• search
  • Live TV
ಲಂಡನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೂರದ ಅನ್ಯಗ್ರಹದಲ್ಲಿ ನೀರು ಪತ್ತೆ ಹಚ್ಚಿದ ವಿಜ್ಞಾನಿಗಳು

|

ಲಂಡನ್, ಸೆಪ್ಟೆಂಬರ್ 12: ಭೂಮಿಯಂತೆಯೇ ಜೀವಿಗಳನ್ನು ಹೊಂದಿರುವ ಮತ್ತೊಂದು ಗ್ರಹದ ಹುಡುಕಾಟದಲ್ಲಿ ವಿಜ್ಞಾನಿಗಳು ಮಗ್ನರಾಗಿದ್ದಾರೆ. ಜೀವಿಗಳು ಇರಬೇಕೆಂದರೆ ಅಲ್ಲಿ ನೀರಿನ ಅಸ್ತಿತ್ವ ಇರಬೇಕೆಂಬ ತರ್ಕದಲ್ಲಿ ಈ ಸಂಶೋಧನೆಗಳು ನಡೆಯುತ್ತಿವೆ. ಹೀಗೆ ಹುಡುಕಾಟದ ನಡುವೆ ನಾಸಾ ವಿಜ್ಞಾನಿಗಳು ಭೂಮಿಯಂತೆಯೇ ಜೀವಿಗಳಿಗೆ ಆವಾಸ ಒದಗಿಸಬಲ್ಲ ನೀರನ್ನು ಹೊಂದಿರುವ ಗ್ರಹವನ್ನು ಪತ್ತೆಹಚ್ಚಿದ್ದಾರೆ. ಆದರೆ, ಇದನ್ನು ಮತ್ತೊಂದು ಭೂಮಿ ಎಂದುಪರಿಗಣಿಸಲು ಸಾಧ್ಯವಿಲ್ಲ.

ಭೂಮಿಯಿಂದ ಸುಮಾರು 111 ಜ್ಯೋತಿರ್ವರ್ಷ ದೂರದಲ್ಲಿರುವ ಕೆ2-18 ಬಿ ಎಂಬ ಗ್ರಹದಲ್ಲಿ ನೀರಿನ ಅಂಶವಿದೆ ಎಂಬ ಮಹತ್ವದ ಹಾಗೂ ಕುತೂಹಲಕಾರಿ ಸಂಗತಿಯನ್ನು ಕಂಡುಕೊಳ್ಳಲಾಗಿದೆ. ಈ ಗ್ರಹದ ಅಸ್ತಿತ್ವವನ್ನು ನಾಸಾದ ಕೆಪ್ಲರ್ ಬಾಹ್ಯಾಕಾಶ ದೂರದರ್ಶಕದ ಮೂಲಕ 2015ರಲ್ಲಿ ಪತ್ತೆಹಚ್ಚಲಾಗಿತ್ತು.

ಚಂದ್ರಯಾನ ಯೋಜನೆಗಳಲ್ಲಿ ಯಶಸ್ವಿಯಾಗಿರುವುದು ಎಷ್ಟು ಗೊತ್ತೇ?

ನಮ್ಮ ಸೌರಮಂಡಲದಾಚೆ ಇರುವ ಸೂರ್ಯನಿಗಿಂತ ಕಡಿಮೆ ಗಾತ್ರದ ನಕ್ಷತ್ರದ ಸುತ್ತಲೂ ಸುತ್ತುವ ಕೆ2-18 ಬಿ ಗ್ರಹವು ನಕ್ಷತ್ರದ ಹ್ಯಾಬಿಟೇಬಲ್ ವಲಯದಲ್ಲಿಯೇ ಇದೆ. ಕಕ್ಷಾ ಅಂತರದ ಪ್ರಮಾಣ ಹಿರಿದಾಗಿರುವ ಕಾರಣ ಗ್ರಹದ ಮೇಲ್ಮೈನಲ್ಲಿ ದ್ರವ ರೂಪದ ನೀರು ಇರಲು ಸಾಧ್ಯವಾಗಿದೆ ಎನ್ನುವುದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಹಬ್ಬಲ್ ಸ್ಪೇಸ್ ಟೆಲಿಸ್ಕೋಪ್‌ನಿಂದ ಪಡೆದ ಮಾಹಿತಿಗಳ ಅಧ್ಯಯನದಿಂದ ಈ ಅಂಶವನ್ನು ಪತ್ತೆಹಚ್ಚಲಾಗಿದೆ.

