ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಲಾಕ್ ಡೌನ್ ಉಲ್ಲಂಘಿಸಿದವರಿಗಾಗಿ ಹೊಸ ಜೈಲು!

|
Google Oneindia Kannada News

ಡೆಹ್ರಾಡೂನ್, ಏಪ್ರಿಲ್.23: ಕೊರೊನಾ ವೈರಸ್ ಸೋಂಕು ಹರಡುವಿಕೆ ವಿರುದ್ಧ ಒಟ್ಟಾಗಿ ಹೋರಾಟಬೇಕಿದೆ. ಪ್ರತಿಯೊಬ್ಬ ಪ್ರಜೆಯೂ ಭಾರತ ಲಾಕ್ ಡೌನ್ ನಿಯಮ ಪಾಲಿಸಬೇಕೆಂದು ಸಾರಿ ಸಾರಿ ಹೇಳಿದರೂ ಪ್ರಯೋಜನವಾಗಲಿಲ್ಲ. ಈ ಹಿನ್ನೆಲೆ ಲಾಕ್ ಡೌನ್ ನಿಯಮ ಉಲ್ಲಂಘಿಸಿದವರನ್ನು ಇರಿಸುವುದಕ್ಕಾಗಿ ಉತ್ತರ ಪ್ರದೇಶದಲ್ಲಿ ಹೊಸ ಜೈಲುಗಳನ್ನೇ ಸಿದ್ಧಪಡಿಸಲಾಗಿದೆ.

Recommended Video

ಮುಂದೆ ಬರಲಿದೆ ಒಳ್ಳೆಯ ದಿನ,ಹೊರ ರಾಜ್ಯದ ಕನ್ನಡಿಗರಿಗೆ ಅಭಯ ನೀಡಿದ ಶಾಸಕ

ಉತ್ತರ ಪ್ರದೇಶದಲ್ಲಿ ಭಾರತ ಲಾಕ್ ಡೌನ್ ನಿಯಮ ಉಲ್ಲಂಘಿಸಿದವರನ್ನು ಬಂಧಿಸಿ ಇರಿಸಲು ರಾಜ್ಯಾದ್ಯಂತ 34 ತಾತ್ಕಾಲಿಕ ಜೈಲುಗಳನ್ನು ತೆರೆಯಲಾಗಿದೆ. ಈವರೆಗೂ ವಿದೇಶಿಗರೂ ಸೇರಿದಂತೆ 288ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ. ಈ ಆರೋಪಿಗಳನ್ನು ತಾತ್ಕಾಲಿಕ ಜೈಲುಗಳಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ರಾಜ್ಯ ಬಂಧಿಖಾನೆ ಇಲಾಖೆ ತಿಳಿಸಿದೆ.

ಬೆಂಗಳೂರಿಗೆ ಕಂಟಕವಾದ ಹೊಂಗಸಂದ್ರ ರೋಗಿ: ಭಯ ಹುಟ್ಟಿಸಿದೆ ಟ್ರಾವಲ್ ಹಿಸ್ಟರಿಬೆಂಗಳೂರಿಗೆ ಕಂಟಕವಾದ ಹೊಂಗಸಂದ್ರ ರೋಗಿ: ಭಯ ಹುಟ್ಟಿಸಿದೆ ಟ್ರಾವಲ್ ಹಿಸ್ಟರಿ

ಇನ್ನು, ಒಟ್ಟು 288 ಬಂಧಿತ ಆರೋಪಿಗಳಲ್ಲಿ 156 ಮಂದಿ ವಿದೇಶಿಗರೇ ಆಗಿದ್ದಾರೆ. ಮಲೇಶಿಯಾ, ಖಜಕಿಸ್ತಾನ್, ಕಿರ್ಜಿಸ್ತಾನ್, ಬಾಂಗ್ಲಾದೇಶ, ಇಂಡೋನೆಷ್ಯಾ, ಸುಡಾನ್ ಹಾಗೂ ಥೈಲ್ಯಾಂಡ್ ಮೂಲದವರು ಎಂದು ತಿಳಿದು ಬಂದಿದೆ. ಉಳಿದಂತೆ 132 ಮಂದಿ ಭಾರತೀಯರು ಎನ್ನಲಾಗಿದೆ.

34 Temporary Jails For Lockdown Defaulters In Uttar Pradesh

ಲಕ್ನೋದಲ್ಲೇ ಸ್ಪೆಷಲ್ ಜೈಲು:

ಭಾರತ ಲಾಕ್ ಡೌನ್ ನಿಯಮವನ್ನು ಮೀರಿ ನಡೆದುಕೊಂಡವರನ್ನು ಬಂಧಿಸುವಂತಾ ಶಿಸ್ತುಕ್ರಮವನ್ನು ಉತ್ತರ ಪ್ರದೇಶ ಸರ್ಕಾರ ಮೊದಲೇ ಜಾರಿಗೊಳಿಸಿದೆ. ಇದೀಗ ಬಂಧಿತರನ್ನು ಇರಿಸಲು ಲಕ್ನೋದಲ್ಲಿರುವ ಕಾಶ್ಮೀರಿ ಮೊಹಲ್ಲಾ ಮುನಿಸಿಪಲ್ ಗರ್ಲ್ಸ್ ಇಂಟರ್ ಕಾಲೇಜ್ ನಲ್ಲಿ ತಾತ್ಕಾಲಿಕ ಜೈಲು ನಿರ್ಮಿಸಲಾಗಿದೆ. ಈ ಜೈಲಿನಲ್ಲಿ ರೂಲ್ಸ್ ಬ್ರೇಕ್ ಮಾಡಿದ ನಾಲ್ವರು ವಿದೇಶಿ ಮಹಿಳೆಯರನ್ನು ಸಹ ಇರಿಸಲಾಗಿದೆ. ಇನ್ನೊಂದು ಕಡೆ ಭಾರತ ಲಾಕ್ ಡೌನ್ ನಿಯಮ ಉಲ್ಲಂಘಿಸಿದ ನಾಲ್ವರು ಭಾರತೀಯ ಮಹಿಳೆಯರನ್ನು ಕೂಡ ಬಂಧಿಸಿ ಬುಲಂದ್ ಶಹಾರ್ ನಲ್ಲಿರುವ ತಾತ್ಕಾಲಿಕ ಜೈಲಿನಲ್ಲಿ ಇರಿಸಲಾಗಿದೆ.

English summary
34 Temporary Jails For Lockdown Defaulters In Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X