ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಕಳುಹಿಸಿದರೆ ಆತ್ಮಹತ್ಯೆ; ಇದು ಭಾರತೀಯನೇ ಆಡಿದ ಮಾತು

|
Google Oneindia Kannada News

ಲಂಡನ್, ನವೆಂಬರ್.07: ಉಂಡು ಹೋದ ಕೊಂಡು ಹೋದ ಅಂತಾರಲ್ವಾ. ಈ ಮಾತು ಈ ಭೂಪನಿಗೆ ಹೇಳಿ ಮಾಡಿಸಿದಂತಿದೆ. ಭಾರತದಲ್ಲೇ ಇದ್ದುಕೊಂಡು ಕೋಟಿ ಕೋಟಿ ದುಡಿದು, ಕೋಟಿ ಕೋಟಿ ಸಾಲ ಪಡೆದು, ಭಾರತೀಯ ಬ್ಯಾಂಕ್ ಗಳಿಗೆ ಪಂಗನಾಮ ಹಾಕಿದ ಇವನಿಗೆ ಈಗ ಭಾರತವೇ ಬೇಡವಂತೆ. ಭಾರತದ ನೆಲಕ್ಕಿಂತ ವಿದೇಶದಲ್ಲಿರುವ ಜೈಲು ಸೇಫ್ ಅಂತಾ ಇವನಿಗೆ ಅನಿಸುತ್ತಿದೆ.

ಇದು ಜನಸಾಮಾನ್ಯನ ಕಥೆಯಂತೂ ಮೊದಲೇ ಅಲ್ಲ. ಭಾರತೀಯ ಬ್ಯಾಂಕ್ ಗಳನ್ನು ವಂಚಿಸಿ ಲಂಡನ್ ಗೆ ಹಾರಿದ ನೀರವ್ ಮೋದಿ ಹೇಳಿದ ಮಾತು. ಹೌದು, ಪಿಎನ್ ಬಿ ಹಗರಣದ ಕಿಂಗ್ ಪಿನ್ ನೀರವ್ ಮೋದಿಗೆ ಲಂಡನ್ ಜೈಲೇ ಸ್ವರ್ಗದಂತೆ ಕಾಣುತ್ತಿದೆ. ಬೇಲ್ ಗೆ ಬಾರಿ ಬಾರಿ ಅರ್ಜಿ ಸಲ್ಲಿಸುತ್ತಿರುವ ನೀರವ್ ಮೋದಿಗೆ ಬೇಲ್ ಸಿಗದಿದ್ದರೂ ಪರವಾಗಿಲ್ಲ. ಭಾರತಕ್ಕೆ ಮಾತ್ರ ಹಸ್ತಾಂತರ ಮಾಡಬೇಡಿ ಎಂದು ಲಂಡನ್ ಸರ್ಕಾರವನ್ನ ಪರಿ ಪರಿಯಾಗಿ ಬೇಡಿಕೊಳ್ಳುತ್ತಿದ್ದಾನೆ. ಬೇಕಿದ್ದಲ್ಲಿ ನಾನು ಲಂಡನ್ ಜೈಲಿನಲ್ಲೇ ಇರಲು ಸಿದ್ಧನಿದ್ದೇನೆ. ಆದರೆ ಭಾರತಕ್ಕೆ ಮಾತ್ರ ಹೋಗಲಾರೆ ಎನ್ನುವ ಅಧಿಕಪ್ರಸಂಗತನ ಪ್ರದರ್ಶನ ಮಾಡುತ್ತಿದ್ದಾನೆ.