ಭೂಮಿಗಿಂತ ಎಂಟು ಪಟ್ಟು ದೊಡ್ಡ

ಭೂಮಿಗಿಂತ ಎಂಟು ಪಟ್ಟು ದೊಡ್ಡ

ಕೆ2-18 ಬಿ ಗ್ರಹದ ಹಲವು ವರ್ಷಗಳ ಅಧ್ಯಯನದ ನಂತರ ಇಲ್ಲಿ ನೀರಿನ ಅಸ್ತಿತ್ವ ಇದೆ ಎಂದು ಖಚಿತಪಡಿಸಲಾಗಿದೆ. ಈ ಗ್ರಹ ನಮ್ಮ ಭೂಮಿಯಂತಲ್ಲ. ಇದು ಭೂಮಿಯ ಎಂಟು ಪಟ್ಟು ಹೆಚ್ಚು ದೊಡ್ಡದು. ಇದರ ಅರ್ಥ ಈ ಗ್ರಹವು ನೆಪ್ಚೂನ್‌ನಂತೆ ಹಿಮಾಚ್ಛಾದಿತ ಬೃಹತ್ ಗ್ರಹವಾಗಿರಬಹುದು ಅಥವಾ ದಪ್ಪನೆಯ ಜಲಜನಕಗಳಿಂದ ತುಂಬಿದ ವಾತಾವರಣ ಹೊಂದಿರುವ ಕಲ್ಲುಬಂಡೆಗಳ ಜಗತ್ತೂ ಆಗಿರಬಹುದು.

ಭೂಮಿಗೆ ಹೋಲುವ ತಾಪಮಾನ

ಭೂಮಿಗೆ ಹೋಲುವ ತಾಪಮಾನ

ಕೆ2-18 ಬಿ ಗ್ರಹವು ಭೂಮಿ ಮತ್ತು ಸೂರ್ಯನ ನಡುವೆ ಇರುವ ಅಂತರಕ್ಕಿಂತಲೂ ಏಳು ಪಟ್ಟು ಹತ್ತಿರದಲ್ಲಿ ತನ್ನ ನಕ್ಷತ್ರದ ಸುತ್ತ ಸುತ್ತುತ್ತದೆ. ಎಂ ಡ್ವಾರ್ಫ್ ಎಂದು ಕರೆಯಲಾಗುವ ಮಂದ ಕೆಂಪು ನಕ್ಷತ್ರಕ್ಕೆ ಸುತ್ತುಹಾಕುತ್ತದೆ. ಅದರ ಕಕ್ಷೆಯು ನಕ್ಷತ್ರದ ಜೀವ ಸ್ನೇಹಿ ವಲಯದಲ್ಲಿ ಇದೆ. ಕೆ2-18 ಬಿ ಗ್ರಹದ ಪರಿಣಾಮಕಾರಿ ತಾಪಮಾನವು -100 ರಿಂದ 116 ಡಿಗ್ರಿ ಫ್ಯಾರನ್‌ಹೀಟ್‌ನಷ್ಟು ಇರುತ್ತದೆ. ಇದು ಭೂಮಿಯ ತಾಪಮಾನದಂತೆಯೇ ಪ್ರತಿಫಲಿಸಿದರೆ ಅದರ ಸಮತೋಲನ ಉಷ್ಣಾಂಶವು ಹೆಚ್ಚೂ ಕಡಿಮೆ ನಮ್ಮ ಗ್ರಹದಷ್ಟೇ ಇರುತ್ತದೆ.

