• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉತ್ತರ ಪ್ರದೇಶ: 3 ವರ್ಷದ ಬಾಲೆಯನ್ನು ಕೇವಲ ಹತ್ಯೆ ಮಾಡಿರಲಿಲ್ಲ, ಅತ್ಯಾಚಾರವೂ ನಡೆದಿತ್ತು

|

ಲಕ್ನೋ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಲಖಿಂಪುರದಲ್ಲಿ ನಡೆದ 3 ವರ್ಷದ ಮಗುವಿನ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಟಾಪ್ಸಿ ವರದಿಯಲ್ಲಿ ಮತ್ತೊಂದು ವಿಚಾರ ಬೆಳಕಿಗೆ ಬಂದಿದೆ.

3 ವರ್ಷದ ಬಾಲೆಯನ್ನು ಕೇವಲ ಹತ್ಯೆ ಮಾಡಿರಲಿಲ್ಲ, ಅತ್ಯಾಚಾರವೂ ನಡೆದಿತ್ತು ಎಂಬುದು ತಿಳಿದುಬಂದಿದೆ.

ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ 3 ವರ್ಷದ ಮಗು ಶವ ಪತ್ತೆಯಾಗಿದೆ.ಸಿಂಘಹಿ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಶವ ಪತ್ತೆಯಾಗಿತ್ತು.ಮಗುವಿನ ತಲೆಯಲ್ಲಿ ಗಾಯದ ಗುರುತುಗಳಿದ್ದವು. ಕಬ್ಬಿನ ಗದ್ದೆಯಲ್ಲಿ ಶವ ಪತ್ತೆಯಾಗಿತ್ತು. ಬಾಲಕಿ ಬುಧವಾರದಿಂದ ನಾಪತ್ತೆಯಾಗಿದ್ದಳು.

10 ದಿನಗಳ ಅಂತರದಲ್ಲಿ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ, ಕೊಲೆ

ಪೊಲೀಸರ ಬಳಿ ದೂರು ನೀಡಲಾಗಿತ್ತು. ಕುಟುಂಬದ ಮೇಲಿನ ದ್ವೇಷದಿಂದ ಮಗಳನ್ನು ಕೊಲೆ ಮಾಡಿರಬಹುದು ಎಂದು ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಲಖೀಂಪುರ ಖೇರಿ ಎಸ್‌ಪಿ ಸತ್ಯೇಂದ್ರ ಕುಮಾರ್ ಸಿಂಗ್ ಮಾತನಾಡಿ, ಮಗುವಿನ ತಂದೆಯ ದೂರಿನ ಮೇರೆಗೆ ದೂರು ದಾಖಲಿಸಿರುವುದಾಗಿ ತಿಳಿಸಿದ್ದಾರೆ.

ಬಾಲಕಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆಂದು ರವಾನಿಸಲಾಗಿದೆ. ಸಾವಿಗೆ ಮತ್ತೇನಾದರೂ ಕಾರಣವಿದ್ದರೆ ತಿಳಿದುಬರಲಿದೆ.

ಆರೋಪಿಗಳನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ. ಆಗಸ್ಟ್ 25ರಂದು ಇದೇ ಪ್ರದೇಶದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆದಿತ್ತು. ಒಂದು ತಿಂಗಳ ಅಂತರಲ್ಲಿ ಒಟ್ಟು ಮೂರು ಘಟನೆಗಳು ನಡೆದಂತಾಗಿದೆ.

ಆಗಸ್ಟ್ 15 ರಂದು ಬಾಲಕಿಯೊಬ್ಬಳನ್ನು ಅಪಹರಿಸಲಾಗಿತ್ತು, ಬಳಿಕ ಕಬ್ಬಿನ ಗದ್ದೆಯಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಆಕೆಯ ಕಣ್ಣುಗಳನ್ನು ಕಿತ್ತಿದ್ದರು, ನಾಲಿಗೆಯನ್ನು ಕತ್ತರಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಇದ್ಯಾವುದೂ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಕಾಲರ್‌ಶಿಪ್ ಅರ್ಜಿಯನ್ನು ತುಂಬಲು ನಗರಕ್ಕೆ ಹೋಗಿದ್ದಳು, ಆಕೆ ವಾಪಸ್ ಮನೆಗೆ ಬಂದಿರಲಿಲ್ಲ ಎಂದು ಕುಟುಂಬದವರು ಹೇಳಿದ್ದಾರೆ.ಸೋಮವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಮನೆಯಿಂದ ಹೊರಟಿದ್ದಳು, ಯಾರ ಮೇಲೆ ಸಂಶಯಪಡಬೇಕು ತಿಳಿಯುತ್ತಿಲ್ಲ ಎಂದು ಪೋಷಕರು ಹೇಳಿದ್ದಾರೆ.

English summary
A three-year-old girl was found dead on Thursday morning in a suspected case of murder in a village in Singahi area here, police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X