ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯ್ ಮಲ್ಯಗೆ ಮತ್ತೆ ಹಿನ್ನಡೆ: ಗಡಿಪಾರು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತ

|
Google Oneindia Kannada News

ಲಂಡನ್, ಏಪ್ರಿಲ್ 8: ಭಾರತಕ್ಕೆ ಗಡಿಪಾರು ಮಾಡಿರುವ ಆದೇಶವನ್ನು ಪ್ರಶ್ನಿಸಲು ದೇಶಭ್ರಷ್ಟ ಆರ್ಥಿಕ ಅಪರಾಧಿ ವಿಜಯ್ ಮಲ್ಯ ಸಲ್ಲಿಸಿದ್ದ ಲಿಖಿತ ಅರ್ಜಿಯನ್ನು ಲಂಡನ್ ನ್ಯಾಯಾಲಯವೊಂದು ತಿರಸ್ಕರಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇದರಿಂದ ಮಲ್ಯ ಅವರ ಪ್ರಕರಣದಲ್ಲಿ ಭಾರತದ ಪ್ರಯತ್ನಕ್ಕೆ ದೊಡ್ಡ ಯಶಸ್ಸು ಲಭಿಸಿದಂತಾಗಿದೆ. ಬ್ರಿಟಿಷ್ ಗೃಹ ಕಾರ್ಯದರ್ಶಿ ಸಹಿ ಹಾಕಿದ್ದ ತಮ್ಮ ಗಡಿಪಾರಿನ ಆದೇಶವನ್ನು ಪ್ರಶ್ನಿಸಲು ಅನುಮತಿ ನೀಡುವಂತೆ ಮಲ್ಯ ಇಂಗ್ಲೆಂಡ್‌ನ ಹೈಕೋರ್ಟ್‌ಗೆ ಲಿಖಿತ ಮನವಿ ಸಲ್ಲಿಸಿದ್ದರು. ಈಗ ಕೋರ್ಟ್ ಅವರ ಲಿಖಿತ ಮನವಿಯನ್ನು ತಿರಸ್ಕರಿಸಿರುವುದರಿಂದ ಮಲ್ಯ ಅವರಿಗೆ ಹಿನ್ನಡೆಯುಂಟಾಗಿದೆ. ಮುಂದೆ ಅವರು ಮೌಖಿಕ ವಿಚಾರಣೆಯನ್ನು ಎದುರಿಸಲಿದ್ದಾರೆ.

ವಿಜಯ್ ಮಲ್ಯಗೆ ಸೇರಿದ ಷೇರು ಮಾರಾಟದಿಂದ 1008 ಕೋಟಿ ವಸೂಲಿ ವಿಜಯ್ ಮಲ್ಯಗೆ ಸೇರಿದ ಷೇರು ಮಾರಾಟದಿಂದ 1008 ಕೋಟಿ ವಸೂಲಿ

ದಿವಾಳಿಯಾಗಿರುವ ಕಿಂಗ್ ಫಿಶರ್ ವಿಮಾನಯಾನ ಸಂಸ್ಥೆಯು ಬ್ಯಾಂಕುಗಳಿಂದ ಮಾಡಿದ ಸಾಲವನ್ನು ಮರಳಿ ತೀರಿಸಲು ತನ್ನ ವಾಸ ವೆಚ್ಚವನ್ನು ಕಡಿತಗೊಳಿಸುವುದಾಗಿ ಮಲ್ಯ ಕೆಲವು ದಿನಗಳ ಹಿಂದೆ ಹೇಳಿದ್ದರು. ಮಲ್ಯ ಅವರಿಗೆ ವಾರಕ್ಕೆ ಗರಿಷ್ಠ 18,325.31 ಪೌಂಡ್ ಜೀವನವೆಚ್ಚ ಭತ್ಯೆಯ ಬಳಕೆಗೆ ಲಂಡನ್‌ನಲ್ಲಿ ಅವಕಾಶ ನೀಡಲಾಗಿತ್ತು. ಅದರಲ್ಲಿ ತಿಂಗಳಿಗೆ 29 ಸಾವಿರ ಪೌಂಡ್ ಕಡಿತಗೊಳಿಸಿಕೊಳ್ಳಿ ಎಂದು ಮಲ್ಯ ಆಫರ್ ನೀಡಿದ್ದರು.

vijay mallya written appeal against extradition order rejected

13,700 ಕೋಟಿ ರೂಪಾಯಿ ಸಾಲ ಪಡೆದು ಮರಳಿಸದೆಯೇ 2016ರಿಂದ ಲಂಡನ್‌ಗೆ ತೆರಳಿ ಆಶ್ರಯ ಪಡೆದಿರುವ ವಿಜಯ್ ಮಲ್ಯ ಅವರನ್ನು ಗಡಿಪಾರು ಮಾಡುವಂತೆ ಲಂಡನ್‌ನ ವೆಸ್ಟ್ ಮಿನಿಸ್ಟರ್ ಕೋರ್ಟ್ ಆದೇಶಿಸಿತ್ತು. ಈ ಆದೇಶಕ್ಕೆ ಬ್ರಿಟನ್ ಕಾರ್ಯದರ್ಶಿ ಸಹಿ ಹಾಕಿದ್ದರು. ಇದನ್ನು ವಿಜಯ್ ಮಲ್ಯ ಮೇಲಿನ ಕೋರ್ಟ್‌ನಲ್ಲಿ ಪ್ರಶ್ನಿಸಲು ಉದ್ದೇಶಿಸಿದ್ದಾರೆ.

English summary
A London court rejected a written appeal by Vijay Mallya challenging his extradition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X