ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶಕ್ಕೆ ಮರಳಿದ 414 ವಲಸೆ ಕಾರ್ಮಿಕರಿಗೆ ಕೊರೊನಾ ರೋಗ ಲಕ್ಷಣ

|
Google Oneindia Kannada News

ಲಕ್ನೌ, ಮೇ 18: ದೇಶದ ಹಲವು ಕಡೆ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರು ರಾಜ್ಯಗಳಿಗೆ ವಾಪಸ್ ಆಗಮಿಸುತ್ತಿರುವ ಹಿನ್ನೆಲೆ ಆಯಾ ರಾಜ್ಯಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಸಹಜವಾಗಿ ಆತಂಕ ಮೂಡಿಸಿದೆ.

ಇದೀಗ, ಉತ್ತರ ಪ್ರದೇಶ ರಾಜ್ಯಕ್ಕೆ ವಿವಿಧ ಕಡೆಗಳಿಂದ ಆಗಮಿಸಿರುವ ವಲಸೆ ಕಾರ್ಮಿಕರ ಪೈಕಿ 414 ಜನರಿಗೆ ಕೊರೊನಾ ರೋಗಲಕ್ಷಣಗಳು ಕಂಡು ಬಂದಿದೆ ಎಂಬ ಸುದ್ದಿ ಬಹಿರಂಗವಾಗಿದೆ.

ಕಾರ್ಮಿಕರು ಪ್ರಯಾಣಿಸುತ್ತಿದ್ದ ಟ್ರಕ್‌ ಅಪಘಾತ: 24 ಮಂದಿ ದುರ್ಮರಣಕಾರ್ಮಿಕರು ಪ್ರಯಾಣಿಸುತ್ತಿದ್ದ ಟ್ರಕ್‌ ಅಪಘಾತ: 24 ಮಂದಿ ದುರ್ಮರಣ

ಹೊರರಾಜ್ಯಗಳಿಂದ ಬಂದವರನ್ನು ಪರೀಕ್ಷಗೆ ಒಳಪಡಿಸಲಾಗುತ್ತಿದೆ. ಆಶಾ ಕಾರ್ಯಕರ್ತೆಯವರು, ಆರೋಗ್ಯ ಇಲಾಖೆಯವರು ಈಗಾಗಲೇ 3.50 ಲಕ್ಷ ಕಾರ್ಮಿಕರನ್ನು ಪರೀಕ್ಷೆ ಮಾಡಿದ್ದಾರೆ. ಈ ಪೈಕಿ 414 ಕಾರ್ಮಕರಿಗೆ ರೋಗ ಲಕ್ಷಣ ಕಂಡು ಬಂದಿದೆ ಎಂದು ವರದಿಯಾಗಿದೆ.

414 Migrant Workers Who Came Back To UP Show Corona Symptoms

ವಲಸೆ ಕಾರ್ಮಿಕರನ್ನು ಮೊದಲು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಲಾಗುತ್ತೆ. ನಂತರ ತ್ವರಿತ ಪರೀಕ್ಷೆಯನ್ನು ನಡೆಸುಲಾಗುತ್ತೆ. ಒಂದು ಪ್ರಕರಣ ಕಂಡು ಬಂದರೂ, ಆ ಗುಂಪಿನ ಎಲ್ಲ ಸದಸ್ಯರನ್ನು ಪ್ರತ್ಯೇಕವಾಗಿ ಪರೀಕ್ಷೆ ಮಾಡಲಾಗುತ್ತೆ. ರೋಗ ಲಕ್ಷಣ ಕಂಡು ಬಂದರೆ 21 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗುತ್ತೆ ಎಂದು ಉತ್ತರ ಪ್ರದೇಶದ ಆರೋಗ್ಯ ಕಾರ್ಯದರ್ಶಿ ಅಮಿತ್ ಮೋಹನ್ ಪ್ರಸಾದ್ ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಹೊಸದಾಗಿ 206 ಕೇಸ್‌ಗಳು ವರದಿಯಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 4,464ಕ್ಕೆ ಏರಿಕೆಯಾಗಿದೆ. ಭಾನುವಾರ ಒಂದೇ ದಿನ ರಾಜ್ಯದಲ್ಲಿ 8 ಸಾವು ಸಂಭವಿಸಿದ್ದು, ಒಟ್ಟು ಸಾವಿನ ಸಂಖ್ಯೆ 112ಕ್ಕೆ ತಲುಪಿದೆ. 2,636 ರೋಗಗಿಗಳು ಸೋಂಕಿನಿಂದ ಚೇತರಿಕೆ ಕಂಡು ಡಿಸ್ಚಾರ್ಜ್ ಆಗಿದ್ದಾರೆ. 1,716 ಕೇಸ್‌ಗಳು ಸಕ್ರಿಯವಾಗಿದೆ.

English summary
414 migrant workers who returnd to Uttara Pradesh showing coronavirus symptoms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X