ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯ್ ಮಲ್ಯರ 17 ಬೆಡ್‌ರೂಂನ ಐಷಾರಾಮಿ ಬಂಗಲೆ ಈಗ ಪಾಳು

|
Google Oneindia Kannada News

ಲಂಡನ್, ಜನವರಿ 18: ಇಲೆ ಸೇಂಟ್ ಮಾರ್ಗರಿಟ್‌ನ ಫ್ರೆಂಚ್ ದ್ವೀಪದಲ್ಲಿ 1.3 ಹೆಕ್ಟೇರ್ ಪ್ರದೇಶದಲ್ಲಿರುವ ಮದ್ಯ ಉದ್ಯಮಿ ವಿಜಯ್ ಮಲ್ಯ ಆಸ್ತಿಯನ್ನು ಹರಾಜು ಹಾಕಲು ಅನುಮತಿ ನೀಡುವಂತೆ ಕತಾರ್ ರಾಷ್ಟ್ರೀಯ ಬ್ಯಾಂಕ್ ನ್ಯಾಯಾಲಯಕ್ಕೆ ಮನವಿ ಮಾಡಿದೆ.

ಈ ಜಮೀನಿನಲ್ಲಿರುವ ಬಂಗಲೆಯನ್ನು ವಿಜಯ್ ಮಲ್ಯ ಬಹಳ ಹಿಂದೆಯೇ ಖಾಲಿ ಮಾಡಿದ್ದಾರೆ ಎಂದು ಬ್ಯಾಂಕ್ ತಿಳಿಸಿದೆ. ಬ್ಯಾಂಕ್‌ಗಳಿಂದ ವಿಪರೀತ ಸಾಲ ಮಾಡಿ ಲಂಡನ್‌ಗೆ ಪರಾರಿಯಾಗಿರುವ ವಿಜಯ್ ಮಲ್ಯ ಅವರಿಂದ ವಶಪಡಿಸಿಕೊಳ್ಳಲಾದ ಆಸ್ತಿಗಳನ್ನು ಮಾರಾಟ ಮಾಡಲು ಭಾರತದ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ನ್ಯಾಯಾಲಯವು ಬ್ಯಾಂಕ್‌ಗಳಿಗೆ ಅನುಮತಿ ನೀಡಿತ್ತು.

ವಿಜಯ್ ಮಲ್ಯರನ್ನು ದಿವಾಳಿ ಎಂದು ಘೋಷಿಸಲು ಬ್ಯಾಂಕ್ ಅಪೀಲುವಿಜಯ್ ಮಲ್ಯರನ್ನು ದಿವಾಳಿ ಎಂದು ಘೋಷಿಸಲು ಬ್ಯಾಂಕ್ ಅಪೀಲು

ಫ್ರಾನ್ಸ್‌ನ ಈ ದ್ವೀಪದಲ್ಲಿರುವ ಮಲ್ಯ ಬಂಗಲೆಯಲ್ಲಿ ಸಿನಿಮಾ ಹಾಲ್, ಹೆಲಿಪ್ಯಾಡ್, ನೈಟ್ ಕ್ಲಬ್ ಮತ್ತು 17 ಐಷಾರಾಮಿ ಬೆಡ್‌ರೂಮ್‌ಗಳಿವೆ. ಆದರೆ ಇಲ್ಲಿ ಯಾರೂ ವಾಸಿಸುತ್ತಿಲ್ಲ. ಭಾರಿ ಮೊತ್ತದ ಸಾಲದ ಹಣದಲ್ಲಿ ಖರೀದಿ ಮಾಡಿದ ಈ ಬಂಗಲೆಯನ್ನು ಮಾರಿದರೂ ಅಷ್ಟು ಮೊತ್ತ ವಾಪಸ್ ಸಿಗುವುದಿಲ್ಲ.

ಬಂಗಲೆ ಖರೀದಿಗೆ 213 ಕೋಟಿ ರೂ ಸಾಲ

ಬಂಗಲೆ ಖರೀದಿಗೆ 213 ಕೋಟಿ ರೂ ಸಾಲ

ಮಲ್ಯ ಅವರು 2008ರಲ್ಲಿ ಕತಾರ್ ರಾಷ್ಟ್ರೀಯ ಬ್ಯಾಂಕ್‌ನ ಅನ್ಸ್‌ಬಾಶೆರ್ ಆಂಡ್ ಕೋ ಘಟಕದಿಂದ ತಮ್ಮ ಗಿಜ್ಮೋ ಇನ್‌ವೆಸ್ಟ್ ಎಸ್‌ಎ ಕಂಪೆನಿ ಮೂಲಕ 27 ಮಿಲಿಯನ್ ಯುರೋ (ಸುಮಾರು 210 ಮಿಲಿಯನ್ ರೂಪಾಯಿ) ಸಾಲ ಪಡೆದು ಲೆ ಗ್ರ್ಯಾಂಡ್ ಜಾರ್ಡಿನ್ ಬಂಗಲೆಯನ್ನು ಖರೀದಿಸಿದ್ದರು. ಆದರೆ ಇದುವರೆಗೂ ಗಿಜ್ಮೋ ಕಂಪೆನಿ ಸಾಲ ಮರುಪಾವತಿ ಮಾಡಿಲ್ಲ ಎಂದು ಲಂಡನ್ ಹೈಕೋರ್ಟ್‌ಗೆ ಬ್ಯಾಂಕ್ ತಿಳಿಸಿದೆ.