2024ರಲ್ಲಿ ಚಂದ್ರನ ಮೇಲೆ ಮಹಿಳೆಯನ್ನು ಇಳಿಸಲಿರುವ ನಾಸಾ

ನೀರು ಪತ್ತೆಯಾಗಿರುವ ಏಕೈಕ ಗ್ರಹ

ನೀರು ಪತ್ತೆಯಾಗಿರುವ ಏಕೈಕ ಗ್ರಹ

'ನಮ್ಮ ಸೌರ ವ್ಯವಸ್ಥೆಯ ಆಚೆಗೆ ನೀರಿನ ಅಸ್ತಿತ್ವದ ಇರಲು ಸೂಕ್ತವಾದ ತಾಪಮಾನ ಹೊಂದಿರುವ ಗ್ರಹಗಳಲ್ಲಿ ನಮಗೆ ತಿಳಿದಿರುವುದು ಕೆ2-18 ಬಿ ಮಾತ್ರ. ಅದರಲ್ಲಿ ಪೂರಕ ವಾತಾವರಣವಿದೆ, ಅದರಲ್ಲಿ ನೀರು ಇದೆ. ಪ್ರಸ್ತುತದ ಸಂದರ್ಭದಲ್ಲಿ ನಾವು ತಿಳಿದಿರುವ ಜೀವಿಗಳ ಅಸ್ತಿತ್ವ ಇರಲು ಸಾಧ್ಯವಿರುವ ಗ್ರಹ ಇದಾಗಿದೆ' ಎಂದು ಲಂಡನ್ ಯುನಿವರ್ಸಿಟಿ ಕಾಲೇಜ್‌ನ ಗಗನಶಾಸ್ತ್ರಜ್ಞ ಆಂಜೆಲೊಸ್ ಸಿಯಾರಸ್ ಹೇಳಿದ್ದಾರೆ.

ಎರಡನೆಯ ಭೂಮಿ ಅಲ್ಲ

ಎರಡನೆಯ ಭೂಮಿ ಅಲ್ಲ

ಆದರೆ, ಈ ಗ್ರಹವನ್ನು ಭೂಮಿಯ ಅವಳಿ ಸಹೋದರ ಎಂದು ಪರಿಗಣಿಸಲು ಸಾಧ್ಯವಿಲ್ಲ. ಏಕೆಂದರೆ ಗಾತ್ರದಲ್ಲಿ ಭೂಮಿಗಿಂತ ಬೃಹತ್ತಾಗಿದೆ. ಭೂಮಿಯನ್ನೇ ಹೋಲುವ ವಾತಾವರಣ ಅಲ್ಲಿಲ್ಲ. ಅದು 'ಸೂಪರ್ ಅರ್ಥ್'ನಂತಹ ಜಗತ್ತನ್ನು ಸೃಷ್ಟಿಸಿದೆ. ವಿಶೇಷವೆಂದರೆ ಅದು ಭೂಮಿ ಇರುವ 'ಕ್ಷೀರಪಥ'ದ ಗ್ಯಾಲಕ್ಸಿಯಲ್ಲಿಯೇ ಇದ್ದರೂ ನಮ್ಮ ಸೌರ ವ್ಯವಸ್ಥೆಯ ಒಳಗಿಲ್ಲ.

ಕೆ2-18 ಬಿ ಗ್ರಹದ ಚಂದ್ರ ಸೂರ್ಯನಿಗಿಂತ ಸಣ್ಣ ಮತ್ತು ತಂಪು. ಅದರ ಪ್ರಖರತೆ ತೀರಾ ಕಡಿಮೆ. ಪ್ರತಿ 33 ಭೂಮಿಯ ದಿನಗಳಿಗೆ ಒಮ್ಮೆ ಕೆ2-18 ಬಿ ತನ್ನ ಕಕ್ಷೆಯ ಸುತ್ತಾಟವನ್ನು ಮುಗಿಸುತ್ತದೆ.

ಮಂಗಳ ಗ್ರಹದಲ್ಲಿನ ಹಿಮದ ಕುಳಿಯ ಅದ್ಭುತ ಚಿತ್ರ ನೋಡಿ

English summary
Water vapor was found in the atmosphere of K2-18b planet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X