ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2006ರ ವಾರಣಾಸಿ ಸರಣಿ ಬಾಂಬ್ ಸ್ಫೋಟ ಪ್ರಕರಣ: ಉಗ್ರ ವಲೀಯುಲ್ಲಾ ಖಾನ್‌ಗೆ ಗಲ್ಲು

|
Google Oneindia Kannada News

ವಾರಣಾಸಿ ಜೂನ್ 6: 2006 ರ ವಾರಣಾಸಿ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ವಲೀಯುಲ್ಲಾ ಖಾನ್‌ಗೆ ಉತ್ತರ ಪ್ರದೇಶದ ಗಾಜಿಯಾಬಾದ್ ನ್ಯಾಯಾಲಯ ಸೋಮವಾರ ಗಲ್ಲು ಶಿಕ್ಷೆ ವಿಧಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ಗಾಜಿಯಾಬಾದ್‌ನ ಜಿಲ್ಲಾ ಮತ್ತು ಸತ್ರ ನ್ಯಾಯಲಯದ ನ್ಯಾ. ಜೀತೇಂದ್ರ ಕುಮಾರ್, ಆರೋಪಿ ವಲಿಯುಲ್ಲಾ ಖಾನ್ ದೋಷಿ ಎಂದು ಜೂನ್ 4ರಂದು ತೀರ್ಪು ನೀಡಿ, ಶಿಕ್ಷೆಯನ್ನು ಕಾಯ್ದಿರಿಸಿದ್ದರು. ಸೋಮವಾರ ಶಿಕ್ಷೆಯನ್ನು ಪ್ರಕಟಿಸಿದ್ದಾರೆ.

ಉತ್ತರಪ್ರದೇಶ ಉಪಚುನಾವಣೆ: ಸ್ಪರ್ಧಿಸದಿರಲು ಕಾಂಗ್ರೆಸ್ ತೀರ್ಮಾನಉತ್ತರಪ್ರದೇಶ ಉಪಚುನಾವಣೆ: ಸ್ಪರ್ಧಿಸದಿರಲು ಕಾಂಗ್ರೆಸ್ ತೀರ್ಮಾನ

2006ರ ಮಾರ್ಚ್ 7 ರಂದು ವಾರಣಾಸಿಯ ಸಂಕಟ ಮೋಚನ ಮಂದಿರ ಮತ್ತು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಜತೆಗೆ ದಶಾಶ್ವಮೇಧ ಘಾಟ್ ನಲ್ಲಿ ಕುಕ್ಕರ್ ಬಾಂಬ್ ಕೂಡ ಪತ್ತೆಯಾಗಿತ್ತು. ಸರಣಿ ಸ್ಫೋಟದಲ್ಲಿ ಒಟ್ಟು 28 ಮಂದಿ ಮೃತಪಟ್ಟಿದ್ದರು. ಅಲ್ಲದೇ 101 ಜನರು ಗಾಯಗೊಂಡಿದ್ದರು. ಉಗ್ರ ವಲಿಯುಲ್ಲಾ ಖಾನ್ ಸ್ಫೋಟದ ಮಾಸ್ಟರ್ ಮೈಂಡ್ ಆಗಿದ್ದ. ಹೈಕೋರ್ಟ್‌ನ ಆದೇಶದ ಮೇರೆಗೆ ಪ್ರಕರಣವನ್ನು ವಿಚಾರಣೆಗಾಗಿ ಗಾಜಿಯಾಬಾದ್ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು. ಘಟನೆ ನಡೆದು 16 ವರ್ಷಗಳ ನಂತರ ತೀರ್ಪು ಪ್ರಕಟವಾಗಿದೆ.

ಬಾಂಗ್ಲಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ

ಬಾಂಗ್ಲಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ

ಪ್ರಕರಣದ ತನಿಖೆ ನಡೆಸುತ್ತಿದ್ದ ವಿಶೇಷ ಕಾರ್ಯಪಡೆ, 2006ರ ಏಪ್ರಿಲ್ ನಲ್ಲಿ ಪ್ರಮುಖ ಆರೋಪಿ ವಲಿಯುಲ್ಲಾ ಖಾನ್ನನ್ನು ಪ್ರಯಾಗ್ರಾಜ್ ನ ಪೂಲ್ಪುರದಲ್ಲಿ ಬಂಧಿಸಿತ್ತು. ಈತ ಬಾಂಗ್ಲಾದೇಶದ ಭಯೋತ್ಪಾದಕ ಸಂಘಟನೆ ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿ ನೊಂದಿಗೆ ಸಂಪರ್ಕ ಹೊಂದಿದ್ದ. ಈ ಕುರಿತು ವಿಶೇಷ ಕಾರ್ಯಪಡೆಯ ಪೊಲೀಸರು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು.