ದೋಣಿ ಮಾರಾಟಕ್ಕೆ ಅನುಮತಿ ನೀಡಿ

ದೋಣಿ ಮಾರಾಟಕ್ಕೆ ಅನುಮತಿ ನೀಡಿ

ಅಲ್ಲದೆ ಮಲ್ಯಗೆ ಸೇರಿದ 50 ಮೀಟರ್ ಉದ್ದದ ಐಷಾರಾಮಿ ಸೂಪರ್‌ಯಾಟ್ ದೋಣಿಯನ್ನು ಕೂಡ ಮಾರಾಟ ಮಾಡಲು ಆದೇಶಿಸುವಂತೆ ಬ್ಯಾಂಕ್ ಮನವಿ ಮಾಡಿದೆ. ಈ ದೋಣಿಯು ಐದು ಮಿಲಿಯನ್ ಯುರೋ (ಅಂದಾಜು 39 ಮಿಲಿಯನ್ ರೂಪಾಯಿ) ಬೆಲೆ ಬಾಳುತ್ತದೆ. ಸೂಪರ್‌ಯಾಟ್‌ನ ಚಾಲಕರಿಗೆ ವೇತನ ನೀಡದ ಹಿನ್ನೆಲೆಯಲ್ಲಿ 2018ರ ಜನವರಿಯಲ್ಲಿ ಮರಿನ್ ವಿಮಾನ ಕಂಪೆನಿ ದೋಣಿಯನ್ನು ವಶಪಡಿಸಿಕೊಂಡಿತ್ತು.

'New Year, Same Beer' ಎಂದ ಮದ್ಯದ ದೊರೆ ಮಲ್ಯಗೆ ಮರ್ಮಾಘಾತ!'New Year, Same Beer' ಎಂದ ಮದ್ಯದ ದೊರೆ ಮಲ್ಯಗೆ ಮರ್ಮಾಘಾತ!

710 ಕೋಟಿ ರೂ ವಂಚನೆ

710 ಕೋಟಿ ರೂ ವಂಚನೆ

ಡಿಯಾಜಿಯೋ ಪಿಎಲ್‌ಸಿಯಿಂದ 100 ಮಿಲಿಯನ್ ಡಾಲರ್ (710 ಕೋಟಿ ರೂ) ವಂಚನೆ ಮತ್ತು ಭಾರತದ ಬ್ಯಾಂಕುಗಳಿಗೆ 1.2 ಬಿಲಿಯನ್ ಡಾಲರ್ (8,529 ಕೋಟಿ ರೂ) ವಂಚನೆ ಮಾಡಿದ ಆರೋಪ ಎದುರಿಸುತ್ತಿದ್ದಾಗ 2015 ಸೆಪ್ಟೆಂಬರ್‌ನಲ್ಲಿ ಫ್ರಾನ್ಸ್‌ನ ದ್ವೀಪದಲ್ಲಿರುವ ಮಲ್ಯಗೆ ಸೇರಿದ ಬಂಗಲೆ ದುರಸ್ತಿಯಲ್ಲಿತ್ತು ಎಂದು ಬ್ಯಾಂಕ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.

ಕುಸಿದ ಬಂಗಲೆ ಮೌಲ್ಯ

ಕುಸಿದ ಬಂಗಲೆ ಮೌಲ್ಯ

ಒಳ ವಿನ್ಯಾಸಕಾರರು ಮತ್ತು ಬಿಲ್ಡರ್‌ಗಳಿಗೆ ಬಂಗಲೆ ದುರಸ್ತಿ ಮೊತ್ತ ಪಾವತಿಸಿರಲಿಲ್ಲ. ಸಾಲ ಮರುಪಾವತಿಯ ಅವಧಿಯನ್ನು ವಿಸ್ತರಿಸುವಂತೆ ಮಲ್ಯ ಮನವಿ ಮಾಡಿದ್ದ ಸಂದರ್ಭದಲ್ಲಿ ಬ್ಯಾಂಕ್, ಆಸ್ತಿಯನ್ನು ಪರಿಶೀಲಿಸಲು ತೆರಳಿತ್ತು. ಆಗ ಆಸ್ತಿಯ ಮೌಲ್ಯ 10 ಮಿಲಿಯನ್ ಯುರೋಗೆ (78 ಕೋಟಿ ರೂ) ಇಳಿದಿರುವುದನ್ನು ರಿಯಲ್ ಎಸ್ಟೇಟ್ ಏಜೆಂಟ್ ಗಮನಿಸಿದ್ದರು ಎಂದು ಬ್ಯಾಂಕ್ ಹೇಳಿದೆ.

ವಿಜಯ್ ಮಲ್ಯ ಭಾರತಕ್ಕೆ ಹಸ್ತಾಂತರ ಸದ್ಯಕ್ಕಿಲ್ಲವಿಜಯ್ ಮಲ್ಯ ಭಾರತಕ್ಕೆ ಹಸ್ತಾಂತರ ಸದ್ಯಕ್ಕಿಲ್ಲ

English summary
Qatar National Bank wants to auction Vijay Mallya's 17 bedroom bungalow which is in French island.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X