ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಲವ್ ಜಿಹಾದ್' ಕಾನೂನು: 1 ತಿಂಗಳಲ್ಲಿ 14 ಪ್ರಕರಣ, ಮಹಿಳೆಯರಿಂದ ದಾಖಲಾಗಿದ್ದು 2 ಕೇಸ್

|
Google Oneindia Kannada News

ಲಕ್ನೋ, ಡಿಸೆಂಬರ್ 29: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವು ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತಂದು ಸೋಮವಾರಕ್ಕೆ ಒಂದು ತಿಂಗಳು ಪೂರ್ಣಗೊಂಡಿದೆ. ನವೆಂಬರ್ 28ರಂದು ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ ಸುಗ್ರೀವಾಜ್ಞೆ 2020ಯನ್ನು ಜಾರಿಗೆ ತಂದ ಬಳಿಕ ಇದುವರೆಗೂ ಉತ್ತರ ಪ್ರದೇಶ ಪೊಲೀಸರು 14 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. 51 ಮಂದಿಯನ್ನು ಬಂಧಿಸಿದ್ದು, ಅವರಲ್ಲಿ 49 ಮಂದಿ ಜೈಲಿನಲ್ಲಿದ್ದಾರೆ.

ಈ 14 ಪ್ರಕರಣಗಳ ಪೈಕಿ 13 ಪ್ರಕರಣಗಳು ಹಿಂದೂ ಮಹಿಳೆಯರನ್ನು ಇಸ್ಲಾಂಗೆ ಮತಾಂತರ ಮಾಡಲು ಒತ್ತಡ ಹೇರಿದ ಆರೋಪಗಳಡಿ ದಾಖಲಾಗಿವೆ. ಕೇವಲ ಎರಡು ಪ್ರಕರಣಗಳಲ್ಲಿ ಸ್ವತಃ ಮಹಿಳೆಯರೇ ದೂರು ನೀಡಿದ್ದಾರೆ. ಇನ್ನು 12 ಪ್ರಕರಣಗಳಲ್ಲಿ ಅವರ ಸಂಬಂಧಿಕರು ದೂರು ಸಲ್ಲಿಸಿದ್ದಾರೆ. ಎರಡರಲ್ಲಿ ಹಿಂದೂ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಮಧ್ಯಪ್ರವೇಶಿಸಿ, ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಒಂದು ಪ್ರಕರಣದಲ್ಲಿ ಮಾತ್ರ ಮಹಿಳೆ ವಯಸ್ಕಳಾಗಿದ್ದಾಳೆ. ಎಂಟು ಪ್ರಕರಣಗಳಲ್ಲಿ ಒಂದು ಜೋಡಿಯು ತಾವು ಸ್ನೇಹಿತರು ಅಥವಾ ರಿಲೇಷನ್‌ಶಿಪ್‌ನಲ್ಲಿ ಇದ್ದಿದ್ದಾಗಿ ಹೇಳಿದ್ದರೆ, ಒಂದು ಜೋಡಿಯು ತಾವು ಮದುವೆಯಾಗುವುದಾಗಿ ತಿಳಿಸಿದೆ.

ಮಧ್ಯಪ್ರದೇಶದಲ್ಲಿಯೂ 'ಲವ್ ಜಿಹಾದ್' ಮಸೂದೆ ಅನುಮೋದನೆ: 10 ವರ್ಷ ಜೈಲುಮಧ್ಯಪ್ರದೇಶದಲ್ಲಿಯೂ 'ಲವ್ ಜಿಹಾದ್' ಮಸೂದೆ ಅನುಮೋದನೆ: 10 ವರ್ಷ ಜೈಲು

ಕ್ರೈಸ್ತ ಧರ್ಮಕ್ಕೆ ಅಕ್ರಮ ಮತಾಂತರ ಮಾಡಿದ ಒಂದು ಪ್ರಕರಣ ಕೂಡ ದಾಖಲಾಗಿದೆ. ಅಜಂಗಡದಲ್ಲಿ ಈ ಸಂಬಂಧ ಮೂವರ ವಿರುದ್ಧ ದೂರು ದಾಖಲಾಗಿದೆ.

1 Month Of Uttar Pradesh Love Jihad Law: 14 Cases Registered

ಎರಡು ಪ್ರಕರಣಗಳಲ್ಲಿ ಬೇರೆ ವ್ಯಕ್ತಿಗಳೊಂದಿಗೆ ಮದುವೆಯಾಗಿರುವ ಇಬ್ಬರು ಮಹಿಳೆಯರು 'ಸಾಮಾಜಿಕ ಒತ್ತಡ' ಮುಂದಿಟ್ಟು ತಮ್ಮ ಹೇಳಿಕೆಗಳನ್ನು ದಾಖಲಿಸಲು ನಿರಾಕರಿಸಿದ್ದಾರೆ. ಎರಡರಲ್ಲಿ ಮಹಿಳೆಯರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಮತಾಂತರದ ಬಲವಂತಕ್ಕೆ ಒಳಗಾದ ಆರೋಪ ಮಾಡಿರುವ ಮೂವರು ಮಹಿಳೆಯರು ದಲಿತ ಸಮುದಾಯಕ್ಕೆ ಸೇರಿದ್ದಾರೆ.

ಬರ್ಥಡೇ ಪಾರ್ಟಿ ಮುಗಿಸಿ ಬರುತ್ತಿದ್ದವನ ಮೇಲೆ 'ಲವ್ ಜಿಹಾದ್' ಕೇಸ್ಬರ್ಥಡೇ ಪಾರ್ಟಿ ಮುಗಿಸಿ ಬರುತ್ತಿದ್ದವನ ಮೇಲೆ 'ಲವ್ ಜಿಹಾದ್' ಕೇಸ್

ಸುಗ್ರೀವಾಜ್ಞೆ ಜಾರಿಗೆ ಬಂದ ದಿನವೇ 24 ವರ್ಷದ ಓವಿಯಸ್ ಅಹ್ಮದ್ ವಿರುದ್ಧ ಪ್ರಕರಣ ದಾಖಲಾಗಿತ್ತು. ವಿವಾಹಿತ ಹಿಂದೂ ಮಹಿಳೆಯನ್ನು ಮತಾಂತರಕ್ಕೆ ಬಲವಂತ ಮಾಡಿದ ಮತ್ತು ಆಕೆಯ ಪೋಷಕರನ್ನು ಬೆದರಿಸಿದ ಆರೋಪ ಮಾಡಲಾಗಿತ್ತು.

English summary
1 month of Uttar Pradesh anti-conversion law: Police registered total 14 cases and made 51 arrests.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X