• search
  • Live TV
ಲಂಡನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಕಿಲೀಕ್ಸ್‌ ಸಂಸ್ಥಾಪಕ ಅಸ್ಸಾಂಜೆಗೆ ಜಾಮೀನು ನಿರಾಕರಣೆ

|

ಲಂಡನ್‌, ಜನವರಿ 06: ವಿಕಿಲೀಕ್ಸ್‌ ಸಂಸ್ಥಾಪಕ ಜೂಲಿಯನ್‌ ಅಸ್ಸಾಂಜೆಗೆ ಜಾಮೀನು ನೀಡಲು ಬ್ರಿಟನ್‌ನ ನ್ಯಾಯಾಧೀಶೆ ನಿರಾಕರಿಸಿದ್ದಾರೆ. ಜಾಮೀನು ನೀಡಿದರೆ ಅಸ್ಸಾಂಜೆ ಪರಾರಿಯಾಗುವ ಸಾಧ್ಯತೆ ಇದೆ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಈಕ್ವೆಡಾರ್ ಪೌರತ್ವ ಪಡೆದು ಆಶ್ರಯ ಪಡೆದುಕೊಂಡಿದ್ದ ಅಸ್ಸಾಂಜೆ ಅವರನ್ನು ರಾಯಭಾರ ಕಚೇರಿಯಲ್ಲಿ ಲಂಡನ್ ಪೊಲೀಸರು ಬಂಧಿಸಿ, ಬ್ರಿಟನ್ ಜೈಲಿಗೆ ಕಳಿಸಿದ್ದರು.

ಬೇಹುಗಾರಿಕೆ ಪ್ರಕರಣದ ವಿಚಾರಣೆಗಾಗಿ ಅಮೆರಿಕಕ್ಕೆ ಹಸ್ತಾಂತರ ಮಾಡಲು ಯುಎಸ್ ಅಧಿಕಾರಿಗಳು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಧೀಶರಾದ ವನೀಸ್ಸಾ ಬರೈಟ್ಸರ್‌ ತಿರಸ್ಕರಿಸಿದ ಮೇಲೆ ಈ ಆದೇಶ ಹೊರ ಬಂದಿದೆ.

ಜಾಮೀನು ಷರತ್ತು ಉಲ್ಲಂಘನೆ: ಜೂಲಿಯನ್ ಅಸಾಂಜ್‌ಗೆ 50 ವಾರ ಶಿಕ್ಷೆ

49 ವರ್ಷ ವಯಸ್ಸಿನ ಅಸ್ಸಾಂಜೆ ಅವರು ಮಾನಸಿಕ ಆರೋಗ್ಯದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಆದೇಶ ಹೊರಡಿಸಲಾಗಿದೆ. ಅಮೆರಿಕಕ್ಕೆ ಅಸ್ಸಾಂಜೆಯನ್ನು ಕಳುಹಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಬರೈಟ್ಸರ್‌ ಅಭಿಪ್ರಾಯಪಟ್ಟಿದ್ದರು.

ಏನಿದು ಪ್ರಕರಣ?:

ಆಸ್ಟ್ರೇಲಿಯಾ ಮೂಲದ ಜೂಲಿಯನ್ ಅಸಾಂಜೆ 2012ರಲ್ಲಿ ಸ್ವೀಡನ್ ಗೆ ಹಸ್ತಾಂತರವಾಗುವ ಭಯದಿಂದ ಈಕ್ವೆಡಾರ್ ರಾಯಭಾರಿ ಕಚೇರಿ ಪ್ರವೇಶಿಸಿ ಆಶ್ರಯ ಪಡೆದಿದ್ದರು. ಅವರ ಮೇಲೆ ಸ್ವೀಡನ್ನಿನಲ್ಲಿ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಆದರೆ ಅಸಾಂಜೆಗೆ ಸ್ವೀಡನ್ ಗಿಂತ ಹೆಚ್ಚಾಗಿ ಅಮೆರಿಕಾದ ಭಯವಿತ್ತು. ಸೇನೆ ಮತ್ತು ರಾಜತಾಂತ್ರಿಕ ದಾಖಲೆಗಳನ್ನು ವಿಕಿಲೀಕ್ಸ್ ನಲ್ಲಿ ಪ್ರಕಟಿಸಿದ್ದಕ್ಕಾಗಿ ಅಲ್ಲಿ ವಿಚಾರಣೆ ಎದುರಿಸಬೇಕಾಗಿ ಬರಬಹುದು ಎಂಬ ಭಯದಿಂದ ಈಕ್ವೆಡಾರ್ ಆಶ್ರಯ ಪಡೆದುಕೊಂಡಿದ್ದರು.

2017 ವರ್ಷವಷ್ಟೇ ಸ್ವೀಡನ್ ಅಸಾಂಜೆ ಮೇಲಿದ್ದ ಅತ್ಯಾಚಾರ ಪ್ರಕರಣವನ್ನು ಕೈಬಿಟ್ಟಿತ್ತು. ಆದರೆ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಬಂಧಿಸುವುದಾಗಿ ಬ್ರಿಟನ್ ಹೇಳಿದ್ದರಿಂದ ಅಸಾಂಜೆ ಇನ್ನೂ ರಾಯಭಾರ ಕಚೇರಿಯಲ್ಲೇ ಆಶ್ರಯ ಪಡೆದಿದ್ದರು.

ಈಕ್ವೆಡಾರ್ ರಾಯಭಾರ ಕಚೇರಿಯಿಂದ ಅಸಾಂಜೆಯನ್ನು ಹೊರತರಲು ಅವರಿಗೆ ರಾಜತಾಂತ್ರಿಕ ಹುದ್ದೆ ನೀಡುವಂತೆ ಬ್ರಿಟನ್ ಗೆ ಈಕ್ವೆಡಾರ್ ಮನವಿ ಮಾಡಿಕೊಂಡಿತ್ತು. ಆದರೆ, ಜಾಮೀನು ಷರತ್ತುಗಳನ್ನು ಉಲ್ಲಂಘನೆ ಮಾಡಿದ್ದರಿಂದ ಏಪ್ರಿಲ್ 11, 2019ರಂದು ಈಕ್ವೆಡಾರ್ ರಾಜತಾಂತ್ರಿಕ ಕಚೇರಿಯಲ್ಲಿ ಮೆಟ್ರೊಪಾಲಿಟನ್ ಪೊಲೀಸ್ ಸರ್ವಿಸ್‌ನ ಅಧಿಕಾರಿಗಳು ಬಂಧಿಸಿದ್ದರು.

English summary
A British judge on Wednesday denied bail to WikiLeaks founder Julian Assange, who has been jailed in Britain since 2019 as he fights extradition to the United States.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X