• search
  • Live TV
ಲಂಡನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಚ್‌ಐವಿಯಿಂದ ಗುಣಮುಖರಾಗಿದ್ದ ವಿಶ್ವದ ಮೊದಲ ವ್ಯಕ್ತಿ ಕ್ಯಾನ್ಸರ್‌ನಿಂದ ಸಾವು

|
Google Oneindia Kannada News

ಲಂಡನ್, ಸೆಪ್ಟೆಂಬರ್ 30: ಎಚ್‌ಐವಿ ಏಡ್ಸ್ ನಿಂದ ಗುಣಮುಖರಾಗಿದ್ದ ಮೊದಲ ವ್ಯಕ್ತಿ, ಕ್ಯಾನ್ಸರ್‌ನಿಂದಾಗಿ ಸಾವನ್ನಪ್ಪಿರುವ ಘಟನೆ ಲಂಡನ್‌ನಲ್ಲಿ ನಡೆದಿದೆ. ಎಚ್‌ಐವಿಯಿಂದ ಗುಣಮುಖರಾದ ಬಳಿಕ ಬೋನ್ ಮ್ಯಾರೋ ಕಸಿಗೆ ಒಳಗಾಗಿದ್ದರು. ಇದೀಗ ಮತ್ತೆ ಕ್ಯಾನ್ಸರ್ ಆವರಿಸಿದ್ದು, ಇಂದು ಕ್ಯಾಲಿಫೋರ್ನಿಯಾದಲ್ಲಿ ಸಾವನ್ನಪ್ಪಿದ್ದಾರೆ.

ಕಳೆದ ಐದು ತಿಂಗಳಿನಿಂದ ಲುಕೇಮಿಯಾದಿಂದ ಬಳಲುತ್ತಿದ್ದರು, ಅವರು ಸಾಕಷ್ಟು ನೋವು ಅನುಭವಿಸಿದ್ದಾರೆ ಎಂದು ಅವರ ಪಾರ್ಟ್ನರ್ ಟಿಮ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಭಾರತದಲ್ಲಿ ಕೊರೊನಾ ಪೀಡಿತ ದಂಪತಿ ಮೇಲೆ anti-HIV ಡ್ರಗ್ಸ್ ಪ್ರಯೋಗಭಾರತದಲ್ಲಿ ಕೊರೊನಾ ಪೀಡಿತ ದಂಪತಿ ಮೇಲೆ anti-HIV ಡ್ರಗ್ಸ್ ಪ್ರಯೋಗ

ಬ್ರೋನ್ 1966ರ ಮಾರ್ಚ್ 11ರಂದು ಹುಟ್ಟಿದ್ದರು, ಅವರು ಬರ್ಲಿನ್ ಪೇಷಂಟ್ ಎಂದೇ ಖ್ಯಾತರಾಗಿದ್ದರು. 2007ರಲ್ಲಿ ಎಚ್‌ಐವಿಯಿಂದ ಮುಕ್ತರಾಗಿದ್ದರು. 1955 ರಲ್ಲಿ ಬ್ರೋನ್ ಅವರಿಗೆ ಎಚ್‌ಐವಿ ಇರುವುದು ತಿಳಿದುಬಂದಿತ್ತು. 2006ರಲ್ಲಿ ರಕ್ತ ಕ್ಯಾನ್ಸರ್‌ಗೆ ತುತ್ತಾದರು.

ಸುಮಾರು 10 ವರ್ಷಗಳ ಕಾಲ ಚಿಕಿತ್ಸೆ ತೆಗೆದುಕೊಂಡ ಬಳಿಕ ಅವರು ಗುಣಮುಖರಾಗಿದ್ದರು. ಇದೀಗ ಕಳೆದ ಒಂದೆರೆಡು ವರ್ಷಗಳಿಂದ ಲುಕೇಮಿಯಾ ತೊಂದರೆ ಮತ್ತೆ ಆರಂಭವಾಗಿತ್ತು.

ಕ್ಯಾನ್ಸರ್ ರಕ್ತದ ಮೂಲಕ ಮೆದುಳನ್ನು ತಲುಪಿತ್ತು. ಜರ್ಮನ್ ವೈದ್ಯರೊಬ್ಬರು 2007ರಿಂದ ಅವರ ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದಾರೆ. ವಿಶ್ವದಾದ್ಯಂತ 37 ಮಿಲಿಯನ್‌ಗೂ ಅಧಿಕ ಮಂದಿ ಎಚ್‌ಐವಿ ಸೋಂಕಿತರಿದ್ದಾರೆ. ಅವರೆಲ್ಲರನ್ನೂ ಗುಣಪಡಿಸಲು ಸಾಧ್ಯವಿಲ್ಲ. ಚಿಕಿತ್ಸೆ ವೆಚ್ಚ ಕೂಡ ಹೆಚ್ಚಿದೆ ಎಂದು ವೈದ್ಯರು ಹೇಳುತ್ತಾರೆ.

English summary
Timothy Ray Brown, the first person known to have been cured of HIV when he had a unique type of bone marrow transplant, has died in California after relapsing with cancer, his partner said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X