ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶದ ಕಾರ್ಖಾನೆಯಲ್ಲಿ ಸ್ಫೋಟ: ಕನಿಷ್ಠ 10 ಸಾವು

|
Google Oneindia Kannada News

ಬದೋಹಿ (ಉತ್ತರ ಪ್ರದೇಶ) ಫೆಬ್ರವರಿ 23: ಉತ್ತರ ಪ್ರದೇಶದ ಬದೋಹಿ ಜಿಲ್ಲೆಯ ಕಾರ್ಪೆಟ್ ಕಾರ್ಖಾನೆಯೊಂದರಲ್ಲಿ ಉಂಟಾದ ಸ್ಫೋಟದಲ್ಲಿ ಶನಿವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 10 ಮಂದಿ ಬಲಿಯಾಗಿದ್ದಾರೆ.

ಶೌಚಾಲಯ ಎಂದು ನಿರ್ಮಾಣ ಹಂತದ ಲಿಫ್ಟ್‌ಗೆ ಹತ್ತಿ ಮಹಿಳೆ ಸಾವು ಶೌಚಾಲಯ ಎಂದು ನಿರ್ಮಾಣ ಹಂತದ ಲಿಫ್ಟ್‌ಗೆ ಹತ್ತಿ ಮಹಿಳೆ ಸಾವು

ರೊಹ್ಟಾ ಬಜಾರ್ ಎಂಬಲ್ಲಿನ ಅಂಗಡಿಯಲ್ಲಿ ಈ ಸ್ಫೋಟ ಸಂಭವಿಸಿದೆ. ಈ ಕಾರ್ಖಾನೆಯಲ್ಲಿ ಮೊದಲು ಪಟಾಕಿಗಳನ್ನು ತಯಾರಿಸಲಾಗಿತ್ತಿತ್ತು. ಒಂದಷ್ಟು ಪಟಾಕಿಗಳನ್ನು ಕಟ್ಟಡ ಒಳಭಾಗದಲ್ಲಿ ಶೇಖರಿಸಿ ಇರಿಸಲಾಗಿತ್ತು. ಅವುಗಳಿಂದ ಈ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.

ಚಳ್ಳಕೆರೆಯಲ್ಲಿ ಮನೆ ಮಾಳಿಗೆ ಕುಸಿದು ನಾಲ್ವರ ದುರ್ಮರಣಚಳ್ಳಕೆರೆಯಲ್ಲಿ ಮನೆ ಮಾಳಿಗೆ ಕುಸಿದು ನಾಲ್ವರ ದುರ್ಮರಣ

ಸ್ಫೋಟದ ತೀವ್ರತೆಗೆ ಇಡೀ ಕಟ್ಟಡ ಧ್ವಂಸವಾಗಿ ಕುಸಿದು ಬಿದ್ದಿದೆ. ಸಮೀಪದಲ್ಲಿದ್ದ ಮೂರು ಮನೆಗಳು ಕೂಡ ಕಂಪನದ ತೀವ್ರತೆಗೆ ಕುಸಿದಿವೆ. ಸ್ಫೋಟದಿಂದಾಗಿ ಕಾರ್ಖಾನೆ ಕಟ್ಟಡ ಅವಶೇಷಗಳು ಎಲ್ಲೆಡೆ ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿವೆ.

10 killed in explosion at factory in Bhadohi District

ಕೂಡಲೇ ಘಟನೆ ನಡೆದ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಮತ್ತು ರಕ್ಷಣಾ ಸಿಬ್ಬಂದಿ ಅವಶೇಷಗಳನ್ನು ತೆರವುಗೊಳಿಸಿ ಅಡಿಯಲ್ಲಿ ಸಿಲುಕಿರುವವರ ರಕ್ಷಣೆಗೆ ಪ್ರಯತ್ನಿಸಿದರು.

ಈ ಕಟ್ಟಡವು ಕಾರ್ಪೆಟ್ ತಯಾರಿಕೆಯ ಕಾರ್ಖಾನೆಯಾಗಿದೆ. ಇದಕ್ಕೂ ಮುನ್ನ ಇಲ್ಲಿ ಅಕ್ರಮವಾಗಿ ಪಟಾಕಿಗಳನ್ನು ತಯಾರಿಸಲಾಗುತ್ತಿತ್ತು ಎಂಬ ಮಾಹಿತಿ ಇದೆ. ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

English summary
At least 10 people were killed in an explosion at carpet factory in Uttar Pradesh's Bhadohi District on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X