ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶದಲ್ಲಿ ಭಾರಿ ಮಳೆಗೆ 35 ಮಂದಿ ಬಲಿ

|
Google Oneindia Kannada News

Recommended Video

ಚಿತ್ರದುರ್ಗ ಜಿಲ್ಲೆಯಾದ್ಯಂತ ಉತ್ತಮ ಮಳೆ

ಲಕ್ನೋ, ಸೆಪ್ಟೆಂಬರ್ 29: ಉತ್ತರ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಇದುವರೆಗೆ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ.

ಶುಕ್ರವಾರ 10 ಮಂದಿ ಮೃತಪಟ್ಟಿದ್ದಾರೆ. ಮಳೆಯ ಅವಾಂತರಕ್ಕೆ 5 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ: ಮತ್ತೆ ಮಹಾಮಳೆ ಆತಂಕರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ: ಮತ್ತೆ ಮಹಾಮಳೆ ಆತಂಕ

ಇನ್ನು ಕರ್ನಾಟಕದ ಮಲೆನಾಡು ಭಾಗಗಳಲ್ಲೂ ಕೂಡ ಮಳೆಯ ಆರ್ಭಟ ಕಡಿಮೆಯಾಗಿಲ್ಲ. ಇನ್ನು 48 ಗಂಟೆಗಳಲ್ಲಿ ಮಳೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

35 Rain Related Deaths Were Reported From Uttar Prasesh

ರಾಜ್ಯದ ವಿವಿಧೆಡೆ ಅಧಿಕ ಮಳೆಯಾಗುತ್ತಿರುವ ಕಾರಣ ಅಪಾರ ಪ್ರಾಣಹಾನಿಯಾಗಿದೆ. ಮಹಾಮಳೆಗೆ ಶನಿವಾರ 25 ಮಂದಿ ಬಲಿಯಾಗಿದ್ದಾರೆ.

ಇನ್ನು, ಸುಲ್ತಾನ್​ಪುರ, ಗೋರಕ್​ಪುರ, ದೋರಿಯಾ,ಫಿರೋಜಾಬಾದ್​, ಪ್ರಯಾಗ್​ರಾಜ್​, ಲಕ್ಕಿಂಪುರ ಮತ್ತು ಅಮೇಥಿಯಲ್ಲಿ ಮಳೆಯ ಆರ್ಭಟಕ್ಕೆ ಹಲವು ಮಂದಿ ಮೃತಪಟ್ಟಿದ್ದಾರೆ.

ಇಂದು ಸಹ ಉತ್ತರಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಶನಿವಾರ ಮಿರ್ಜಾಪುರದಲ್ಲಿ ಮಳೆಯ ಆರ್ಭಟಕ್ಕೆ ಮನೆ ಕುಸಿದು 4 ಮಂದಿ ಅಸುನೀಗಿದ್ದಾರೆ. ಅಜ್ಮಾಗರ್​ನಲ್ಲಿ ಗೋಡೆ ಕುಸಿದು ಅಲ್ಲಿಯೂ ನಾಲ್ಕು ಜನ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಉತ್ತರ ಕರ್ನಾಟಕ ಭಾರತಕ್ಕೆ ಸೇರಿದೆ, ಮೋದಿಜೀ ಇತ್ತ ನೋಡಿ!ಉತ್ತರ ಕರ್ನಾಟಕ ಭಾರತಕ್ಕೆ ಸೇರಿದೆ, ಮೋದಿಜೀ ಇತ್ತ ನೋಡಿ!

ಅಂಬೇಡ್ಕರ್​​ನಗರ ಮತ್ತು ಘಾಜಿಪುರದಲ್ಲಿ ಮನೆ ಕುಸಿದು ಮೂರು ಮಂದಿ ಬಲಿಯಾಗಿದ್ದಾರೆ. ಬಲ್ಲಿಯಾ ಮತ್ತು ಸೀತಾಪುರನಲ್ಲಿ ಗೋಡೆ ಕುಸಿದು ಇಬ್ಬರು ಕೊನೆಯುಸಿರೆಳೆದಿದ್ದಾರೆ. ಮತ್ತೊಂದು ಘಟನೆಯಲ್ಲಿ ಸಿಡಿಲು ಬಡಿದು ಓರ್ವ ವ್ಯಕ್ತಿ ಮೃತಪಟ್ಟಿದ್ಧಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚಿತ್ರಕೂಟ ಮತ್ತು ಉನ್ನಾವೋದಲ್ಲಿ ಗೋಡೆ ಕುಸಿದು ಇಬ್ಬರು ಮೃತಪಟ್ಟರೆ, ಬುಲಂದ್​ಶಹರ್​ನಲ್ಲಿ ಮನೆ ಕುಸಿದು ಓರ್ವ ಸಾವನ್ನಪ್ಪಿದ್ದಾನೆ. ಉನ್ನಾವೋದಲ್ಲಿ ಭಾರೀ ಮಳೆಗೆ ಹಾವು ಕಚ್ಚಿ ಮತ್ತೊಬ್ಬ ವ್ಯಕ್ತಿ ಅಸುನೀಗಿದ್ಧಾನೆ. ಸಹರನ್​ಪುರದಲ್ಲಿ ಮಳೆಗೆ ಕೊಚ್ಚಿ ಹೋದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.

English summary
35 Rain Related Deaths Were Reported From Uttar Prasesh, As many as 48 people died in rain-related incidents, majority of them in Uttar Pradesh, while incessant rainfall in Bihar, where an alert has been sounded.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X