ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: 'ಬನ್ನಿ ನಮ್ಮ ಪಕ್ಷಕ್ಕೆ ಸೇರಿ': ಮೋದಿಗೆ ಇಸ್ರೇಲ್‌ ಪ್ರಧಾನಿ ಆಹ್ವಾನ!

|
Google Oneindia Kannada News

ಲಂಡನ್‌, ನವೆಂಬರ್‌ 03: ಪ್ರಧಾನ ಮಂತ್ರಿ ನರೇಂದ್ರ ಮೋದಿ ಗ್ಲಾಸ್ಗೋದಲ್ಲಿ ನಡೆದ COP26 ಜಾಗತಿಕ ಹವಾಮಾನ ಶೃಂಗಸಭೆಯ ಬಳಿಕ ಇಸ್ರೇಲ್‌ ಪ್ರಧಾನಿ ನಫ್ತಾಲಿ ಬೆನೆಟ್‌ ಜೊತೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಇಸ್ರೇಲ್‌ ಪ್ರಧಾನಿ ನಫ್ತಾಲಿ ಬೆನೆಟ್‌ ಪ್ರಧಾನಿ ಮೋದಿಯನ್ನು ತಮ್ಮ ಪಕ್ಷಕ್ಕೆ ಆಹ್ವಾನಿಸಿದ್ದಾರೆ.

ಈ ಔಪಚಾರಿಕ ಸಭೆಯ ಸಂದರ್ಭದಲ್ಲಿ ಇಸ್ರೇಲ್‌ ಪ್ರಧಾನಿ ನಫ್ತಾಲಿ ಬೆನೆಟ್‌, ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ತನ್ನ ಪಕ್ಷಕ್ಕೆ ಆಹ್ವಾನ ಮಾಡುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

COP26 ಶೃಂಗಸಭೆಯಲ್ಲಿ ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್ ಸಂದೇಶ ರವಾನಿಸಿದ ಮೋದಿCOP26 ಶೃಂಗಸಭೆಯಲ್ಲಿ ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್ ಸಂದೇಶ ರವಾನಿಸಿದ ಮೋದಿ

ವಿಡಿಯೋದಲ್ಲಿ ಇಸ್ರೇಲ್‌ ಪ್ರಧಾನಿ ನಫ್ತಾಲಿ ಬೆನೆಟ್‌, "ನೀವು ಇಸ್ರೇಲ್‌ನಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿ," ಎಂದು ಹೇಳಿರುವುದು ಕಂಡು ಬಂದಿದೆ. ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ "ಧನ್ಯವಾದಗಳು" ಎಂದಿದ್ದಾರೆ. ಆ ಕೂಡಲೇ ಹಸ್ತಲಾಘವ ಮಾಡುತ್ತಾ ಬೆನೆಟ್‌, "ಬನ್ನಿ ನಮ್ಮ ಪಕ್ಷಕ್ಕೆ ಸೇರಿ," ಎಂದು ಪ್ರಧಾನಿ ಮೋದಿಗೆ ಆಹ್ವಾನವನ್ನು ನೀಡಿದ್ದಾರೆ. ಪ್ರಧಾನಿ ಮೋದಿ ಮಾತ್ರ ಈ ಸಂದರ್ಭದಲ್ಲಿ ಜೋರಾಗಿ ನಕ್ಕಿದ್ದಾರೆ.