ಪ್ರವಾದಿ ವಿರುದ್ಧ ಹೇಳಿಕೆ - ನೂಪುರ್ ಶರ್ಮಾಗೆ ಜೀವ ಬೆದರಿಕೆ: ದೂರು ದಾಖಲುಪ್ರವಾದಿ ವಿರುದ್ಧ ಹೇಳಿಕೆ - ನೂಪುರ್ ಶರ್ಮಾಗೆ ಜೀವ ಬೆದರಿಕೆ: ದೂರು ದಾಖಲು

ಎರಡು ಪ್ರಕರಣಗಳಲ್ಲಿ ವಲಿಯುಲ್ಲಾ ದೋಷಿ

ಎರಡು ಪ್ರಕರಣಗಳಲ್ಲಿ ವಲಿಯುಲ್ಲಾ ದೋಷಿ

" ಕೊಲೆ, ಕೊಲೆ ಯತ್ನಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಮತ್ತು ಸ್ಫೋಟಕ ಕಾಯಿದೆಯಡಿಯಲ್ಲಿ ದಾಖಲಿಸಲಾದ ಎರಡು ಪ್ರಕರಣಗಳಲ್ಲಿ ವಲಿಯುಲ್ಲಾ ಖಾನ್ನನ್ನು ದೋಷಿ ಎಂದು ಗಾಜಿಯಾಬಾದ್ ನ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಜಿತೇಂದ್ರ ಕುಮಾರ್ ಸಿನ್ಹಾ ಘೋಷಿಸಿದರು. ಮತ್ತೊಂದು ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ,'' ಎಂದು ಸರಕಾರಿ ವಕೀಲರಾದ ರಾಜೇಶ್ ಶರ್ಮಾ ತಿಳಿಸಿದ್ದಾರೆ.

ಪ್ರಕರಣದಲ್ಲಿ ಒಟ್ಟು 121 ಸಾಕ್ಷಿಗಳ ವಿಚಾರಣೆ

ಪ್ರಕರಣದಲ್ಲಿ ಒಟ್ಟು 121 ಸಾಕ್ಷಿಗಳ ವಿಚಾರಣೆ

ತೀರ್ಪು ಪ್ರಕಟವಾಗುವ ಮುನ್ನ ವಲಿಯುಲ್ಲಾ ಖಾನ್ನನ್ನು ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಪರವಾಗಿ ವಾದ ಮಾಡಲು ವಾರಣಾಸಿ ನ್ಯಾಯಾಲಯದ ವಕೀಲರು ನಿರಾಕರಿಸಿದರು. ಹಾಗಾಗಿ ಅಲಹಬಾದ್ ಹೈಕೋರ್ಟ್ ಪ್ರಕರಣರವನ್ನು ಗಾಜಿಯಾಬಾದ್ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿತು. ಒಟ್ಟು 121 ಸಾಕ್ಷಿಗಳ ವಿಚಾರಣೆ ನಡೆಸಿದ ಗಾಜಿಯಾಬಾದ್ ಜಿಲ್ಲಾ ನ್ಯಾಯಾಲಯ, ಸೋಮವಾರ ತೀರ್ಪು ಪ್ರಕಟಿಸಿದೆ.

ಎಲ್ಲೆಲ್ಲಿ ಬಾಂಬ್ ಸ್ಫೋಟಿಸಿತು

ಎಲ್ಲೆಲ್ಲಿ ಬಾಂಬ್ ಸ್ಫೋಟಿಸಿತು

2006ರ ಮಾರ್ಚ್ 7ರ ಸಂಜೆ 6.15 ಕ್ಕೆ ವಾರಣಾಸಿಯ ಲಂಕಾ ಪೊಲೀಸ್ ಠಾಣೆಯ ವ್ಯಾಪ್ತಿಯ ಸಂಕಟ ಮೋಚನ ದೇವಸ್ಥಾನದಲ್ಲಿ ಬಾಂಬ್ ಸ್ಫೋಟಸಿತ್ತು. ಇದಾದ 15 ನಿಮಿಷದ ನಂತರ ವಾರಣಾಸಿಯ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ವಿಶ್ರಾಂತಿ ಗೃಹದಲ್ಲಿ ಸ್ಫೋಟ ಸಂಭವಿಸಿತ್ತು. ಬಳಿಕ ದಶಾಶ್ವಮೇಧ ಘಾಟ್ ನ ಹಳಿಯ ಬಳಿ ಕುಕ್ಕರ್ ಬಾಂಬ್ ಪತ್ತೆಯಾಗಿತ್ತು.

(ಒನ್ಇಂಡಿಯಾ ಸುದ್ದಿ)

English summary
2006 Varanasi Serial Blasts Convicted Terrorist Waliullah Khan Sentenced to Death Penalty, Life Imprisonment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X