• search
 • Live TV
ಲಂಡನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾನು ಹಣ ವಾಪಸ್ ನೀಡಲು ಸಿದ್ಧ, ಆದರೆ ಸರ್ಕಾರವೇ ಬಿಡ್ತಿಲ್ಲ: ವಿಜಯ್ ಮಲ್ಯ ಆರೋಪ

|
   ನಾನು ಹಣ ವಾಪಸ್ ನೀಡಲು ಸಿದ್ಧ, ಆದರೆ ಸರ್ಕಾರವೇ ಬಿಡ್ತಿಲ್ಲ: ವಿಜಯ್ ಮಲ್ಯ ಆರೋಪ..! | Oneindia Kannada

   ಲಂಡನ್, ಫೆಬ್ರವರಿ 14: ಬ್ಯಾಂಕುಗಳಿಗೆ 9 ಸಾವಿರ ಕೋಟಿಗೂ ಅಧಿಕ ಮೊತ್ತದ ಹಣ ವಂಚನೆ ಮಾಡಿ ಪರಾರಿಯಾಗುವ ಮೂಲಕ ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

   ಲೋಕಸಭೆಯಲ್ಲಿ ಬುಧವಾರ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ಉಲ್ಲೇಖಿಸಿರುವುದಕ್ಕೆ ಮಲ್ಯ, ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

   ವಿಜಯ್ ಮಲ್ಯರನ್ನು ಸ್ವಾಗತಿಸಲು ಅರ್ಥರ್ ರೋಡ್ ಜೈಲ್ ಕಾದಿದೆ

   ಆರ್ಥಿಕ ಅಪರಾಧಗಳನ್ನು ಎಸಗಿದ ಆರೋಪ ಹೊತ್ತು ದೇಶದಿಂದ ಪರಾರಿಯಾದವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂಸತ್‌ನಲ್ಲಿ ಮಾಡಿದ ಉಲ್ಲೇಖದ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

   ಬುಧವಾರ ಸಂಸತ್‌ನಲ್ಲಿ ತಮ್ಮ ಕೊನೆಯ ಭಾಷಣ ಮಾಡಿದ್ದ ಪ್ರಧಾನಿ ಮೋದಿ, 'ಓಡಿ ಹೋದ ವ್ಯಕ್ತಿಯೊಬ್ಬ, ತಾನು 9000 ಕೋಟಿಯೊಂದಿಗೆ ಓಡಿ ಹೋಗಿದ್ದೇನೆ, ಆದರೆ ಮೋದಿ 13,000 ಕೋಟಿ ವಾಪಸ್ ಪಡೆದುಕೊಂಡಿದ್ದಾರೆ ಎಂದು ಅಳುತ್ತಿದ್ದಾರೆ' ಎಂಬುದಾಗಿ ಹೇಳಿದ್ದರು. ಇದು ಲಂಡನ್‌ನಲ್ಲಿರುವ ವಿಜಯ್ ಮಲ್ಯ ಅವರನ್ನು ಕೆರಳಿಸಿದೆ.

   ಪ್ರಧಾನಿ ಉತ್ತಮ ವಾಗ್ಮಿ

   'ಪ್ರಧಾನಿಯವರು ಸಂಸತ್‌ನಲ್ಲಿ ಮಾಡಿದ ಕೊನೆಯ ಭಾಷಣ ನನ್ನ ಗಮನ ಸೆಳೆಯಿತು. ಅವರು ನಿಜವಾಗಿಯೂ ಒಬ್ಬ ಉತ್ತಮ ವಾಗ್ಮಿ. ಅವರು 9000 ಕೋಟಿ ರೂಪಾಯಿಯೊಂದಿಗೆ ಓಡಿ ಹೋಗಿರುವ ಹೆಸರು ಉಲ್ಲೇಖಿಸದ ವ್ಯಕ್ತಿ ಬಗ್ಗೆ ಉಲ್ಲೇಖ ಮಾಡಿರುವುದು ನನಗೆ ಗೊತ್ತಾಯಿತು. ಮಾಧ್ಯಮದ ವರದಿಗಳ ಮೂಲಕವೇ ಅದು ಅವರು ನನ್ನನ್ನು ಉದ್ದೇಶಿಸಿ ಹೇಳಿರುವುದು ಎಂಬುದು ತಿಳಿದುಬಂದಿತು' ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ.

