• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭೀಕರ ಅಪಘಾತ: ಬೊಲೆರೊದಲ್ಲಿದ್ದ ಎಲ್ಲ 14 ಮಂದಿ ಸಾವು

|

ಪ್ರತಾಪಗಡ, ನವೆಂಬರ್ 20: ಉತ್ತರ ಪ್ರದೇಶದಲ್ಲಿ ಗುರುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 14 ಮಂದಿ ಮೃತಪಟ್ಟಿದ್ದಾರೆ. ಮೃತ ದುರ್ದೈವಿಗಳಲ್ಲಿ ಆರು ಮಕ್ಕಳೂ ಸೇರಿದ್ದಾರೆ.

ಉತ್ತರ ಪ್ರದೇಶದ ಪ್ರತಾಪಗಡದಲ್ಲಿ ಈ ದುರ್ಘಟನೆ ಸಂಭವಿಸಿದೆ. ಪ್ರಯಾಣಿಕರು ತುಂಬಿಕೊಂಡಿದ್ದ ವಾಹನ ಟ್ರಕ್‌ಗೆ ಡಿಕ್ಕಿಯಾಗಿದೆ. ಪ್ರಯಾಗ್ ರಾಜ್-ಲಕ್ನೋ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಸ್‌ಯುವಿ ಒಂದು ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಎಸ್‌ಯುವಿದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ.

ಗುರುವಾರ ರಾತ್ರಿ 11.45ರ ಸುಮಾರಿಗೆ ಮಾಣಿಕಪುರ ಪೊಲೀಸ್ ಠಾಣೆ ವ್ಯಾಪ್ತಿಯ ದೇಶರಾಜ್ ಇನಾರಾ ಗ್ರಾಮದ ಸಮೀಪ ಮಹೀಂದ್ರಾ ಬೊಲೆರೊ ವಾಹನ ಮತ್ತು ನಿಲ್ಲಿಸಿದ್ದ ಟ್ರಕ್ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಬೊಲೆರೊದ ಮುಂಭಾಗದಲ್ಲಿದ್ದ ಪ್ರಯಾಣಿಕರು ಹಿಂಬದಿಯಿಂದ ಹೊರಗೆ ಬಿದ್ದಿದ್ದಾರೆ.

ಟೈರ್ ಪಂಕ್ಚರ್ ಆಗಿದ್ದ ಕಾರಣ ದಾರಿಯ ಬದಿಯಲ್ಲಿ ಟ್ರಕ್ ಅನ್ನು ನಿಲ್ಲಿಸಲಾಗಿತ್ತು. ವೇಗವಾಗಿ ಬಂದ ಬೊಲೆರೊ ವಾಹನ ನಿಲ್ಲಿದ್ದ ಟ್ರಕ್‌ಗೆ ಹಿಂದಿನಿಂದ ಗುದ್ದಿದೆ. ವಾಹನದ ಅರ್ಧದಷ್ಟು ಭಾಗ ಟ್ರಕ್ ಅಡಿ ಸಿಲುಕಿ ನಜ್ಜುಗುಜ್ಜಾಗಿದೆ. ಬಳಿಕ ಅದನ್ನು ಪೊಲೀಸರು ಹೊರಗೆ ತೆಗೆದಿದ್ದಾರೆ ಎಂದು ಪ್ರತಾಪಗಡ ಎಸ್‌ಪಿ ಅನುರಾಗ್ ಆರ್ಯ ತಿಳಿಸಿದ್ದಾರೆ.

ಮದುವೆ ಸಮಾರಂಭವೊಂದಲ್ಲಿ ಪಾಲ್ಗೊಂಡಿದ್ದ ದುರ್ದೈವಿಗಳು ಗೊಂಡಾದಲ್ಲಿನ ತಮ್ಮ ಹಳ್ಳಿಗೆ ವಾಪಸಾಗುತ್ತಿದ್ದರು.

English summary
14 people, including six children died in a tragic road accident between a SUV and a truck in Uttar Pradesh's Pratapgarh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X