ಲಂಡನ್ ಕೋರ್ಟಿನಲ್ಲಿ ನೀರವ್ ಮೋದಿ ಜಾಮಿನು ಅರ್ಜಿ ವಜಾ

ಇದಿಷ್ಟೆ ಆಗಿದ್ದರೆ ಪರವಾಗಿಲ್ಲ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಹಗರಣದಲ್ಲಿ 13 ಸಾವಿರದ 500 ಕೋಟಿ ರೂಪಾಯಿ ವಂಚಿಸಿರುವ ನೀರವ್ ಮೋದಿಗೆ ತೀವ್ರ ಖಿನ್ನತೆಗೆ ಒಳಗಾಗಿದ್ದಾನೆ. ಹೀಗಾಗಿ ವಿದೇಶಿಗರ ಪಾಲಿಗೆ ಸ್ವರ್ಗದಂತೆ ಕಾಣುತ್ತಿರುವ ಭಾರತ, ಈ ವಂಚಕನಿಗೆ ಮಾತ್ರ ನರಕದಂತೆ ಕಾಣುತ್ತಿದೆ. ಈಗಾಗ್ಲೆ ನಾಲ್ಕು ಬಾರಿ ನೀರವ್ ಮೋದಿ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಲಂಡನ್ ಕೋರ್ಟ್ ತಿರಸ್ಕರಿಸಿದೆ. ಡಿಸೆಂಬರ್.04ಕ್ಕೆ ಮುಂದಿನ ವಿಚಾರಣೆಯನ್ನು ಮುಂದೂಡಿದೆ.

Will Commite Sucide If Extradited To India

ಭಾರತಕ್ಕೆ ಕಳುಹಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ- ನೀರವ್ ಮೋದಿ
ಭಾರತ ಹಾಗೂ ಲಂಡನ್ ದೇಶಗಳ ಬಾಂಧವ್ಯ ಉತ್ತಮವಾಗಿದೆ. ಕೇಂದ್ರ ಸರ್ಕಾರ ಈಗಾಗ್ಲೆ ವಂಚಕನನ್ನು ಗಡಿಪಾರು ಮಾಡುವಂತೆ ಲಂಡನ್ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ. ಇದು ನೀರವ್ ಮೋದಿ ಎದೆಯಲ್ಲಿ ಭಯ ಹುಟ್ಟಿಸಿದೆ. ಹೀಗಾಗಿ ತನ್ನನ್ನು ಭಾರತಕ್ಕೆ ಕಳುಹಿಸಬೇಡ ಎನ್ನುತ್ತಿರುವ ನೀರವ್ ಮೋದಿ, ಕೋರ್ಟ್ ಗೆ ಬೆದರಿಕೆ ಹಾಕುವ ಕೆಲಸ ಮಾಡಿದ್ದಾನೆ. ಒಂದು ವೇಳೆ ಭಾರತಕ್ಕೆ ಹಸ್ತಾಂತರಗೊಳಿದ್ದೆ ಆದರೆ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೋರ್ಟ್ ಗೆ ಹೇಳಿದ್ದಾನೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ನೀರವ್ ಮೋದಿ ಹಾಗೂ ಈತನ ಸೋದರಳಿಯ ಮೆಹುಲ್ ಚೌಕ್ಸಿ ಪ್ರಮುಖ ಆರೋಪಿಗಳಾಗಿದ್ದಾರೆ. ಈ ಪೈಕಿ ಮೆಹುಲ್ ಚೌಕ್ಸಿ, ವಂಚನೆ ಪ್ರಕರಣ ಬೆಳಕಿಗೆ ಬರುವ ಮುನ್ನವೇ ದೇಶದಿಂದ ಪರಾರಿಯಾಗಿದ್ದನು. ಕಳೆದ 2018ರ ಜನವರಿ ತಿಂಗಳಿನಲ್ಲೇ ಭಾರತವನ್ನು ಬಿಟ್ಟು ಚೌಕ್ಸಿ ವಿದೇಶಕ್ಕೆ ಹಾರಿ ಹೋಗಿದ್ದ. ಕಳೆದ ಮಾರ್ಚ್.19ರಂದು ಪಿಎನ್ ಬಿ ಪ್ರಕರಣದ ಆರೋಪಿ ನೀರವ್ ಮೋದಿಯನ್ನು ಸ್ಕಾಟ್ ಲ್ಯಾಂಡ್ ಯಾರ್ಡ್ ಪೊಲೀಸರು ಬಂಧಿಸಿದ್ದರು. ಸದ್ಯ ಆರೋಪಿ ನೀರವ್ ಮೋದಿ ನೈಋತ್ಯ ಲಂಡನ್ ನ ವ್ಯಾಂಡ್ಸ್ ವರ್ತ್ ಜೈಲಿನಲ್ಲಿ ಬಂಧಿಯಾಗಿದ್ದಾನೆ.

English summary
Nivar Modi Ready To Stay in London Jail. But Government If Extradited He Will Commite Sucide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X