Watch Video: Come join my party, Israeli PM Bennett tells PM Modi

ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಶ್ವದ ಜನಪ್ರಿಯ ವ್ಯಕ್ತಿಗಳ ಪೈಕಿ ಓರ್ವರು ಆಗಿದ್ದಾರೆ. ಪ್ರಸ್ತುತ ಮೋದಿ ಯುಕೆ ಪ್ರವಾಸದಲ್ಲಿ ಇದ್ದು, ಸಮಾವೇಶ, ದ್ವಿಪಕ್ಷೀಯ ಮಾತುಕತೆ, ಶೃಂಗಸಭೆ ಸೇರಿದಂತೆ ಹಲವಾರು ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲೇ ಇಸ್ರೇಲ್‌ ಪ್ರಧಾನಿ ನಫ್ತಾಲಿ ಬೆನೆಟ್‌ ಅವರನ್ನು ಕೂಡಾ ಮೋದಿ ಭೇಟಿ ಆಗಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಇಸ್ರೇಲ್‌ ಪ್ರಧಾನಿ ನಫ್ತಾಲಿ ಬೆನೆಟ್‌, ಮೋದಿಯನ್ನು ಪಕ್ಷಕ್ಕೆ ಆಹ್ವಾನಿಸುತ್ತಾ ಹಾಸ್ಯ ಮಾಡಿದ್ದಾರೆ. ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

'ಭಾರತಕ್ಕೆ ಭೇಟಿ ನೀಡಿ': ಮೋದಿ ಆಹ್ವಾನವನ್ನು ಸ್ವೀಕರಿಸಿದ ಬ್ರಿಟನ್‌ ಪ್ರಧಾನಿ'ಭಾರತಕ್ಕೆ ಭೇಟಿ ನೀಡಿ': ಮೋದಿ ಆಹ್ವಾನವನ್ನು ಸ್ವೀಕರಿಸಿದ ಬ್ರಿಟನ್‌ ಪ್ರಧಾನಿ

ಇನ್ನು ದ್ವಿಪಕ್ಷೀಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್‌ ಪ್ರಧಾನಿ ನಫ್ತಾಲಿ ಬೆನೆಟ್‌ ಜೊತೆಯಲ್ಲಿ ಮಾತನಾಡಿದ ಸಂದರ್ಭದಲ್ಲಿ ಪ್ರಧಾನಿ ಜೊತೆ ಭಾರತದ ವಿದೇಶಾಂಗ ಸಚಿವ ಜೈಶಂಕರ್‌ ಕೂಡಾ ಉಪಸ್ಥಿತಿ ಇದ್ದರು. ಇನ್ನು ಈ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ "ಭಾರತೀಯರು ಇಸ್ರೇಲ್‌ ಜೊತೆಗಿನ ಸ್ನೇಹ ಸಂಬಂಧಕ್ಕೆ ಗೌರವ ನೀಡುತ್ತಾರೆ. ದ್ವಿಪಕ್ಷೀಯ ಸಂಬಂಧ ಹಾಗೂ ವ್ಯವಹಾರ ವೃದ್ಧಿ ಮಾಡಲು ನಾವು ಜೊತೆಯಾಗಿ ಕಾರ್ಯ ನಿರ್ವಹಣೆ ಮಾಡಬೇಕಾಗಿದೆ," ಎಂದು ತಿಳಿಸಿದ್ದಾರೆ.

