ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಲಲ್ಲೇ ಇದ್ದರೂ ಪರವಾಗಿಲ್ಲ, ದುಡ್ಡು ಕೊಡ್ತೀನಿ ಎಂದ ವಿಜಯ್ ಮಲ್ಯ!

|
Google Oneindia Kannada News

ಲಂಡನ್, ಏಪ್ರಿಲ್ 17: ಅತ್ತ ಸಾಲ ತೀರಿಸಲಾಗದೆ, ಇತ್ತ ಸಿಬ್ಬಂದಿಗೆ ಸಂಬಳವನ್ನೂ ನೀಡಲಾಗದೆ ಮುಚ್ಚುವ ಹಂತಕ್ಕೆ ಬಂದಿರುವ ಜೆಟ್ ಏರ್‌ವೇಸ್ ವಿಮಾನಯಾನ ಸಂಸ್ಥೆ ಬಗ್ಗೆ ಕನಿಕರ ವ್ಯಕ್ತಪಡಿಸಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿ ಉದ್ಯಮಿ ವಿಜಯ್ ಮಲ್ಯ, ತಮ್ಮ ಹಣವನ್ನು ತೆಗೆದುಕೊಂಡು ಜೆಟ್ ಏರ್‌ವೇಸ್ ಉಳಿಸಿ ಎಂದು ಮತ್ತೆ ಹೇಳಿದ್ದಾರೆ.

ಜೆಟ್ ಏರ್‌ವೇಸ್ ಸಂಕಷ್ಟದ ಕುರಿತಂತೆ ಅನುಕಂಪ ತೋರಿಸಿ ಸರಣಿ ಟ್ವೀಟ್ ಮಾಡಿರುವ ವಿಜಯ್ ಮಲ್ಯ, ಒಂದು ಕಾಲದಲ್ಲಿ ಕಿಂಗ್‌ಫಿಶರ್‌ಗೆ ಜೆಟ್ ಏರ್‌ವೇಸ್ ಪ್ರಮುಖ ಸ್ಪರ್ಧಿಯಾಗಿದ್ದರೂ, ಈಗಿನ ಪರಿಸ್ಥಿತಿ ನೋಡಿದಾಗ ವಿಷಾದ ಎನಿಸುತ್ತದೆ. ಏರ್ ಇಂಡಿಯಾ ಉಳಿಸಲು ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ಹಣ ಸಿಗುತ್ತದೆ. ಆದರೆ, ಖಾಸಗಿ ಸಂಸ್ಥೆಗಳಿಗೆ ನೀಡುವುದಿಲ್ಲ. ಈ ತಾರತಮ್ಯ ಸರಿಯಲ್ಲ ಎಂದು ಹರಿಹಾಯ್ದಿದ್ದಾರೆ.

ನನ್ನ ಹಣ ತಗೊಂಡು ಜೆಟ್ ಏರ್‌ವೇಸ್ ಉಳಿಸಿ: ಹೀಗೆಂದಿದ್ದು ವಿಜಯ್ ಮಲ್ಯ! ನನ್ನ ಹಣ ತಗೊಂಡು ಜೆಟ್ ಏರ್‌ವೇಸ್ ಉಳಿಸಿ: ಹೀಗೆಂದಿದ್ದು ವಿಜಯ್ ಮಲ್ಯ!

ತಾವು ಹಣ ಮರುಪಾವತಿಸಲು ಸಿದ್ಧನಾಗಿದ್ದರೂ ತಮ್ಮ ಬಗ್ಗೆ ಮಾಧ್ಯಮಗಳು ಕಥೆ ಕಟ್ಟುತ್ತಿವೆ. ಲಂಡನ್ನೋ ಅಥವಾ ಭಾರತದ ಜೈಲೋ, ಎಲ್ಲಿದ್ದರೂ ತಾವು ಹಣ ಮರಳಿಸಲು ಸಿದ್ಧ. ಆದರೆ, ಬ್ಯಾಂಕುಗಳು ಏಕೆ ಅದನ್ನು ತೆಗೆದುಕೊಳ್ಳಲು ಸಿದ್ಧರಿಲ್ಲ ಎಂದು ಮಲ್ಯ ಮತ್ತೆ ಪ್ರಶ್ನೆ ಹಾಕಿದ್ದಾರೆ.

