ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶದಲ್ಲಿ ಭಾರಿ ಮಳೆ:15 ಮಂದಿ ಸಾವು,133 ಕಟ್ಟಡ ಕುಸಿತ

|
Google Oneindia Kannada News

ಲಕ್ನೋ, ಜುಲೈ 13: ಉತ್ತರ ಪ್ರದೇಶದ 14 ಜಿಲ್ಲೆಗಳಲ್ಲಿ ಭಾರಿ ಮಳೆ ಮುಂದುವರೆದಿದ್ದು ಜುಲೈ 9ರಿಂದ 12ರವರೆಗೆ 133 ಕಟ್ಟಡಗಳು ಕುಸಿದಿದ್ದು, 15 ಮಂದಿ ಮೃತಪಟ್ಟಿದ್ದಾರೆ.

ಕಳೆದ ಮೂರ್ನಾಲ್ಕು ದಿನಗಳಿಂದ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದೆ. ನಾಲ್ಕು ದಿನಗಳಲ್ಲಿ 133 ಕಟ್ಟಡಗಳು ಕುಸಿದಿವೆ. ಉನ್ನಾವೋ, ಅಂಬೇಡ್ಕರ್ ನಗರ, ಖಿರಿ, ಕಾನ್‌ಪುರ ನಗರ, ಪಿಲಿಭಿಟ್, ಸೋನಭದ್ರಾ, ಚಂದೋಳಿ, ಫಿರೋಜಾಬಾದ್, ಸುಲ್ತಾನ್‌ಪುರದಲ್ಲಿ ಹೆಚ್ಚಿನ ಅನಾಹುತವಾಗಿದೆ.

ಮಳೆಗಾಗಿ ಕುಂತಮ್ಮನ ಬೆಟ್ಟ ಹತ್ತಿದ ಭಕ್ತರು... ಮಳೆಗಾಗಿ ಕುಂತಮ್ಮನ ಬೆಟ್ಟ ಹತ್ತಿದ ಭಕ್ತರು...

ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಮುಂದಿನ ಐದು ದಿನ ಭಾರಿ ಮಳೆ ಮುಂದುವರೆಯಲಿರುವುದಾಗಿ ಮುನ್ಸೂಚನೆ ನೀಡಿದೆ. ಉತ್ತರಾಖಂಡ್, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಕೊಂಕಣ, ಗೋವಾ, ಕರ್ನಾಟಕ, ಅರುಣಾಚಲಪ್ರದೇಶ, ನಾಗಾಲ್ಯಾಂಡ್‌, ಮಣಿಪುರ, ಮಿಜೋರಾಮ್, ತ್ರಿಪುರದಲ್ಲಿ ಮಳೆ ಮುಂದುವರೆಯಲಿದೆ.

133 building collapse 15 dead as rainfall wreaks havoc in UP

ಈಗಾಗಲೇ ಉತ್ತರ ಕನ್ನಡ, ಉಡುಪಿ, ತೀರ್ಥಹಳ್ಳಿ, ಆಗುಂಬೆ, ಶಿವಮೊಗ್ಗದಲ್ಲಿ ಭಾರಿ ಮಳೆಯಾಗುತ್ತಿದೆ. ಇನ್ನು ಮುಂಬೈನಲ್ಲಿ ಮಳೆ ಕೊಂಚ ಬಿಡುವು ನೀಡಿದ್ದು, ಅಸ್ಸಾಂನಲ್ಲಿ ಪ್ರವಾಹ ಸೃಷ್ಟಿಯಾಗಿದೆ.

English summary
133 building collapse 15 dead as rainfall wreaks havoc in UP,Unnao, Ambedkar Nagar, khiri, Gorakhpur, Kanpur nagar, pilibhit, Sonabhadra districts were affected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X