೆಗೆ ಇತ್ಯರ್ಥ ಹಾಡಿ ಎಂದು ಸುಪ್ರೀಂಕೋರ್ಟ್ ಸೂಚಿಸಿತ್ತು. ಆದರೆ, ಕೇಸ್ ಮತ್ತೆ ಮತ್ತೆ ಬೇರೆ ಬೇರೆ ರೂಪದಲ್ಲಿ ಹಲವರನ್ನು ಕಾಡಿತ್ತು. ಭೂ ವ್ಯಾಜ್ಯದ ಸಿವಿಲ್ ಕಟ್ಲೆ ಅಲ್ಲದೆ, ಬಾಬ್ರಿ ಮಸೀದಿ ಧ್ವಂಸ ಪ್ರಕರಣವೂ ವರ್ಷಗಳ ಕಾಲ ಮೀರಿ ವಿಚಾರಣೆ ನಡೆದಿತ್ತು. ಸದ್ಯ ಭೂ ವಿವಾದ ಅಂತ್ಯ ಕಂಡಿದ್ದರೆ, ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಮುಗಿದಿದ್ದು ಸಿಬಿಐ ವಿಶೇಷ ನ್ಯಾಯಾಲಯವು ಅಂತಿಮ ತೀರ್ಪು ನೀಡಲಿದೆ.

ಏಳು ಮಂದಿ ಅಯೋಧ್ಯಾ ನಿವಾಸಿಗಳ ತಕರಾರು

ಏಳು ಮಂದಿ ಅಯೋಧ್ಯಾ ನಿವಾಸಿಗಳ ತಕರಾರು

ವಿವಾದಿತ ಪ್ರದೇಶಕ್ಕೆ ಬೇಲಿ ಹಾಕಿದ ಬ್ರಿಟಿಷ್ ಆಡಳಿತ. ಒಳಾಂಗಣ ಭಾಗ ಮುಸ್ಲಿಮರಿಗೆ ಹಾಗೂ ಹೊರಾಂಗಣ ಭಾಗ ಹಿಂದೂಗಳಿಗೆ ಎಂದು ಹಂಚಿಕೆ. 1885: ಹಿಂದೂಗಳಿಗೆ ಹಂಚಿಕೆಯಾಗಿದ್ದ ಹೊರಾಂಗಣ ಭಾಗದಲ್ಲಿ ರಾಮ ಮಂದಿರ ನಿರ್ಮಿಸಲು ಮಹಂತ ರಘುವೀರ್ ದಾಸ್ ರಿಂದ ನಿರಾಕರಣೆ. 1949: ಮಸೀದಿಯೊಳಗೆ ಶ್ರೀರಾಮನ ಪ್ರತಿಮೆ ಕಾಣಿಸಿಕೊಂಡು ಎಲ್ಲರ ಹುಬ್ಬೇರಿಸಿತ್ತು. ಹಿಂದೂಗಳು ತಂದಿಟ್ಟಿದ್ದಾರೆ ಎಂದು ಮುಸ್ಲಿಮರಿಂದ ದೂರು. ಪ್ರಕರಣ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ಎಚ್ಚೆತ್ತುಕೊಂಡ ಸರ್ಕಾರ ಗೇಟ್ ಬೀಗ ಹಾಕಿ ಜಡೆಯಿತು. 1949ರಲ್ಲಿ ಕೇಸು ಹಾಕಿದ್ದ ಏಳು ಮಂದಿ ಅಯೋಧ್ಯಾ ನಿವಾಸಿಗಳ ಪೈಕಿ ಹಿರಿಯರಾದ ಅರ್ಜಿದಾರ ಮೊಹಮ್ಮದ್ ಫರೂಕ್, ಮೊಹಮ್ಮದ್ ಹಶೀಂ ಅನ್ಸಾರಿ ನಿಧನರಾಗಿದ್ದಾರೆ. ಅನ್ಸಾರಿ ಪುತ್ರ ಇಕ್ಬಾಲ್ ಅವರು ಯಾವುದೇ ತಕರಾರಿಲ್ಲ ಎಂದಿದ್ದಾರೆ.

ಅಯೋಧ್ಯಾ ಕಾರ್ಪೊರೇಟರ್ ಹಾಜಿ ಅಸದ್ ಅಹ್ಮದ್

ಅಯೋಧ್ಯಾ ಕಾರ್ಪೊರೇಟರ್ ಹಾಜಿ ಅಸದ್ ಅಹ್ಮದ್

ಅಯೋಧ್ಯಾ ಕಾರ್ಪೊರೇಟರ್ ಹಾಜಿ ಅಸದ್ ಅಹ್ಮದ್ ಮಾತನಾಡಿ, ನಮ್ಮ ಸಮುದಾಯಕ್ಕೆ ಯಾವುದೇ ಭೂಮಿ ಬೇಡ, ಕೊಡುವುದೇ ಆದರೆ ಸರ್ಕಾರ ವಶಪಡಿಸಿಕೊಂಡ 67 ಎಕರೆ ಭೂಮಿಯಲ್ಲೇ 5 ಎಕರೆ ನೀಡಲಿ, ನಮಗೆ ಯಾವುದೇ ದೇಣಿಗೆ, ದಾನ ಬೇಡ ಎಂದಿದ್ದಾರೆ.

ಜಮಾತೆ ಉಲೇಮಾ ಹಿಂದ್ ನ ಅಯೋಧ್ಯಾ ಮೌಲನಾ ಬಾದ್ ಶಾಹ್ ಖಾನ್, ಸಾಮಾಜಿಕ ಕಾರ್ಯಕರ್ತ ಯೂಸುಫ್ ಖಾನ್ ಸೇರಿದಂತೆ ಹಲವಾರು ನಾಯಕರು ಕೂಡಾ ಇದೇ ಮಾತನ್ನಾಡಿದ್ದಾರೆ. ನ.26ರಂದು ನಡೆಯಲಿರುವ ವಕ್ಫ್ ಮಂಡಳಿ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.

ಚಿತ್ರದಲ್ಲಿ: ಮೂಲ ಅರ್ಜಿದಾರ ಮೊಹಮ್ಮದ್ ಫರೂಕ್.

English summary
The five acres of land to be allocated for building a mosque under the Supreme Court verdict in the Ram Janmabhoomi-Babri Masjid dispute should be within the 67 acres of acquired land in Ayodhya, Iqbal Ansari, a main litigant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X