• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉತ್ತರ ಪ್ರದೇಶ: ಅತ್ಯಾಚಾರ ಸಂತ್ರಸ್ತೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣು

|

ಲಕ್ನೋ, ಅಕ್ಟೋಬರ್ 14: ಹದಿನೈದು ವರ್ಷದ ಅತ್ಯಾಚಾರ ಸಂತ್ರಸ್ತೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಚಿತ್ರಕೂಟದ ಎಸ್‌ಪಿ ಅಂಕಿತ್ ಮಿಟ್ಟಲ್ ಅವರು ನೀಡಿರುವ ಮಾಹಿತಿ ಪ್ರಕಾರ ಬಾಲಕಿ ಮಾಣಿಕ್‌ಪುರ ಪ್ರದೇಶದಲ್ಲಿರುವ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಹತ್ರಾಸ್ ಅತ್ಯಾಚಾರ ಪ್ರಕರಣ: ಸುಪ್ರೀಂನಲ್ಲಿ ಹೊಸ ಪಿಐಎಲ್ ದಾಖಲು

ಆಕೆ ಮೃತಪಟ್ಟ ಬಳಿಕ ಕುಟುಂಬದವರು ಆಕೆಯ ಮೇಲೆ ಮೂವರು ಮಂದಿ ಅತ್ಯಾಚಾರ ನಡೆಸಿದ್ದರು ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಕುಟುಂಬದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ. ಗ್ರಾಮದ ಮಾಜಿ ಮುಖ್ಯಸ್ಥನ ಮಗ ಕಿಶನ್ ಉಪಾಧ್ಯಾಯ ಹಾಗೂ ಇನ್ನುಳಿದ ಇಬ್ಬರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

ಬಾಲಕಿಯ ದೂರನ್ನು ದಾಖಲಿಸಲು ಪೊಲೀಸರು ಸಿದ್ಧವಿರಲಿಲ್ಲ, ಹೀಗಾಗಿ ಬೇಸರಗೊಂಡು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ, ಮಾರಿಯನ್ನು ಫಾರೆನ್ಸಿಕ್ ಲ್ಯಾಬೊರೇಟರಿಗೆ ಈಗ ಕಳುಹಿಸಲಾಗಿದೆ.

ಬುಧವಾರ ಬಾಲಕಿಯ ಅಂತ್ಯ ಸಂಸ್ಕಾರ ನಡೆಯಲಿದೆ. ಭದ್ರತೆಯನ್ನು ನೀಡಲಾಗಿದೆ. ನನ್ನ ಮಗಳನ್ನು ಕೈಕಾಲು ಕಟ್ಟಿ ರಸ್ತೆಗೆ ಎಸೆಯಲಾಗಿತ್ತು, ಪೊಲೀಸರೇ ಮಗಳನ್ನು ಮನೆಗೆ ತಂದು ಬಿಟ್ಟಿದ್ದರು ಆದರೂ ಎಫ್‌ಐಆರ್ ದಾಖಲಿಸಿರಲಿಲ್ಲ.

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ 19 ವರ್ಷದ ಯುವತಿ ಮೇಲೆ ನಾಲ್ವರು ಅತ್ಯಾಚಾರವೆಸಗಿದ್ದರು. ಬಳಿಕ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಳು.

English summary
A Dalit teenage girl, who was allegedly raped by three men, has ended her life by hanging herself in this district of Uttar Pradesh, officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X