   ತಾವೇ ಶ್ರೇಯಸ್ಸು ಪಡೆದುಕೊಳ್ಳಬಹುದಾಗಿತ್ತು

   'ನನ್ನ ಹಿಂದಿನ ಟ್ವೀಟ್ ಮುಂದುವರಿಸುತ್ತಾ, ನಾನು ಟೇಬಲ್ ಮೇಲೆ ಇರಿಸಿದ್ದ ಹಣವನ್ನು ತೆಗೆದುಕೊಳ್ಳಲು ಏಕೆ ಬ್ಯಾಂಕುಗಳಿಗೆ ಪ್ರಧಾನಿ ಸೂಚನೆ ನೀಡುತ್ತಿಲ್ಲ ಎಂದು ಗೌರವಯುತವಾಗಿ ಕೇಳುತ್ತಿದ್ದೇನೆ. ಇದರಿಂದ ಅವರು ಕಡೇಪಕ್ಷ ಕಿಂಗ್ ಫಿಶರ್‌ಗೆ ನೀಡಿದ ಎಲ್ಲ ಸಾರ್ವಜನಿಕರ ಹಣವನ್ನು ಸಂಪೂರ್ಣವಾಗಿ ವಸೂಲಿ ಮಾಡಿದ ಶ್ರೇಯಸ್ಸನ್ನು ತಾವೇ ಪಡೆದುಕೊಳ್ಳಬಹುದಾಗಿತ್ತು' ಎಂದು ಮಲ್ಯ ಹೇಳಿದ್ದಾರೆ.

   ಭಾರತಕ್ಕೆ ಗಡಿ ಪಾರು: ನ್ಯಾಯಾಲಯದ ಮೊರೆ ಹೋಗುತ್ತೇನೆಂದ ಮಲ್ಯ

   ಈಗ ಶೂಸ್ ಬೇರೆ ಕಾಲುಗಳಲ್ಲಿದೆ

   ನಾನು ಕರ್ನಾಟಕ ಹೈಕೋರ್ಟ್ ಮುಂದೆ ಎಲ್ಲ ಹಣವನ್ನು ಮರಳಿಸುವ ಬಗ್ಗೆ ಹೇಳಿದ್ದೆ. ಇದನ್ನು ನಿಷ್ಪ್ರಯೋಜಕ ಎಂದು ತಿರಸ್ಕರಿಸಲು ಸಾಧ್ಯವಿಲ್ಲ. ಇದು ಸಂಪೂರ್ಣ ಸ್ಪಷ್ಟ, ಪ್ರಾಮಾಣಿಕ, ನ್ಯಾಯಪರ ಹಾಗೂ ಆ ಕ್ಷಣಕ್ಕೆ ಒಪ್ಪಿಕೊಳ್ಳುವಂತಹ ಆಹ್ವಾನವಾಗಿತ್ತು. ಈಗ ಶೂಸ್ ಬೇರೆ ಕಾಲುಗಳಲ್ಲಿದೆ. ಕೆಎಫ್‌ಎಗೆ (ಕಿಂಗ್ ಫಿಶರ್ ಏರ್‌ಲೈನ್ಸ್‌) ನೀಡಿದ ಹಣವನ್ನು ಬ್ಯಾಂಕುಗಳು ಏಕೆ ಪಡೆದುಕೊಳ್ಳಲಿಲ್ಲ? ಎಂದು ಪ್ರಶ್ನಿಸಿದ್ದಾರೆ.

   ಉದ್ಯಮಿ ವಿಜಯ ಮಲ್ಯ ಗಡಿಪಾರಿಗೆ ಬ್ರಿಟನ್ ಒಪ್ಪಿಗೆ

   ಬಚ್ಚಿಟ್ಟ ಆಸ್ತಿ ಇದೆಯೇ?

   ನಾನು ನನ್ನ ಸಂಪತ್ತನ್ನು ಅಡಗಿಸಿಟ್ಟಿದ್ದೇನೆ ಎಂದು ಜಾರಿ ನಿರ್ದೇಶನ ಹೇಳಿರುವುದನ್ನು ಮಾಧ್ಯಮಗಳಲ್ಲಿ ಕಂಡು ದಿಗಿಲಾಗಿದೆ. ನನ್ನ ಬಳಿ ಬಚ್ಚಿಟ್ಟ ಸಂಪತ್ತು ಇದ್ದಿದ್ದರೆ ನ್ಯಾಯಾಲಯದ ಮುಂದೆ ಬಹಿರಂಗವಾಗಿ ಅಂದಾಜು 14 ಸಾವಿರ ರೂಪಾಯಿ ಕೋಟಿ ಆಸ್ತಿ ಇದೆ ಎಂದು ಹೇಗೆ ಹೇಳಿಕೊಳ್ಳಲು ಸಾಧ್ಯವಿತ್ತು? ಸಾರ್ವಜನಿಕ ಅಭಿಪ್ರಾಯವನ್ನು ನಾಚಿಕೆಗೇಡಿನ ರೀತಿ ತಪ್ಪುದಾರಿಗೆ ಎಳೆಯಲಾಗುತ್ತಿದೆ ಮತ್ತು ಇದು ಅಚ್ಚರಿಯೇನಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

   ಉದ್ಯಮಿ ವಿಜಯ ಮಲ್ಯ ಇನ್ನು ಮೇಲೆ ದೇಶಭ್ರಷ್ಟ ಆರ್ಥಿಕ ಅಪರಾಧಿ!

   English summary
   Fugitive liquor baron Vijay Mallya lashed out at Prime Minister Narendra Modi for his apparent reference to him in the PM's last speech in the Lok Sabha on Wednesday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X