ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"4 ದಿನದ ಮಗುವನ್ನು ವಿನಾಕಾರಣ ಸುತ್ತಾಡಿಸಿ, ವೈದ್ಯರೇ ಕೊಂದರು"

|
Google Oneindia Kannada News

ಬರೇಲಿ(ಉತ್ತರ ಪ್ರದೇಶ), ಜೂನ್ 20: "ನಾಲ್ಕು ದಿನದ ನಮ್ಮ ಮಗುವಿಗೆ ಸರಿಯಾದ ಚಿಕಿತ್ಸೆ ನೀಡದೆ, ಒಂದೆಡೆಯಿಂದ ಮತ್ತೊಂದೆಡೆಗೆ ಸುತ್ತಾಡಿಸಿ, ವೈದ್ಯರೇ ಕೊಂದಿದ್ದಾರೆ" ಎಂದು ದಂಪತಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

ಜೂನ್ 15 ರಂದು ಜನಿಸಿದ್ದ ಜನಿಸಿದ್ದ ಊರ್ವಶಿ ಎಂಬ ಹೆಣ್ಣು ಮಗು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿತ್ತು. ಬುಧವಾರ ಬೆಳಿಗ್ಗೆ ಉಸಿರಾಟದ ಸಮಸ್ಯೆ ತೀವ್ರವಾಗುತ್ತಿದ್ದಂತೆಯೇ ಆತಂಕಗೊಂಡ ಪಾಲಕರು ಮಗುವನ್ನು ಬರೇಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮುಷ್ಕರ ಏಕೆ? ಹಿನ್ನೆಲೆಯೇನು?ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮುಷ್ಕರ ಏಕೆ? ಹಿನ್ನೆಲೆಯೇನು?

ಆಗ ಕರ್ತವ್ಯದಲ್ಲಿದ್ದ ವೈದ್ಯರೊಬ್ಬರು ಮಗುವನ್ನು ಪರೀಕ್ಷಹಿಸಲು ಒಲ್ಲೆ ಎಂದು, ಮಗುವನ್ನು ಮಹುಳಾ ವಿಭಾಗಕ್ಕೆ ಕೊಂಡೊಯ್ಯಿರಿ ಎಂದಿದ್ದಾರೆ. ದಂಪತಿ ಕೂಡಲೇ ಮಗುವನ್ನು ಆಸ್ಪತ್ರೆಯ ಮಹಿಳಾ ವಿಭಾಗಕ್ಕೆ ಕೊಂಡೊಯ್ದಿದ್ದಾರೆ. ಅಲ್ಲಿದ್ದ ವೈದ್ಯರು ಮತ್ತೆ ಪುರುಷ ವಿಭಾಗಕ್ಕೆ ಕೊಂಡೊಯ್ಯುವಂತೆ ಹೇಳಿದ್ದಾರೆ. ಚಿಕಿತ್ಸೆ ನೀಡಲು ನಿರ್ಲಕ್ಷ್ಯಿಸಿ ಮಗುವನ್ನು ವಿನಾಕಾರಣ ಸುತ್ತುಹೊಡೆಸಿದ ಪರಿಣಾಮ ಚಿಕಿತ್ಸೆಗೆ ವಿಳಂಬವಾಗಿ ಮಗು ಅಸುನೀಗಿದೆ.

4 day old baby dies for doctors negligence

ಸುಮಾರು ಮೂರು ಗಂಟೆಗಳ ಕಾಲ ತಂದೆ-ತಾಯಿ ಮಗುವನ್ನು ಎತ್ತಿಕೊಂಡು ಆಸ್ಪತ್ರೆಯಲ್ಲಿ ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಸುತ್ತುವಂತೆ ಮಾಡಿದ್ದಾರೆ. ಹಾಸಿಗೆಯ ಕೊರತೆ ಇದೆ ಎಂದು ಮಗುವನ್ನು ದಾಖಲಿಸಿಕೊಳ್ಳಲೂ ಹಿಂಜರಿದಿದ್ದಾರೆ. ನಂತರ ಆಸ್ಪತ್ರೆಯ ಮೆಟ್ಟಿಲ ಮೇಲೆಯೇ ಮಗು ಅಸುನೀಗಿದೆ ಎಂದು ಮಗುವಿನ ಅಜ್ಜಿ ಕುಸುಮಾ ದೇವಿ ಅಳಲು ತೋಡಿಕೊಂಡಿದ್ದಾರೆ.

ಘಟಣೆಯ ಹಿನ್ನೆಲೆಯಲ್ಲಿ ಓರ್ವ ವೈದ್ಯರನ್ನು ಅಮಾನತು ಮಾಡಲಾಗಿದೆ. ಘಟನೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ವೈದ್ಯರ ನಿರ್ಲಕ್ಷ: ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ ವೈದ್ಯರ ನಿರ್ಲಕ್ಷ: ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಇತ್ತೀಚೆಗೆ ಕೋಲ್ಕತ್ತಾದಲ್ಲಿ ವೃದ್ಧರೊಬ್ಬರಿಗೆ ಸರಿಯಾಗಿ ಚಿಕಿತ್ಸೆ ನೀಡದ ಕಾರಣ ಅವರು ಮೃತರಾಗಿದಾರೆಂದು ದೂರು ಕಿರಿಯ ವೈದ್ಯರ ಮೇಲೆ ಹಲ್ಲೆ ನಡೆಸಲಾಗಿತ್ತು. ಅದನ್ನು ವಿರೋಧಿಸಿ ವೈದ್ಯರು ಒಂದು ವಾರಗಳ ಕಾಲ ಮುಷ್ಕರ ನಡೆಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

English summary
4 day baby died due to negligence of doctors in Bareilly, Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X