ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಮಿಕರು ಪ್ರಯಾಣಿಸುತ್ತಿದ್ದ ಟ್ರಕ್‌ ಅಪಘಾತ: 24 ಮಂದಿ ದುರ್ಮರಣ

|
Google Oneindia Kannada News

ಲಕ್ನೋ, ಮೇ 16: ರಾಜಸ್ಥಾನದಿಂದ ಉತ್ತರ ಪ್ರದೇಶಕ್ಕೆ ಹೊರಟಿದ್ದ ವಲಸೆ ಕಾರ್ಮಿಕರಿದ್ದ ಟ್ರಕ್‌ಗೆ ಮತ್ತೊಂದು ಟ್ರಕ್ ಡಿಕ್ಕಿ ಹೊಡೆದು 24 ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ.

ಆರೈಯಾ ಪ್ರದೇಶದಲ್ಲಿ ವಲಸೆ ಕಾರ್ಮಿಕರು ತೆರಳುತ್ತಿದ್ದ ಟ್ರಕ್‌ಗೆ ಮತ್ತೊಂದು ಟ್ರಕ್ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ 24 ಕಾರ್ಮಿಕರು ಮೃತಪಟ್ಟಿದ್ದಾರೆ. ಬೆಳಗಿನ ಜಾವ 3.30ರ ಸುಮಾರಿಗೆ ಈ ಘಟನೆ ನಡೆದಿದೆ.

15-20 ಮಂದಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆ ದಾಖಲಿಸಲಾಗಿದೆ ಅದರಲ್ಲಿ ಬಿಹಾರ, ಪಶ್ಚಿಮ ಬಂಗಾಳ, ಜಾರ್ಖಂಡ್‌ ಮೂಲದವರಿದ್ದರು.ಮೇ 14 ರಂದು 2 ಪ್ರತ್ಯೇಕ ಅಪಘಾತದಲ್ಲಿ 14 ವಲಸೆ ಕಾರ್ಮಿಕರು ಮೃತಪಟ್ಟಿದ್ದರು.

truck

ಬಸ್-ಟ್ರಕ್ ಡಿಕ್ಕಿ :ಮಧ್ಯಪ್ರದೇಶದ ಗುನಾ ಪಟ್ಟಣದ ಬಳಿ ಇಂದು ನಸುಕಿನಲ್ಲಿ ಬಸ್ ಮತ್ತು ಟ್ರಕ್ ನಡುವೆ ಭೀಕರ ಡಿಕ್ಕಿ ಅಪಘಾತ ಸಂಭವಿಸಿ ಎಂಟು ವಲಸೆ ಕಾರ್ಮಿಕರು ಮೃತಪಟ್ಟು, 55ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮೃತಪಟ್ಟವರೆಲ್ಲರೂ ಉತ್ತರಪ್ರದೇಶದವರಾಗಿದ್ದು, ಮಹಾರಾಷ್ಟ್ರದಿಂದ ತಮ್ಮ ಊರುಗಳಿಗೆ ಬಸ್‍ನಲ್ಲಿ ತೆರಳುತ್ತಿದ್ದಾಗ ಇಂದು 4ರ ನಸುಕಿನಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಕಂಟಿ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಮದನ್ ಮೋಹನ್ ಮಾಳವಿಯ ತಿಳಿಸಿದ್ದಾರೆ.

ಟ್ರಕ್ ಮತ್ತು ಬಸ್‌ ನಡುವೆ ಡಿಕ್ಕಿ: ಬಿಹಾರ್‌ನಲ್ಲಿ 9 ಕಾರ್ಮಿಕರು ಸಾವುಟ್ರಕ್ ಮತ್ತು ಬಸ್‌ ನಡುವೆ ಡಿಕ್ಕಿ: ಬಿಹಾರ್‌ನಲ್ಲಿ 9 ಕಾರ್ಮಿಕರು ಸಾವು

ಗಾಯಗೊಂಡ 55ಕ್ಕೂ ಹೆಚ್ಚು ಜನರನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಂಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ ಹರಿದು 6 ಸಾವು :ಉತ್ತರ ಪ್ರದೇಶದ ಮುಜಾಫರ್‍ನಗರದ ಬಳಿ ನಿನ್ನೆ ತಡರಾತ್ರಿ ವೇಗವಾಗಿ ಚಲಿಸುತ್ತಿದ್ದ ಬಸ್ ಹರಿದು ಆರು ವಲಸೆ ಕಾರ್ಮಿಕರು ಸ್ಥಳದಲ್ಲೇ ಸಾವಿಗೀಡಾಗಿ, ಇತರ ಐವರು ತೀವ್ರ ಗಾಯಗೊಂಡಿದ್ದಾರೆ.
ಮುಜಾಫರ್‍ನಗರದಿಂದ 20 ಕಿ.ಮೀ. ದೂರದಲ್ಲಿರುವ ದೆಹಲಿ-ಸಹರನ್‍ಪುರ್ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಸಂಕಷ್ಟಕ್ಕೀಡಾಗಿದ್ದ 11 ವಲಸೆ ಕಾರ್ಮಿಕರು ಬಿಹಾರದಿಂದ ಹರಿಯಾಣಗೆ ಕಾಲ್ನಡಿಗೆಯಲ್ಲೇ ತೆರಳುತ್ತಿದ್ದರು. ಅತಿವೇಗವಾಗಿ ಚಲಿಸುತ್ತಿದ್ದ ಬಸ್ ಈ ಕಾರ್ಮಿಕರ ಗುಂಪಿನ ಮೇಲೆ ಹರಿಯಿತು. ಆರು ಮಂದಿ ಸ್ಥಳದಲ್ಲೇ ಮೃತಪಟ್ಟರು. ಗಾಯಗೊಂಡ ಐವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಬಸ್ ಚಾಲಕ ಪಾನಮತ್ತನಾಗಿದ್ದು, ಆತನನ್ನು ಬಂಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಯಾದವ್ ತಿಳಿಸಿದ್ದಾರೆ.

ಕಳೆದ ವಾರ ಮಧ್ಯಪ್ರದೇಶದಲ್ಲಿ ಸಂಭವಿಸಿದ ಅಪಘಾತದಲ್ಲಿ ಆರು ವಲಸೆ ಕಾರ್ಮಿಕರು ಅಸು ನೀಗಿದ್ದರು. ಮಹಾರಾಷ್ಟ್ರದ ಔರಂಗಾಬಾದ್‍ನಲ್ಲಿ ರೈಲ್ವೆ ಹಳಿ ಮೇಲೆ ವಿರಮಿಸಿದ್ದ 20 ವಲಸೆ ಕಾರ್ಮಿಕರ ಮೇಲೆ ಗೂಡ್ಸ್ ಟ್ರೈನ್ ಹರಿದು 16 ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿದ್ದರು.

English summary
More than 20 migrant labourers were killed and dozens were injured after the truck they were travelling in collided with another in Auraiya of Uttar Pradesh early on Saturday, news agency ANI reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X