ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೈಕ್ ಮೇಲೆ ಭರ್ಜರಿ ಸ್ಟಂಟ್, ಯುವತಿಯರಿಗೆ 28,000 ರೂ. ದಂಡ..!

|
Google Oneindia Kannada News

ಲಕ್ನೋ, ಮಾರ್ಚ್ 19: ಬೈಕ್ ಮೇಲೆ ಸ್ಟಂಟ್ ಮಾಡಬೇಡಿ ಅಂತಾ ಪೊಲೀಸರು ಅದೆಷ್ಟೇ ಎಚ್ಚರಿಕೆ ನೀಡಿದರೂ ಕೆಲವು ಉಡಾಳರಿಗೆ ಅದು ಅರ್ಥವಾಗುತ್ತಿಲ್ಲ. ಇದೇ ರೀತಿ ರೋಡ್‌ನಲ್ಲಿ ಭರ್ಜರಿ ಸ್ಟಂಟ್ ಮಾಡಿದ ಕಾರಣಕ್ಕೆ ಯುವತಿಯರಿಗೆ 28,000 ರೂಪಾಯಿ ದಂಡ ಹಾಕಲಾಗಿದೆ. ಸ್ಟಂಟ್ ಮಾಡಿ ಲಾಕ್ ಆದ ಯುವತಿಯರನ್ನ ಶಿವಾಂಗಿ ಹಾಗೂ ಸ್ನೇಹಾ ಅಂತಾ ಗುರುತಿಸಲಾಗಿದೆ. ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಈ ಘಟನೆ ನಡೆದಿದೆ.

ಕಾಮನ್ ಆಗಿ ಹುಡುಗರು ಗರ್ಲ್ ಫ್ರೆಂಡ್‌ನ ಬೈಕ್ ಹಿಂದೆ ಕೂರಿಸಿ ವೀಲಿಂಗ್ ಮಾಡ್ತಾರೆ. ಹೀಗೆಲ್ಲಾ ವೀಲಿಂಗ್ ಮಾಡಿ ಪೊಲೀಸರ ಕೈಲಿ ಲಾಕ್ ಆಗ್ತಾರೆ. ಆದರೆ ಇಲ್ಲಿ ಬೈಕ್ ಸ್ಟಂಟ್ ಮಾಡಿದ್ದು ಇಬ್ಬರೂ ಹುಡುಗಿಯರೇ ಎಂಬುದು ಆಶ್ಚರ್ಯ. ಸ್ನೇಹಾ ಬುಲೆಟ್ ಮೇಲೆ ಕೂತು ತನ್ನ ಹೆಗಲ ಮೇಲೆ ಗೆಳತಿ ಶಿವಾಂಗಿಯನ್ನ ಕೂರಿಸಿಕೊಂಡಿದ್ದಾಳೆ.

28,000 Rupees Fine For Bike Stunt On Road

ಲವ್ವರ್ ಗಾಗಿ ವ್ಹೀಲಿಂಗ್ ಮಾಡಿ ಲಾಕ್ ಆದ ಪೊಲೀಸ್ ಮಗ ! ಲವ್ವರ್ ಗಾಗಿ ವ್ಹೀಲಿಂಗ್ ಮಾಡಿ ಲಾಕ್ ಆದ ಪೊಲೀಸ್ ಮಗ !

ಹೀಗೆ ಇಬ್ಬರೂ ಬೈಕ್ ರೈಡ್ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ಈ ಘಟನೆ ಬಗ್ಗೆ ತೀವ್ರ ಆಕ್ರೋಶವೂ ಮೊಳಗಿತ್ತು. ತಕ್ಷಣ ಎಚ್ಚೆತ್ತುಕೊಂಡ ಉತ್ತರ ಪ್ರದೇಶ ಪೊಲೀಸರು, ಬೈಕ್ ಸ್ಟಂಟ್ ಮಾಡಿದ್ದ ಯುವತಿಯರಿಗೆ ಬರೋಬ್ಬರಿ 28 ಸಾವಿರ ರೂಪಾಯಿ ದಂಡ ಹಾಕಿದ್ದಾರೆ.

ವಿವಿಧ ರೀತಿ ದಂಡ ಪ್ರಯೋಗ..!
ಅಂದಹಾಗೆ ಹೀಗೆ ಬೈಕ್ ಸ್ಟಂಟ್ ಮಾಡಿ ತಗಲಾಕ್ಕೊಂಡಿರುವ ಸ್ನೇಹಾ ಹಾಗೂ ಶಿವಾಂಗಿ ಹಲವು ತಪ್ಪುಗಳನ್ನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಬೈಕ್ ಸ್ಟಂಟ್ ಮಾತ್ರವಲ್ಲದೆ, ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ಬೈಕ್ ಓಡಿಸಿದ್ದು. ಇದರ ಜೊತೆಗೆ ಸ್ಟಂಟ್ ಮಾಡಲು ಬೈಕ್ ನೀಡಿದ ಮಾಲೀಕನಿಗೂ ದಂಡ ಹಾಕಲಾಗಿದೆ. ಲೈಸೆನ್ಸ್ ಇಲ್ಲದೆ ಬೈಕ್‌ ಓಡಿಸಿದ್ದ ಕಾರಣಕ್ಕೆ ಕುಸ್ತಿಪಟು ಸ್ನೇಹಾ ರಘುವಂಶಿ ತಾಯಿ ಮಂಜು ದೇವಿಗೆ ಸುಮಾರು 11 ಸಾವಿರ ದಂಡ ಸೇರಿದಂತೆ ಬೈಕ್ ಕೊಟ್ಟ ಮಾಲೀಕ ಸಂಜಯ್ ಕುಮಾರ್‌ಗೆ 17 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ದಂಡ ಪ್ರಯೋಗ ಬೈಕ್ ಸ್ಟಂಟ್ ಪ್ರಿಯರಲ್ಲಿ ಸಂಚಲನ ಸೃಷ್ಟಿಸಿದೆ.

ಪೊಲೀಸರಿಂದ ವಿಡಿಯೋ ವಾರ್ನಿಂಗ್..!
ಬೈಕ್ ಸ್ಟಂಟ್ ಮಾಡಿ ಪೋಸ್ ಕೊಡುವ ಕೆಲ ಉಡಾಳರಿಗೆ ಅಂತಾ ಉತ್ತರ ಪ್ರದೇಶ ಪೊಲೀಸರು ವಿಡಿಯೋ ಮಾಡಿದ್ದಾರೆ. ವಿಡಿಯೋದಲ್ಲಿ ಬೈಕ್ ಸ್ಟಂಟ್ ಮಾಡಿ ಭಾರಿ ಪ್ರಮಾಣದ ದಂಡ ಕಟ್ಟಿದ ಸವಾರರ ಉದಾಹರಣೆ ನೀಡಲಾಗಿದೆ. ಹಾಗೇ ನೀವು ಬೈಕ್ ಸ್ಟಂಟ್ ಮಾಡಬೇಡಿ ಎಂಬ ಸಂದೇಶವನ್ನ ಉತ್ತರ ಪ್ರದೇಶದ ಪೊಲೀಸರು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಯುವತಿಯರ ಬೈಕ್ ಸ್ಟಂಟ್ ವಿಡಿಯೋ ಜೊತೆಗೆ, ಪೊಲೀಸರ ಈ ಜನಜಾಗೃತಿ ಸಾರುವ ವಿಡಿಯೋ ಕೂಡ ವೈರಲ್ ಆಗುತ್ತಿದೆ.

English summary
After a video went viral on social media of bike stunt, UP police fine 28,000 rupees to the bike riders who violated the traffic rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X