ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋರ್ಟ್‌ನಿಂದ ಪಲಾಯನ ಮಾಡಿದ್ದ ಯುಪಿ ಬಿಜೆಪಿ ಸಚಿವನಿಗೆ 1 ವರ್ಷ ಜೈಲು!

|
Google Oneindia Kannada News

ಲಕ್ನೋ, ಆಗಸ್ಟ್‌ 08: ಮೂರು ದಶಕಗಳಷ್ಟು ಹಳೆಯದಾದ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ಉತ್ತರ ಪ್ರದೇಶದ ಸಚಿವ ರಾಕೇಶ್ ಸಚನ್ ಅವರಿಗೆ ಜಿಲ್ಲಾ ನ್ಯಾಯಾಲಯ ಸೋಮವಾರ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಆದರೆ ಈ ಪ್ರಕರಣದಲ್ಲಿ ಸಚಿವರು ತಕ್ಷಣವೇ ಜಾಮೀನು ಪಡೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 1991ರ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ಶನಿವಾರ ಶಿಕ್ಷೆಗೊಳಗಾದ ನಂತರ ಸಚಿವ ರಾಕೇಶ್ ಸಚನ್ ಅವರು ಶಿಕ್ಷೆಯ ಆದೇಶದೊಂದಿಗೆ ನ್ಯಾಯಾಲಯದಿಂದ ನಾಪತ್ತೆಯಾಗಿದ್ದರು. ಆದರೆ ಸೋಮವಾರ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್-3 ರ ನ್ಯಾಯಾಲಯಕ್ಕೆ ಶರಣಾದರು.

ನೋಯ್ಡಾ ಸೊಸೈಟಿಯಲ್ಲಿ ಮಹಿಳೆಯ ಮೇಲೆ ಹಲ್ಲೆ: ಶ್ರೀಕಾಂತ್ ತ್ಯಾಗಿ ಮನೆಯ ಮೇಲೆ ಜೆಸಿಬಿ ದಾಳಿನೋಯ್ಡಾ ಸೊಸೈಟಿಯಲ್ಲಿ ಮಹಿಳೆಯ ಮೇಲೆ ಹಲ್ಲೆ: ಶ್ರೀಕಾಂತ್ ತ್ಯಾಗಿ ಮನೆಯ ಮೇಲೆ ಜೆಸಿಬಿ ದಾಳಿ

ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮಗಳು, ಖಾದಿ ಮತ್ತು ಗ್ರಾಮೋದ್ಯೋಗ, ರೇಷ್ಮೆ ಉದ್ಯಮಗಳು, ಕೈಮಗ್ಗ ಮತ್ತು ಜವಳಿ ಖಾತೆಯನ್ನು ಹೊಂದಿರುವ ರಾಕೇಶ್ ಸಚನ್ ವಕೀಲರ ಜೊತೆ ಸೋಮವಾರ ನ್ಯಾಯಾಲಯಕ್ಕೆ ಬಂದಿದ್ದರು.

(ಶರಣಾಗತಿ) ಪ್ರಕ್ರಿಯೆಯು ಪೂರ್ಣಗೊಂಡ ನಂತರ, ನ್ಯಾಯಾಲಯವು ಯುಪಿ ಸಚಿವರಿಗೆ ಶಸ್ತ್ರಾಸ್ತ್ರ ಕಾಯ್ದೆಯ ಪ್ರಕರಣದಲ್ಲಿ ಒಂದು ವರ್ಷ ಜೈಲು ಶಿಕ್ಷೆಯನ್ನು ವಿಧಿಸಿತು. ಅಲ್ಲದೆ ಅವರಿಗೆ 1,500 ದಂಡವನ್ನು ವಿಧಿಸಿತು ಎಂದು ಪ್ರಾಸಿಕ್ಯೂಷನ್ ಅಧಿಕಾರಿ ರಿಚಾ ಗುಪ್ತಾ ಹೇಳಿದರು.

ಈ ವರ್ಷದ ಆರಂಭದಲ್ಲಿ ನಡೆದ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ತೊರೆದು ರಾಕೇಶ್ ಸಚನ್ ಬಿಜೆಪಿ ಸೇರಿದ್ದರು. ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ಸಚಿವರಿಗೆ ಶಿಕ್ಷೆಯಾಗಿದೆ ಎಂದು ನ್ಯಾಯಾಲಯ ತನ್ನ ತೀರ್ಪನ್ನು ನೀಡಿತು. ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣದ ಬಗ್ಗೆ ವಾದ ಮಂಡಿಸಲು ವಕೀಲರು ಪ್ರಾಸಿಕ್ಯೂಷನ್‌ಗೆ ಕೇಳಿಕೊಂಡಿತು, ವಾದಗಳ ನಂತರ ನ್ಯಾಯಾಲಯವು ತೀರ್ಪು ನೀಡಿತು.

