• search
  • Live TV
ಲಂಡನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬ್ರಿಟನ್‌ನಲ್ಲಿಯೇ ಉಳಿಯಲು ವಿಜಯ್ ಮಲ್ಯ 'ಮತ್ತೊಂದು ಮಾರ್ಗ'ದ ತಂತ್ರ

|
Google Oneindia Kannada News

ಲಂಡನ್, ಜನವರಿ 23: ಭಾರತದಿಂದ ಪರಾರಿಯಾಗಿ ಬ್ರಿಟನ್‌ನಲ್ಲಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯ, ಯುನೈಟೆಡ್ ಕಿಂಗ್‌ಡಮ್‌ನಲ್ಲಿಯೇ ಉಳಿದುಕೊಳ್ಳಲು ನೆರವಾಗುವ 'ಇನ್ನೊಂದು ಮಾರ್ಗ'ಕ್ಕಾಗಿ ಅಲ್ಲಿನ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಭಾರತದಲ್ಲಿ ಬ್ಯಾಂಕುಗಳಿಂದ ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ವಂಚಿಸಿದ ಆರೋಪದಲ್ಲಿ ದೇಶಭ್ರಷ್ಟ ಆರ್ಥಿಕ ಅಪರಾಧಿ ಹಣೆಪಟ್ಟಿ ಅಂಟಿಸಿಕೊಂಡಿರುವ ಮದ್ಯ ದೊರೆ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಬ್ರಿಟನ್ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದರ ವಿರುದ್ಧ ಬ್ರಿಟನ್ ಸುಪ್ರೀಂಕೋರ್ಟ್‌ನಲ್ಲಿ ವಿಜಯ್ ಮಲ್ಯ ಕಾನೂನು ಹೋರಾಟ ನಡೆಸಿದ್ದು, ಕಳೆದ ವರ್ಷ ಮಲ್ಯ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.

Fact Check: ಬಿಜೆಪಿಗೆ 35 ಕೋಟಿ ರೂ ಚೆಕ್ ನೀಡಿದ ವಿಜಯ್ ಮಲ್ಯFact Check: ಬಿಜೆಪಿಗೆ 35 ಕೋಟಿ ರೂ ಚೆಕ್ ನೀಡಿದ ವಿಜಯ್ ಮಲ್ಯ

ಕಿಂಗ್ ಫಿಶರ್ ಏರ್‌ಲೈನ್ಸ್ ವಿಮಾನ ಸಂಸ್ಥೆಯ ಹೆಸರಿನಲ್ಲಿ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಭಾರತಕ್ಕೆ ಗಡಿಪಾರು ಮಾಡುವ ಆದೇಶಕ್ಕೆ ಪ್ರೀತಿ ಪಟೇಲ್ ಸಹಿ ಹಾಕುವವರೆಗೂ ಬ್ರಿಟನ್‌ನಲ್ಲಿ ಜಾಮೀನಿನ ಮೇಲೆ ಉಳಿದುಕೊಳ್ಳಲು ಅವಕಾಶವಿದೆ.

ಗಡಿಪಾರು ಆದೇಶ ಅಧಿಕೃತವಾಗಿ ಹೊರಬರುವವರೆಗೂ ಗೋಪ್ಯ ಕಾನೂನು ಪ್ರಕ್ರಿಯೆ ಹಿನ್ನೆಲೆಯಲ್ಲಿ ನಡೆಯುತ್ತಲೇ ಇರುತ್ತದೆ ಎಂದು ಬ್ರಿಟನ್ ಗೃಹ ಕಚೇರಿ ಖಚಿತಪಡಿಸಿದೆ. ಹೀಗಾಗಿ ಮಲ್ಯ ಅವರು ಬ್ರಿಟನ್‌ನಲ್ಲಿ ರಾಜಾಶ್ರಯ ಕೋರಿದ್ದಾರೆ ಎಂಬ ಅನುಮಾನ ಹೆಚ್ಚಿಸಿದೆ. ಇದನ್ನು ಗೃಹ ಕಚೇರಿ ಖಚಿತಪಡಿಸಿಲ್ಲ ಅಥವಾ ನಿರಾಕರಿಸಿಯೂ ಇಲ್ಲ.

ಅಗ್ರಿ ಗೋಲ್ಡ್ 4109 ಕೋಟಿ ಆಸ್ತಿ ಇಡಿಯಿಂದ ಜಪ್ತಿಅಗ್ರಿ ಗೋಲ್ಡ್ 4109 ಕೋಟಿ ಆಸ್ತಿ ಇಡಿಯಿಂದ ಜಪ್ತಿ

ಮಲ್ಯರ ಗಡಿಪಾರು ಆದೇಶವನ್ನು ಎತ್ತಿಹಿಡಿಯಲಾಗಿದ್ದರೂ, ಅವರು ರಾಜಾಶ್ರಯ ಪಡೆಯಲು ಪ್ರೀತಿ ಪಟೇಲ್ ಅವರಿಗೆ ಅರ್ಜಿ ಸಲ್ಲಿಸಲು ಮತ್ತೊಂದು ಮಾರ್ಗವಿದೆ ಎಂದು ಮಲ್ಯ ಪರ ವಕೀಲ ಫಿಲಿಪ್ ಮಾರ್ಷಲ್ ತಿಳಿಸಿದ್ದಾರೆ. ಗಡಿಪಾರು ಮನವಿಗೆ ಮುನ್ನ ಮಲ್ಯ ರಾಜಾಶ್ರಯ ಕೋರಿದ್ದರೋ ಅಥವಾ ಬಳಿಕವೋ ಎನ್ನುವುದರ ಮೇಲೆ ಆಶ್ರಯದ ಕುರಿತಾದ ನಿರ್ಧಾರ ಅವಲಂಬಿತವಾಗಿದೆ.

English summary
Vijay Mallya has applied for 'Another Route' to stay in the UK after his legal challenge to the Indian government's extradition request was failed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X