2070 ರಲ್ಲಿ ನೆಟ್‌ ಜೀರೋ ಗುರಿ

ಗ್ಲಾಸ್ಗೋದಲ್ಲಿ ನಡೆದ COP26 ಜಾಗತಿಕ ಹವಾಮಾನ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, "ಜಾಗತಿಕ ತಾಪಮಾನ ಏರಿಕೆ ಆಗುವುದನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ತಡೆಯುವ ನಿಟ್ಟಿನಲ್ಲಿ ನೆಟ್‌ ಜೀರೋ ಗುರಿಯನ್ನು ಭಾರತ ದೇಶವು 2070 ರಲ್ಲಿ ತಲುಪಲಿದೆ," ಎಂದು ಘೋಷಣೆ ಮಾಡಿದ್ದಾರೆ. ಇನ್ನು ಈ COP26 ಜಾಗತಿಕ ಹವಾಮಾನ ಶೃಂಗಸಭೆಯಲ್ಲಿ ಅಮೆರಿಕ ಹಾಗೂ ಯುರೋಪ್‌ ದೇಶಗಳು ನಿಟ್ಟಿನಲ್ಲಿ ನೆಟ್‌ ಜೀರೋ ಗುರಿಯನ್ನು 2050 ರ ವೇಳೆಗೆ ತಲುಪಲಾಗುತ್ತದೆ ಎಂದು ತಿಳಿಸಿದೆ. ಈ ಸಂದರ್ಭದಲ್ಲೇ ಚೀನಾವು 2060 ರಲ್ಲಿ ನೆಟ್‌ ಜೀರೋ ಗುರಿಯನ್ನು ತಲುಪಲಾಗುವುದು ಎಂದು ತಿಳಿಸಿದೆ. ಆದರೆ "ಭಾರತ ಮಾತ್ರ ಈ ಗುರಿಯನ್ನು ಹೆಚ್ಚುವರಿ ಹತ್ತು ವರ್ಷವನ್ನು ತೆಗೆದುಕೊಳ್ಳಲಿದೆ. ನೆಟ್‌ ಜೀರೋ ಗುರಿಯನ್ನು ಭಾರತ ದೇಶವು 2070 ರಲ್ಲಿ ತಲುಪಲಿದೆ," ಎಂದು ಪ್ರಧಾನಿ ಘೋಷಣೆ ಮಾಡಿದ್ದಾರೆ.

COP26 ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯವರ 5 ಪ್ರತಿಜ್ಞೆಗಳುCOP26 ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯವರ 5 ಪ್ರತಿಜ್ಞೆಗಳು

ಪ್ರಧಾನಿ ಘೋಷಣೆಗಳು

ಇನ್ನು ಇದು ಮಾತ್ರವಲ್ಲದೇ ಪ್ರಧಾನಿ ಮೋದಿ ಹಲವಾರು ಘೋಷಣೆಗಳನ್ನು ಮಾಡಿದ್ದಾರೆ. "2030 ರ ವೇಳೆಗೆ ಭಾರತವು ಅಗತ್ಯವಿರುವ ವಿದ್ಯುತ್‌ನಲ್ಲಿ ಶೇಕಡ 50 ರಷ್ಟನ್ನು ನವೀಕರಣ ಮಾಡಲು ಸಾಧ್ಯವಾಗುವ ಮೂಲದಿಂದ ಉತ್ಪಾದನೆ ಮಾಡಲಿದೆ. 2030 ರ ವೇಳೆಗೆ ದೇಶದಲ್ಲಿ 450-500 ಗಿಗಾವ್ಯಾಟ್‌ನಷ್ಟು ವಿದ್ಯುತ್‌ ಅನ್ನು ನವೀಕರಿಸಬಹುದಾದ ಮೂಲಗಳಿಂದ ಉತ್ಪಾದನೆ ಮಾಡಲಾಗುವುದು. 2030 ರ ವೇಳೆಗೆ ದೇಶದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಶೇಕಡ 45 ರಷ್ಟು ಕಡಿಮೆ ಮಾಡಲಾಗುವುದು. 2030 ರ ವೇಳೆಗೆ ದೇಶದಲ್ಲಿ ರೆಲ್ವೆಯ ಇಂಗಾಲದ ಹೊರಸೂಸುವಿಕೆಯನ್ನು ಶೇಕಡ ನೂರರಷ್ಟು ಕಡಿಮೆ ಮಾಡಲಾಗುವುದು. 2030 ರ ವೇಳೆಗೆ ದೇಶದಲ್ಲಿ ವಾರ್ಷಿಕ ಇಂಗಾಲ ಹೊರಸೂಸುವಿಕೆಯನ್ನು ನೂರು ಕೋಟಿ ಟನ್‌ನಷ್ಟು ಕಡಿಮೆ ಮಾಡಲಾಗುವುದು," ಎಂದು ಘೋಷಣೆಯನ್ನು ಪ್ರಧಾನಿ ಮೋದಿ ಮಾಡಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Come join my party Says Israeli Prime Minister Naftali Bennett to Prime Minister Narendra Modi, Watch Video.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X