 20,000 ರು.ನಂತೆ ಶ್ಯೂರಿಟಿ

20,000 ರು.ನಂತೆ ಶ್ಯೂರಿಟಿ

ರಾಕೇಶ್ ಸಚನ್ ಅವರಿಗೆ ಬಾಂಡ್ ಮೇಲೆ ಜಾಮೀನು ನೀಡಲಾಯಿತು. ತಲಾ 20,000 ರು.ನಂತೆ ಶ್ಯೂರಿಟಿಗಳನ್ನು ಒದಗಿಸುವಂತೆ ಸೂಚಿಸಲಾಯಿತು. 90ರ ದಶಕದ ಆರಂಭದಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡು ರಾಜಕೀಯ ಪ್ರವೇಶಿಸಿದ್ದರು. 1993 ಮತ್ತು 2002ರಲ್ಲಿ, ಅವರು 2009 ರಲ್ಲಿ ಫತೇಪುರ್ ಲೋಕಸಭಾ ಕ್ಷೇತ್ರದಿಂದ ಸಂಸತ್ತಿನ ಚುನಾವಣೆಯಲ್ಲಿ ಗೆದ್ದಿದ್ದರು. ಈಮೊದಲು ಘಟಂಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದರು.

 ನ್ಯಾಯಾಲಯದಲ್ಲಿ 15 ದಿನಗಳ ಕಾಲಾವಕಾಶ

ನ್ಯಾಯಾಲಯದಲ್ಲಿ 15 ದಿನಗಳ ಕಾಲಾವಕಾಶ

1991ರಲ್ಲಿ ಪೊಲೀಸರು ರಾಕೇಶ್ ಸಚನ್‌ನಿಂದ ಅಕ್ರಮ ಬಂದೂಕನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದರು. ಸೆಷನ್ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ನ್ಯಾಯಾಲಯ 15 ದಿನಗಳ ಕಾಲಾವಕಾಶ ನೀಡಿದೆ. ಸಚಿವರು ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿದ್ದಾರೆ ಮತ್ತು ಜಾಮೀನು ಬಾಂಡ್‌ಗಳನ್ನು ಶ್ಯೂರಿಟಿಗಳೊಂದಿಗೆ ಒದಗಿಸಿದ್ದಾರೆ ಎಂದು ಖಚಿತಪಡಿಸಲಾಯಿತು.

 ನಾಪತ್ತೆ ಕುರಿತು ಪ್ರಾಥಮಿಕ ತನಿಖೆ

ನಾಪತ್ತೆ ಕುರಿತು ಪ್ರಾಥಮಿಕ ತನಿಖೆ

ಏತನ್ಮಧ್ಯೆ, ರಾಕೇಶ್ ಸಚನ್ ಪರ ವಕೀಲ ಕಪಿಲ್‌ದೀಪ್ ಸಚನ್, ನಾವು ತೀರ್ಪಿನ ಪ್ರತಿಯನ್ನು ಸ್ವೀಕರಿಸಿದ್ದೇವೆ. ಅದನ್ನು ಅಧ್ಯಯನ ಮಾಡಲಾಗುತ್ತಿದೆ. ನಾವು ಶೀಘ್ರದಲ್ಲೇ ಸೆಷನ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು. ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾದ ನಂತರ ಜಾಮೀನು ಬಾಂಡ್‌ಗಳನ್ನು ಒದಗಿಸದೇ ಇಲ್ಲಿನ ನ್ಯಾಯಾಲಯದ ಸಭಾಂಗಣದಿಂದ ಸಚಿವರು ನಾಪತ್ತೆ ಕುರಿತು ಪ್ರಾಥಮಿಕ ತನಿಖೆ ಪ್ರಾರಂಭಿಸಲಾಗಿತ್ತು.

 ಅನ್ಯ ಕೆಲಸಕ್ಕಾಗಿ ಹೋಗಿದ್ದಾಗಿ ಹೇಳಿಕೆ

ಅನ್ಯ ಕೆಲಸಕ್ಕಾಗಿ ಹೋಗಿದ್ದಾಗಿ ಹೇಳಿಕೆ

ಎಫ್‌ಐಆರ್ ದಾಖಲಿಸುವ ಮೊದಲು ಪೊಲೀಸ್ ದೂರಿನಲ್ಲಿ ಸಚಿವರ ವಿರುದ್ಧ ಹೊರಿಸಲಾದ ಆರೋಪಗಳ ಕುರಿತು ತನಿಖೆ ನಡೆಸುವಂತೆ ಸಹಾಯಕ ಪೊಲೀಸ್ ಆಯುಕ್ತ (ಕೊತ್ವಾಲಿ) ಅಶೋಕ್ ಕುಮಾರ್ ಸಿಂಗ್ ಅವರಿಗೆ ಆದೇಶ ನೀಡಲಾಗಿದೆ ಎಂದು ಪೊಲೀಸ್ ಕಮಿಷನರ್ ಬಿಪಿ ಜೋಗ್ದಂಡ್ ಹೇಳಿದ್ದಾರೆ. ಆದಾಗ್ಯೂ, ಸಚಿವರು ತಾವು ನಾಪತ್ತೆಯಾಗಿದ್ದರು ಎಂಬ ಆರೋಪವನ್ನು ನಿರಾಕರಿಸಿದರು. ತಾನು ಯಾವುದೋ ಕೆಲಸಕ್ಕಾಗಿ ನ್ಯಾಯಾಲಯಕ್ಕೆ ಹೋಗಿದ್ದೇನೆ ಎಂದು ಹೇಳಿಕೊಂಡರು.

English summary
A district court on Monday sentenced Uttar Pradesh minister Rakesh Sachan to one year in jail in the three-decade-old Arms Act case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X