ಜೆಟ್ ಏರ್‌ವೇಸ್ ಸಂಸ್ಥೆಗೆ ಸಹಾಯ ಮಾಡುವುದಾಗಿ ಮಲ್ಯ ಈ ಹಿಂದೆಯೂ ಹೇಳಿದ್ದರು. ತಾವು ಬ್ಯಾಂಕುಗಳಿಗೆ ಸಾಲ ತೀರಿಸಬೇಕಿದೆ. ಅದಕ್ಕೆ ಆಸ್ತಿ ಮಾರಲು ಸಿದ್ಧನಿರುವುದಾಗಿ ಕರ್ನಾಟಕ ಹೈಕೋರ್ಟ್ ಎದುರು ಒಪ್ಪಿಕೊಂಡಿದ್ದಾಗಿದೆ. ಆ ಹಣವನ್ನು ತೆಗೆದುಕೊಂಡು ಜೆಟ್‌ ಏರ್‌ವೇಸ್‌ಗೆ ನೀಡಿ ಎಂದು ಮಲ್ಯ ಕೋರಿದ್ದರು.

ವಿಜಯ್ ಮಲ್ಯಗೆ ಸೇರಿದ ಷೇರು ಮಾರಾಟದಿಂದ 1008 ಕೋಟಿ ವಸೂಲಿವಿಜಯ್ ಮಲ್ಯಗೆ ಸೇರಿದ ಷೇರು ಮಾರಾಟದಿಂದ 1008 ಕೋಟಿ ವಸೂಲಿ

ಸಾರ್ವಜನಿಕ ಬ್ಯಾಂಕುಗಳು ಮತ್ತು ಇತರೆ ಸಾಲದಾತರಿಗೆ ಹಣ ಮರಳಿಸಲು ನನ್ನ ಸ್ಥಿರ ಆಸ್ತಿಗಳನ್ನು ಗೌರವಾನ್ವಿತ ಕರ್ನಾಟಕ ಹೈಕೋರ್ಟ್ ಮುಂದೆ ಇರಿಸಿದ್ದೇನೆಂದು ಮತ್ತೆ ಪುನರಾವರ್ತಿಸುತ್ತಿದ್ದೇನೆ. ಬ್ಯಾಂಕುಗಳು ನನ್ನ ಹಣವನ್ನೇಕೆ ತೆಗೆದುಕೊಳ್ಳುತ್ತಿಲ್ಲ? ಏನಿಲ್ಲದಿದ್ದರೂ ಅದು ಜೆಟ್ ಎರ್‌ವೇಸ್ ಉಳಿಸಲು ಸಹಾಯಮಾಡುತ್ತದೆ ಎಂದು ಮಲ್ಯ ಹೇಳಿದ್ದರು.

ತಾರತಮ್ಯಕ್ಕೆ ಕ್ಷಮೆ ಇಲ್ಲ

ಒಂದು ಕಾಲದಲ್ಲಿ ಕಿಂಗ್‌ಫಿಶರ್‌ಗೆ ಜೆಟ್‌ ಏರ್‌ವೇಸ್ ಪ್ರಮುಖ ಸ್ಪರ್ಧಿಯಾಗಿದ್ದರೂ ಇಷ್ಟು ದೊಡ್ಡ ಖಾಸಗಿ ವಿಮಾನಯಾನ ಸಂಸ್ಥೆ ವೈಫಲ್ಯ ಕಂಡಿರುವುದಕ್ಕೆ ವಿಷಾದವಾಗುತ್ತಿದೆ. ಏರ್ ಇಂಡಿಯಾವನ್ನು ಮೇಲೆತ್ತಲು ಸರ್ಕಾರ 35 ಕೋಟಿ ಸಾರ್ವಜನಿಕ ನಿಧಿಯನ್ನು ಬಳಸಿಕೊಂಡಿತ್ತು. ಸಾರ್ವಜನಿಕ ವಲಯದ ಸಂಸ್ಥೆಯಾಗಿ ತಾರತಮ್ಯ ಮಾಡುವುದು ಸರಿಯಲ್ಲ ಎಂದು ಮಲ್ಯ ಕಿಡಿಕಾರಿದ್ದಾರೆ.

ಕಿಂಗ್ ಫಿಶರ್‌ ಸಾಲಮಾಡಿತ್ತು

ಕಿಂಗ್ ಫಿಶರ್ ಮೇಲೆ ನಾನು ಭಾರಿ ಪ್ರಮಾಣದ ಹೂಡಿಕೆ ಮಾಡಿದ್ದೆ. ಅದು ಅತ್ಯಂತ ವೇಗವಾಗಿ ದೇಶದ ಅತಿ ದೊಡ್ಡ ಮತ್ತು ಪುರಸ್ಕೃತ ವಿಮಾನಯಾನ ಸಂಸ್ಥೆಯಾಗಿ ಬೆಳೆದಿತ್ತು. ನಿಜ, ಕಿಂಗ್ ಫಿಶರ್ ಪಿಎಸ್‌ಯು ಬ್ಯಾಂಕುಗಳಿಂದಲೂ ಸಾಲ ಪಡೆದಿತ್ತು. ನಾನು ಶೇ 100ರಷ್ಟು ಹಣವನ್ನು ಮರಳಿ ಪಾವತಿಸುವುದಾಗಿ ತಿಳಿಸಿದ್ದೆ. ಆದರೆ, ಅದರ ಬದಲು ನನ್ನ ಮೇಲೆ ಅಪರಾಧಿ ಎಂಬ ಆರೋಪ ಹೊರಿಸಲಾಯಿತು. ವಿಮಾನಯಾನ ಸಂಸ್ಥೆಯ ಕರ್ಮ? ಎಂದು ಬೇಸರ ತೋಡಿಕೊಂಡಿದ್ದಾರೆ.

 ದೇಶ ಭ್ರಷ್ಟ ಆರ್ಥಿಕ ಆಪರಾಧ ಕಾಯ್ದೆ ಭೀಕರ ಎಂದು ಮಲ್ಯ ಬೊಂಬಡಾ ದೇಶ ಭ್ರಷ್ಟ ಆರ್ಥಿಕ ಆಪರಾಧ ಕಾಯ್ದೆ ಭೀಕರ ಎಂದು ಮಲ್ಯ ಬೊಂಬಡಾ

ಸಾಲ ಮರಳಿಸಲು ಸಿದ್ಧ

ಪಿಎಸ್‌ಯು ಬ್ಯಾಂಕುಗಳಿಗೆ ಶೇ 100ರಷ್ಟು ಪಾವತಿಸಲು ಸಿದ್ಧನಿರುವುದಾಗಿ ನಾನು ಪ್ರತಿ ಬಾರಿ ಹೇಳಿದಾಗಲೂ ಮಾಧ್ಯಮಗಳು, ನಾನು ಇಂಗ್ಲೆಂಡ್‌ನಿಂದ ಭಾರತಕ್ಕೆ ಗಡಿಪಾರಾಗುವುದಕ್ಕೆ ಭಯಭೀತನಾಗಿದ್ದೇನೆ, ಸುಳ್ಳು ಹೇಳುತ್ತಿದ್ದೇನೆ ಎಂದು ಹೇಳುತ್ತವೆ. ನಾನು ಲಂಡನ್ ಅಥವಾ ಭಾರತದ ಜೈಲಿನಲ್ಲಿಯೇ ಇರಲಿ, ಸಾಲ ಮರಳಿಸಲು ಬಯಸಿದ್ದೇನೆ. ಆದರೆ, ನಾನು ಆಫರ್ ಮಾಡಿರುವುದನ್ನು ಮೊದಲು ತೆಗೆದುಕೊಳ್ಳಲು ಬ್ಯಾಂಕುಗಳು ಏಕೆ ಸಿದ್ಧವಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಭಾರತ ಹೆಮ್ಮೆ ಪಡಬೇಕು

ನಾವು ಕಠಿಣ ಸ್ಪರ್ಧಿಗಳಾಗಿದ್ದರೂ, ಜೆಟ್ ಏರ್‌ವೇಸ್ ಕಟ್ಟಿದ ನರೇಶ್ ಮತ್ತು ನೀತಾ ಗೋಯಲ್ ಅವರ ಬಗ್ಗೆ ನನ್ನ ಅನುಕಂಪವಿದೆ. ಅವರ ಕುರಿತು ಭಾರತ ಸಾಕಷ್ಟು ಹೆಮ್ಮೆ ಪಡಬೇಕು. ಉತ್ತಮ ವಿಮಾನಸಂಸ್ಥೆ ಎಲ್ಲಡೆ ಗುಣಮಟ್ಟದ ಸಂಪರ್ಕ ಸೇವೆ ಒದಗಿಸುತ್ತಿತ್ತು. ಭಾರತದಲ್ಲಿ ಅನೇಕ ವಿಮಾನಗಳು ದೂಳು ತಿನ್ನುತ್ತಾ ಕೂರುತ್ತಿವೆ, ಏಕೆ? ಎಂದಿದ್ದಾರೆ.

English summary
Fugitive businessman Vijay Mallya has once again said he is willing to pay back money to PSU banks. He felt sorry for Jet Airways debacle which was a major competitor for his Kingfisher Airlines at the time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X